ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಲೆನಾಡಿನಲ್ಲಿ ಸಂಪರ್ಕ ಸಮಸ್ಯೆ: ಗ್ರಾಮ ವಾಸ್ತವ್ಯಕ್ಕೆ ಎಚ್ಡಿಕೆ ನಿರ್ಧಾರ

By Nayana
|
Google Oneindia Kannada News

Recommended Video

ಮಲೆನಾಡಿನಲ್ಲಿ 2 ದಿನಗಳಿಗೆ ಗ್ರಾಮ ವಾಸ್ತವ್ಯ ಹೂಡಲು ಎಚ್ ಡಿ ಕೆ ನಿರ್ಧಾರ | Oneindia Kannada

ಬೆಂಗಳೂರು, ಜು.10: ತೀರ್ಥಹಳ್ಳಿಯಲ್ಲಿ ಬಳಿ ವಿದ್ಯಾರ್ಥಿನಿಯೊಬ್ಬಳು ನೀರಿನಲ್ಲಿ ಕೊಚ್ಚಿ ಹೋದ ಘಟನೆ ಹಿನ್ನೆಲೆಯಲ್ಲಿ, ಮಲೆನಾಡು ಪ್ರದೇಶದ ಸಂಪುರ್ಣ ಸಂಪರ್ಕ ವ್ಯವಸ್ಥೆಯನ್ನು ಪರಿಶೀಲಿಸಿ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಎರಡು ದಿನಗಳ ಕಾಲ ಗ್ರಾಮ ವಾಸ್ತವ್ಯ ಮಾಡಲು ನಿರ್ಧರಿಸಿದ್ದಾರೆ.

ಮಂಗಳವಾರ ವಿಧಾನಸಭೆಯಲ್ಲಿ ಶೂನ್ಯವೇಳೆಯಲ್ಲಿ ತೀರ್ಥಹಳ್ಳಿಯಲ್ಲಿ ಶಾಸಕ ಅರಗ ಜ್ಞಾನೇಂದ್ರ ವಿಷಯ ಪ್ರಸ್ತಾಪಸಿ ತೀರ್ಥಹಳ್ಳಿಯಲ್ಲಿ ಸೋಮವಾರ ಆಶಿಕಾ ನೀರಿನಲ್ಲಿ ತಾಯಿ ಎದುರೇ ಕೊಚ್ಚಿ ಹೋಗಿದ್ದಾಳೆ, ಇಂತಹ ಹಲವಾರು ಘಟನೆಗಳು ನಡೆಯುತ್ತಿದೆ.

ರೈತರ ಆಕ್ರೋಶವನ್ನು ಶಮನಗೊಳಿಸುತ್ತಾರಾ ಕುಮಾರಸ್ವಾಮಿ? ರೈತರ ಆಕ್ರೋಶವನ್ನು ಶಮನಗೊಳಿಸುತ್ತಾರಾ ಕುಮಾರಸ್ವಾಮಿ?

ಮಲೆನಾಡ ಭಾಗದಲ್ಲಿ ಕಾಲು ಸಂಕಗಳ ದುರಸ್ತಿ ಕಾರ್ಯ ಕೈಗೊಳ್ಳಬೇಕಾಗಿದ್ದು, ಇಲ್ಲಸಿದ್ದರೆ ಮಳೆಗಾಲದಲ್ಲಿ ಇನ್ನಷ್ಟು ವಿದ್ಯಾರ್ಥಿಗಳು ಜೀವ ಕಳೆದುಕೊಳ್ಳುತ್ತಾರೆ ಎಂದು ಸರ್ಕಾರದ ಗಮನ ಸೆಳೆದರು.

CM will stay at highlands to address transport issues in interior villages

ಇದಕ್ಕೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ ಮಲೆನಾಡು ಭಾಗದಲ್ಲಿ ಭಾರಿ ಮಳೆಯಿಂದ ಜನಜೀವನ ಅಸ್ತವ್ಯವಸ್ಥವಾಗಿರುವುದು ಗಮನಕ್ಕೆ ಬಂದಿದೆ. ತೀರ್ಥಹಳ್ಳಿಯಲ್ಲಿ ವಿದ್ಯಾರ್ಥಿನಿಯೊಬ್ಬಳು ಹಳ್ಳದಲ್ಲಿ ಕೊಚ್ಚಿ ಹೋಗಿರುವ ಕುರಿತಮತೆ ಮಾಧ್ಯಮಗಳಲ್ಲಿ ಮಾಧ್ಯಮದಲ್ಲಿ ವರದಿ ಗಮನಿಸಿದ್ದೇನೆ,

ಮಂಗಳವಾರ ಬೆಳಗ್ಗೆಯೇ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಆ ಭಾಗದ ಕಾಲುಸಂಕಗಳ ದುರಸ್ತಿ ತುರ್ತಾಗಿ ಕೈಗೊಳ್ಳುವಂತೆ ತಿಳಿಸಿದ್ದೇನೆ ಅಷ್ಟೇ ಮಾತ್ರವಲ್ಲ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಸಂಪರ್ಕ ವ್ಯವಸ್ಥೆ ಸರಿಪಡಿಸಲು ತುರ್ತಾಗಿ ಕ್ರಮ ಕೈಗೊಳ್ಳಲು ಆದೇಶಿಸಿದ್ದೇನೆ.

ವಿಧಾನ ಮಂಡಲ ಅಧಿವೇಶನ ಮುಗಿದ ಬಳಿಕ ಮಲೆನಾಡು ಭಾಗದಲ್ಲಿ ಗ್ರಾಮ ವಾಸ್ತವ್ಯ ನಡೆಸಿ, ಅಲ್ಲಿನ ವ , ಮಲೆನಾಡು ಜಿಲ್ಲೆಗಳಲ್ಲಿ ಕ್ರಮ ಸದ್ಯ ವಿಧಾನ ಮಂಡಲು ಅಧಿವೇಶನ ಮುಗಿದ ತಕ್ಷಣ ಅಲ್ಲಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಯೋಜನೆ ರೂಪಿಸಲಾಗುವುದು ಎಂದರು. ಶಿವಮೊಗ್ಗ ಜಿಲ್ಲಾಧಿಕಾರಿ ಆಶಿಕಾ ಅವರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಿದ್ದಾರೆ.

English summary
Chief minister H.D.Kumaraswamy has announced that he will stay for two days to study problems in highlands districts of the state after ongoing assembly session conclude.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X