ಶಿವಮೊಗ್ಗ ಜಿಲ್ಲೆ ಅಭಿವೃದ್ಧಿಗೆ ಸಿದ್ದರಾಮಯ್ಯ ಸರ್ಕಾರದ ಕೊಡುಗೆಗಳು

Posted By:
Subscribe to Oneindia Kannada

ಶಿವಮೊಗ್ಗ, ಜನವರಿ 06: ಸಿದ್ದರಾಮಯ್ಯ ಅವರ ನವ ಕರ್ನಾಟಕ ನಿರ್ಮಾಣ ಯಾತ್ರೆ ಇಂದು ಶಿವಮೊಗ್ಗ ಜಿಲ್ಲೆ ತಲುಪಿದೆ. ಜಿಲ್ಲೆಯಲ್ಲಿ ಮೂರು ಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ.

ಜಿಲ್ಲೆಯ ಪ್ರಮುಖ ರಾಜಕೀಯ ಕ್ಷೇತ್ರಗಳಾದ ಸಾಗರ, ತೀರ್ಥಹಳ್ಳಿ, ಶಿವಮೊಗ್ಗ ನಗರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದು, ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಯಡಿಯೂರಪ್ಪ ಅವರ ಸ್ವಕ್ಷೇತ್ರವಾದ ಶಿವಮೊಗ್ಗ ಜಿಲ್ಲೆಯಲ್ಲಿ ಸಿದ್ದರಾಮಯ್ಯ ಅವರು ಏನು ಮೋಡಿ ಮಾಡುತ್ತಾರೆ ಎಂಬುದು ಕುತೂಹಲ. ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರ ಜೊತೆಗೆ ಸ್ಥಳೀಯ ಶಾಸಕರು, ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ನವಕರ್ನಾಟಕ ನಿರ್ಮಾಣ ಯಾತ್ರೆ

ತಮ್ಮ ಭಾಷಣದಲ್ಲಿ ಶಿವಮೊಗ್ಗ ಜಿಲ್ಲೆಗೆ ಸರ್ಕಾರ ನೀಡಿರುವ ಕೊಡುಗೆಗಳ ಪ್ರಸ್ತಾಪ ಮಾಡಲಿರುವ ಸಿದ್ದರಾಮಯ್ಯ ಅವರು ಯಡಿಯೂರಪ್ಪ ಅವರ ವಿರುದ್ಧ ವಾಗ್ದಾಳಿ ನಡೆಸಲಿದ್ದಾರೆ ಎಂದು ಊಹಿಸಲಾಗಿದೆ.

ಶಿವಮೊಗ್ಗ ಜಿಲ್ಲೆಗೆ ಸರ್ಕಾರ ನೀಡಿರುವ ಕೊಡುಗೆಗಳ ಪಟ್ಟಿ ಇಲ್ಲಿದೆ...

ತೋಟಗಾರಿಕಾ ವಿವಿಗೆ 777 ಎಕರೆ ಭೂಮಿ

ತೋಟಗಾರಿಕಾ ವಿವಿಗೆ 777 ಎಕರೆ ಭೂಮಿ

ಸರ್ಕಾರಿ ಭೂಮಿಯಲ್ಲಿ ವಾಸವಿದ್ದು ಹಕುಪತ್ರ ಹೊಂದಿಲ್ಲದವರಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷದ ಅವಧಿಯಲ್ಲಿ 94ಸಿ ಯಡಿ ಗ್ರಾಮಾಂತರ ಪ್ರದೇಶದಲ್ಲಿ 7,343 ಹಾಗೂ 94ಸಿಸಿಯಡಿ ನಗರ ಪ್ರದೇಶದಲ್ಲಿ 1,447 ಹಕ್ಕುಪತ್ರಗಳನ್ನು ವಿತರಿಸಲಾಗಿದೆ. ಶಿವಮೊಗ್ಗ ಕೃಷಿ ಹಾಗೂ ತೋಟಗಾರಿಕೆ ವಿವಿಗೆ ಆನಂದಪುರ ಬಳಿಯ ಇರುವಕ್ಕಿಯಲ್ಲಿ ಸರ್ಕಾರ 777 ಎಕರೆ ಭೂಮಿ ಮಂಜೂರು ಮಾಡಿದೆ. 155.33 ಕೋಟಿ ರೂ. ಅನುದಾನವನ್ನೂ ಮಂಜೂರು ಮಾಡಿದೆ.

71,240.6 ಕ್ವಿಂಟಾಲ್ ಬಿತ್ತನೆ ಬೀಜ ವಿತರಣೆ

71,240.6 ಕ್ವಿಂಟಾಲ್ ಬಿತ್ತನೆ ಬೀಜ ವಿತರಣೆ

ಕೃಷಿ ಯಂತ್ರೋಪಕರಣ ಖರೀದಿಗಾಗಿ ನಾಲ್ಕು ವರ್ಷಗಳಲ್ಲಿ ರೂ. 6,388.06 ಲಕ್ಷ ಸಹಾಯಧನವನ್ನು ವಿನಿಯೋಗಿಸಿಕೊಂಡು ಒಟ್ಟು 4,095 ಪವರ್ ಟಿಲ್ಲರ್‍ಗಳನ್ನು ಹಾಗೂ 20,709 ವಿವಿಧ ಹೈಟೆಕ್ ಯಂತ್ರೋಪಕರಣಗಳನ್ನು ವಿತರಿಸಲಾಗಿರುತ್ತದೆ. ರಿಯಾಯತಿ ದರದಲ್ಲಿ ಬಿತ್ತನೆ ಬೀಜವನ್ನು ಜಿಲ್ಲೆಯ 40 ರೈತ ಸಂಪರ್ಕ ಕೇಂದ್ರಗಳು ಹಾಗೂ ಹೆಚ್ಚುವರಿ 47 ಕೇಂದ್ರಗಳ ಮುಖಾಂತರ ಸಕಾಲದಲ್ಲಿ ವಿತರಿಸಲಾಗುತ್ತಿದೆ. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 71,240.6 ಕ್ವಿಂಟಾಲ್ ಬಿತ್ತನೆ ಬೀಜವನ್ನು ರಿಯಾಯತಿ ದರಲ್ಲಿ ವಿತರಿಸಲಾಗಿರುತ್ತದೆ.

ತೋಟಗಾರಿಕೆಗೆ 1,525 ಲಕ್ಷ ಸಹಾಯಧನ

ತೋಟಗಾರಿಕೆಗೆ 1,525 ಲಕ್ಷ ಸಹಾಯಧನ

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯ ಅಡಿಯಲ್ಲಿ, ಕಳೆದ 4 ವರ್ಷಗಳಲ್ಲಿ 40,387 ಫಲಾನುಭವಿಗಳಿಗೆ ರೂ. 2,148.88 ಲಕ್ಷಗಳ ಸಹಾಯಧನವನ್ನು ನೀಡಲಾಗಿದೆ. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯನ್ವಯ ಹನಿ ನೀರಾವರಿಯಲ್ಲಿ ಕಳೆದ 4 ವರ್ಷಗಳಲ್ಲಿ ರೂ. 1,612.24 ಲಕ್ಷಗಳ ಸಹಾಯಧನವನ್ನು ನೀಡಲಾಗಿದೆ. ತೋಟಗಾರಿಕಾ ಪ್ರದೇಶ ವಿಸ್ತರಣೆ, ಕೃಷಿಹೊಂಡ ನಿರ್ಮಾಣ, ಪ್ಯಾಕ್‍ಹೌಸ್, ಪ್ರಾಥಮಿಕ ಸಂಸ್ಕರಣಾ ಘಟಕವನ್ನು ನಿರ್ಮಿಸಿದ ರೈತರಿಗೆ ಸಹಾಯಧನವನ್ನು ನೀಡಲಾಗುತ್ತಿದ್ದು, ಕಳೆದ 4 ವರ್ಷಗಳಲ್ಲಿ 7,226 ಫಲಾನುಭವಿಗಳಿಗೆ ರೂ. 1,525.51 ಲಕ್ಷಗಳ ಸಹಾಯಧನವನ್ನು ನೀಡಲಾಗಿದೆ.

ವಿದ್ಯಾರ್ಥಿಗಳಿಗೆ ಕೋಟ್ಯಾಂತರ ಅನುದಾನ

ವಿದ್ಯಾರ್ಥಿಗಳಿಗೆ ಕೋಟ್ಯಾಂತರ ಅನುದಾನ

ಪಶುಪಾಲನಾ ಘಟಕಗಳ ಸ್ಥಾಪನೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ. 50 ಹಾಗೂ ಇತರೆ ಜನಾಂಗದವರಿಗೆ ಶೇ. 25 ಸಹಾಯಧನ ಒದಗಿಸಿ ಒಟ್ಟು ಜಿಲ್ಲೆಗೆ ವಿವಿಧ ಘಟಕಗಳಿಗೆ ರೂ. 262.13 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯಲ್ಲಿ 14,835 ವಿದ್ಯಾರ್ಥಿಗಳಿಗೆ ಬೈಸಿಕಲ್ ವಿತರಿಸಲಾಗಿದೆ. 1,34,325 ವಿದ್ಯಾರ್ಥಿಗಳಿಗೆ ಒಂದು ಜೊತೆ ಬೂಟು ಮತ್ತು ಎರಡು ಜೊತೆ ಕಾಲುಚೀಲ ವಿತರಿಸಲಾಗಿದ್ದು, ಒಟ್ಟು ರೂ. 3,23,76,850 ವೆಚ್ಚ ಮಾಡಲಾಗಿದೆ. 1,39,737 ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರವನ್ನು ನೀಡಲಾಗಿದೆ.

ಕೆರೆ ಹೂಳೆತ್ತಲು 5,127 ಲಕ್ಷ

ಕೆರೆ ಹೂಳೆತ್ತಲು 5,127 ಲಕ್ಷ

ಶಿವಮೊಗ್ಗ ಜಿಲ್ಲೆಯಲ್ಲಿ ನಾಲ್ಕು ವರ್ಷಗಳಲ್ಲಿ ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ 3,357 ವೈಯುಕ್ತಿಕ ಫಲಾನುಭವಿಗಳ ಜಮೀನಿನಲ್ಲಿ ಅಡಿಕೆ ತೋಟ ನಿರ್ಮಾಣ ಮಾಡಿದ್ದು, ಸುಮಾರು ರೂ. 2,350.00 ಲಕ್ಷ ವೆಚ್ಚ ಭರಿಸಲಾಗಿದೆ. ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯಡಿಲ್ಲಿ 1,277 ಕೆರೆಗಳ ಹೂಳೆತ್ತುವ/ ಕೋಡಿ ನಿರ್ಮಾಣ ಕಾಮಗಾರಿಗಳು ಪೂರ್ಣಗೊಂಡಿದ್ದು, 1,319 ಕಾಮಗಾರಿಗಳು ಪ್ರಗತಿಯಲ್ಲಿರುತ್ತದೆ. ಒಟ್ಟು ರೂ. 5,127 ಲಕ್ಷಗಳ ವೆಚ್ಚ ಭರಿಸಲಾಗಿರುತ್ತದೆ.

ಕುಡಿಯುವ ನೀರಿಗೆ 87.71 ಕೋಟಿ

ಕುಡಿಯುವ ನೀರಿಗೆ 87.71 ಕೋಟಿ

ಗಂಗಾ ಕಲ್ಯಾಣ ಯೋಜನೆಯಲ್ಲಿ ಹಿಂದುಳಿದ ವರ್ಗಗಳ ಸಣ್ಣ ಪ್ರಮಾಣದ ರೈತರ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸಲು 1,408 ಜನ ಫಲಾನುಭವಿಗಳಿಗೆ 521.85 ಲಕ್ಷ ರೂ.ಗಳನ್ನು ವಿತರಿಸಲಾಗಿದ್ದು ಜಿಲ್ಲೆಯ 15,532 ಜನ ಹಿಂದುಳಿದ ವರ್ಗಗಳ ಫಲಾನುಭವಿಗಳಿಗೆ 1,410.82 ಲಕ್ಷ ರೂ. ಸಾಲ ಮನ್ನಾ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಯ ತಾಲೂಕಿನಲ್ಲಿ 32 ಕೆರೆಗಳಿಗೆ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ ತುಂಗಾ ನದಿ ನೀರನ್ನು ಐಹೊಳೆ, ಬಾರೇಹಳ್ಳಿ ಮತ್ತು ಗೌಡನಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ರೂ. 87.71 ಕೋಟಿಗಳ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದ್ದು. ರೂ. 73.12 ಕೋಟಿ ವೆಚ್ಚ ಮಾಡಲಾಗಿರುತ್ತದೆ.

ವಿದ್ಯಾರ್ಥಿಗಳ ಊಟ, ವಸತಿಗೆ 1,216 ಲಕ್ಷ

ವಿದ್ಯಾರ್ಥಿಗಳ ಊಟ, ವಸತಿಗೆ 1,216 ಲಕ್ಷ

ಗೊಂದಿಕಾಲುವೆ ಆಧುನೀಕರಣ ಯೋಜನೆಯ ಭಾಗವಾಗಿ 130 ಕೋಟಿ ರೂ.ಗಳ ವೆಚ್ಚದಲ್ಲಿ ಗೊಂದಿ ಅಣೆಕಟ್ಟೆ ನೀರಾವರಿ ಕಾಲುವೆಗಳ ಸಮಗ್ರ ಆಧುನೀಕರಣ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಭದ್ರಾ ಜಲಾಶಯ ವ್ಯಾಪ್ತಿಯಲ್ಲಿ ಬರುವ ಈ ಅಣೆಕಟ್ಟೆಯು 14.7 ಕಿ.ಮೀ. ಎಡದಂಡೆ ಮತ್ತು 74.4 ಕಿ.ಮೀ., ಬಲದಂಡೆ ಕಾಲುವೆ ಒಳಗೊಂಡಿದೆ. ಈ ಅಣೆಕಟ್ಟೆಯು 4,600 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುತ್ತದೆ. ವಿದ್ಯಾಸಿರಿ ಯೋಜನೆಯಡಿ ವಿದ್ಯಾರ್ಥಿ ನಿಲಯ ಸೌಲಭ್ಯ ದೊರೆಯದ ಮೆಟ್ರಿಕ್ ನಂತರದ 14,274 ವಿದ್ಯಾರ್ಥಿಗಳಿಗೆ ಒಟ್ಟು 1,216.07 ಲಕ್ಷ ರೂ.ಗಳನ್ನು ಅವರ ಊಟ ಮತ್ತು ವಸತಿಗಾಗಿ ಮಂಜೂರು ಮಾಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
CM Siddaramaiah is in Shivamogga today. He is inaugurating crores worth development programs in Shivamogga district

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ