'ಆರ್‌ಎಸ್‌ಎಸ್‌ ನಿಷೇಧಿಸಲು ಸಿದ್ದರಾಮಯ್ಯರಿಂದ ಸಾಧ್ಯವಾ?'

Posted By: ಶಿವಮೊಗ್ಗ ಪ್ರತಿನಿಧಿ
Subscribe to Oneindia Kannada

ಶಿವಮೊಗ್ಗ, ಮಾರ್ಚ್ 11: 'ಇಂದಿರಾ ಗಾಂಧಿ ಅವರ ತಂದೆ ನೆಹರೂ ಕೈಯಲ್ಲೇ ಆರ್.ಎಸ್.ಎಸ್. ನಿಷೇಧಿಸಲು ಸಾದ್ಯವಾಗಿಲ್ಲ. ಇನ್ನು ಯಕಶ್ಚಿತ್ ಸಿದ್ದರಾಮಯ್ಯನ ಕೈಯಲ್ಲಿ ಆರ್.ಎಸ್.ಎಸ್.ನಿಷೇಧಿಸಲು ಸಾದ್ಯವಾ ಎಂದು ಮಾಜಿ ಡಿಸಿಎಂ, ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದ್ದಾರೆ.

ನಗರದ ಶುಭಮಂಗಳ ಕಲ್ಯಾಣ ಮಂದಿರದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ವಿಶೇಷ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಬರಲಿಲ್ಲ ಅಮಿತ್ ಶಾ, ಬಿಜೆಪಿ ಸಮಾವೇಶ ರದ್ದು

ಒಬ್ಬ ಹಿಂದೂವಿನ ಕೊಲೆಯಾದರೆ ಇದಕ್ಕೆ ಆರ್.ಎಸ್.ಎಸ್. ಕಾರಣವೆಂದು ಸಂಘಟನೆಯನ್ನ ನಿಷೇಧಿಸಿತ್ತೇನೆ ಎಂದು ಸಿದ್ದರಾಮಯ್ಯ ಬೊಬ್ಬೆಹಾಕುತ್ತಾರೆ. ಆದರೆ, ಇಂದಿರಾ ಗಾಂಧಿ ಅವರ ತಂದೆ‌ ನೆಹರೂ ಅವರ ಕೈಯಲ್ಲೂ ಈ ಕೆಲಸವಾಗಿಲ್ಲ ಇನ್ನು ನಿಮ್ಮ ಕೈಯಲ್ಲಿ ಏನಾಗಲಿದೆ ಎಂದು ಪ್ರಶ್ನಿಸಿದರು.

Can Siddaramaiah dare to ban RSS? : KS Eshwarappa Challenges CM

ರಾಷ್ಟ್ರೀಯ ಮನೋಭಾವನೆಯ ಹಿನ್ನಲೆಯಲ್ಲಿ ನರೇಂದ್ರ ಮೋದಿ ಪ್ರಧಾನ ಮಂತ್ರಿಗಳಾದರು. ಮುಸ್ಲಿಂ ಹಾಗೂ ಕ್ರಿಶ್ಚಿಯನ್ ರಾಷ್ಟ್ರಗಳಲ್ಲಿ ಮೋದಿಯ ಬಗ್ಗೆ ಅಗೌರವವಿತ್ತು. ಯಾವಾಗ ನರೇಂದ್ರ ಮೋದಿ ನಾನೊಬ್ಬ ಹಿಂದೂ ಹೌದು ಆದರೆ ಇತರೆ ಜಾತಿಯನ್ನ ಗೌರವಿಸುತ್ತೇನೆ ಎಂದಾಗ ವಿಶ್ವ ಅವರನ್ನ ಬರಮಾಡಿಕೊಂಡಿತು ಎಂದು ಹೇಳಿದರು.

ದೇಶದ 21ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೇರಿದೆ ಇದರಿಂದಾಗಿ ಇಡೀ ದೇಶ ಕೇಸರಿ ಮಯವಾಗ್ತಾ ಇದೆ. ಮೇ.ತಿಂಗಳಲ್ಲಿ ಕರ್ನಾಟಕ ರಾಜ್ಯವೂ ಸಹ ಕೇಸರಿ ಮಯವಾಗಲಿದೆ ಎಂದು ತಿಳಿಸಿದರು.

ರಾಜ್ಯಸಭೆಗೆ ರುದ್ರೇಗೌಡ: ನೆಮ್ಮದಿಯ ನಿಟ್ಟುಸಿರು ಬಿಟ್ಟ ಈಶ್ವರಪ್ಪ

ಬಿಜೆಪಿಯ ನರೇಂದ್ರ ಮೋದಿ, ಅಮಿತ್ ಶಾ, ರಾಜ್ಯಕ್ಕೆ ಬಂದರೆ ಯಡ್ಡಿಯೂರಪ್ಪ ಹಾಗೂ ಈಶ್ವರಪ್ಪನವರನ್ನ ತೆಗೆಳೋದು‌ ಬಿಟ್ಟರೆ ಕಾಂಗ್ರೆಸ್ ಗೆ ಬೇರೆ ಕೆಲಸವಿಲ್ಲ, ಅಲ್ಪಸಂಖ್ಯಾತರ ತುಷ್ಟೀಕರಣದಲ್ಲಿ ಕಾಂಗ್ರೆಸ್ ತೊಡಗಿಕೊಂಡಿದೆ ಎಂದು ದೂರಿದರು.

Can Siddaramaiah dare to ban RSS? : KS Eshwarappa Challenges CM

ಕಾರ್ಯಕರ್ತರಿಗೆ ಕರೆ : ತನ್ನ ಬೂತ್ ನಲ್ಲಿರುವ 250 ಮನೆಗಳಿಗೆ ಕಾರ್ಯಕರ್ತರು ಪದೇ ಪದೇ ತೆರಳಿ ನರೇಂದ್ರ ಮೋದಿ ಹಾಗೂ ಹಿಂದೆ ಬಿಜೆಪಿ ಕೆಲಸದ ಬಗ್ಗೆ ತಿಳಿ ಹೇಳಬೇಕು. ಆಗ ಬಿಜೆಪಿ ಅಧಿಕಾರಕ್ಕೆ ಬರೋದು ಖಚಿತ. ಜವಾಬ್ದಾರಿಯನ್ನ ತೆಗೆದುಕೊಂಡ ಕಾರ್ಯಕರ್ತರು ನಿಭಾಯಿಸಲು ಪಣತೊಡಬೇಕು ಎಂದು ಕರೆ ನೀಡಿದರು.

ಸಿಎಂಗೆ ಸಿದ್ದು ರೆಹಮಾನ್ ಅಂತ ಹೆಸರಿಡಬೇಕಿತ್ತು: ಈಶ್ವರಪ್ಪ

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಭಾನುಪ್ರಕಾಶ, ದೇವದಾಸ್‌ ನಾಯಕ್, ಚನ್ನಬಸಪ್ಪ, ಎ.ಜಿ.ನಾಗರಾಜ ಉಪಸ್ಥಿತರಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Shivamogga : Former DCM, BJP leader KS Eshwarappa has challenged CM Siddaramaiah that can he dare to ban RSS. Eshwarappa said, even Indira Gandhi and Nehru failed to do so.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ