ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗದಗ ಜಿಲ್ಲೆಗೆ ಕುಡಿಯುವ ನೀರಿನ ಯೋಜನೆ: ಕಾಡಾ ನಿರಾಕರಣೆ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಮಾರ್ಚ್ 12: ಗದಗ ಜಿಲ್ಲೆಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಡಿ 2ಟಿ.ಎಂ.ಸಿ. ಕುಡಿಯುವ ನೀರನ್ನು ಭದ್ರಾ ಜಲಾಶಯದಿಂದ ಹರಿಸುವಂತೆ ಸರ್ಕಾರ ಮನವಿ ಮಾಡಿಕೊಂಡಿರುವ ಹಿನ್ನಲೆಯಲ್ಲಿ ಕಾಡಾ ಕಛೇರಿಯಲ್ಲಿ ಇಂದು 12ಜಿಲ್ಲೆಯ ಜನಪ್ರತಿನಿಧಿಗಳು, ಸರ್ಕಾರಿ ನಾಮ ನಿರ್ದೇಶಿತರು, ರೈತರು ಸಭೆ ನಡೆಸಿ ನೀರು ಬಿಡಲು ಸಾದ್ಯವಿಲ್ಲವೆಂದು ನಿರ್ಣಯ ಕೈಗೊಂಡರು.

ಗದಗ ಜಿಲ್ಲೆಯ ಜಿಲ್ಲಾಧಿಕಾರಿಗಳು ಬಹುಗ್ರಾಮದ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಕುಡಿಯುವ ನೀರಿಗೆ ಕಾಡಾದಿಂದ 2ಟಿ.ಎಂಸಿ ನೀರು ಬಿಡುಗಡೆ ಮಾಡಿಸುವಂತೆ ಸರ್ಕಾರದ ಮೂಲಕ ಕಾಡಾಕ್ಕೆ ಮನವಿ ಮಾಡಿಕೊಂಡಿತ್ತು.

ಶಿವಮೊಗ್ಗ ಜಿಲ್ಲೆಯ ವಿಧಾನಸಭಾ ಕ್ಷೇತ್ರದ ಸಮಸ್ಯೆಗಳುಶಿವಮೊಗ್ಗ ಜಿಲ್ಲೆಯ ವಿಧಾನಸಭಾ ಕ್ಷೇತ್ರದ ಸಮಸ್ಯೆಗಳು

ಈ ಕುರಿತು ಕಾಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಅವರ ನೇತೃತ್ವದಲ್ಲಿ ಸಭೆ ನಡೆಸಿದ ಕಾಡ ನೀರಾವರಿ ಸಲಹ ಸಮಿತಿ ಬೇಸಿಗೆ ಇರುವುದರಿಂದ ಬೆಳೆಗಳಿಗೆ ಮತ್ತು ಕುಡಿಯುವ ನೀರಿಗೆ ಅವಶ್ಯಕತೆ ಇರುವುದರಿಂದ ಬೇಡಿಕೆ ಇರುವ ನೀರನ್ನ ಬಿಡಲು ಸಾದ್ಯವಿಲ್ಲವೆಂದು ನಿರ್ಣಯಕೈಗೊಂಡು ಸರ್ಕಾರಕ್ಕೆ ನಿರ್ಣಯ ಕಳುಹಿಸಿಕೊಟ್ಟಿದೆ.

CADA denies water for Gadag district multi villages water scheme

ಈ ಕುರಿತು ಕಾಡಾ ಅಧ್ಯಕ್ಷ ಸುಂದರೇಶ್ ಮಾತನಾಡಿ ಕಳೆದ ಎರಡು ಬಾರಿ ಭದ್ರಾ ಜಲಾನಯನ ಪ್ರದೇಶಕ್ಕೆ ನೀರು ಹರಿಸಲು ಆಗಿರಲಿಲ್ಲ. ಈ ಬಾರಿ ಬೆಳೆಗೆ ಪ್ರಾಮುಖ್ಯತೆ ನೀಡಿ 125ದಿನ ನೀರು ಬಿಡುವುದಾಗಿ ನಿರ್ಣಯ ಕೈಗೊಂಡಿದ್ದೆವು. ಅದರಂತೆ ಇಂದಿಗೆ 66ದಿನ ನೀರು ಹರಿಸಲಾಗಿದೆ.

ಈಗಾಗಲೇ ಗದಗ ಹಾಗೂ ಹಾವೇರಿಗೆ 3.45 ಟಿ.ಎಂ.ಸಿ ನೀರು ಹರಿಸಬೇಕಿದ್ದು ಅದರಲ್ಲಿ 2.235ಟಿ.ಎಂಸಿ ನೀರು ಬಿಡಲಾಗಿದೆ. ಇನ್ನು 1.1ಟಿ.ಎಂ.ಸಿ.ನೀರು ಬಿಡಬೇಕು ಅದಕ್ಕೆ ಮೇ ತಿಂಗಳ ಕೊನೆಯವರೆಗೂ ಅವಕಾಶ ಇದೆ ಎಂದರು.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ರೈತ ಮುಖಂಡ ಕೆ.ಟಿ.ಗಂಗಾಧರ್ ಮಾತನಾಡಿ ಭದ್ರಾ ಜಲಾನಯನ ಪ್ರದೇಶದಲ್ಲಿ ಅಗತ್ಯವಿರುವ ನೀರು ಶೇಖರಣೆಯಲ್ಲಿಟ್ಟುಕೊಂಡು ಮೇ ತಿಂಗಳ ವರೆಗೆ ನೀರು ಹರಿಸಬೇಕಿದೆ. ಜಲಾನಯನ ಪ್ರದೇಶದಲ್ಲಿ ನೀರಿನ ಕೊರತೆ ಇದೆ. ಹಾಗಾಗಿ ಗದಗ ಜಿಲ್ಲಾಧಿಕಾರಿಗಳು ಹಾಗು ಜನಪ್ರತಿ ನಿದಿಗಳು ಅಗತ್ಯ ನೀರನ್ನ ವರ್ಷದ ಪ್ರಾರಂಭದಲ್ಲಿ ಪ್ರಸ್ತಾವನೆ ಕಳುಹಿಸಿದ್ದರೆ ಸೂಕ್ತ ಕ್ರಮ ಜರುಗಿಸಬಹುದಿತ್ತು.

ಶಿವಮೊಗ್ಗ ವಿಧಾನಸಭಾ ಕ್ಷೇತ್ರಗಳ ಪರಿಚಯ

ಆದರೆ ಏಕಾಏಕಿ ಕೇಳಿರುವುದರಿಂದ ಕಾಡಾ ನೀರಾವಾರಿ ಸಲಹ ಸಮಿತಿ ಬೇಡಿಕೆ ನೀರನ್ನ ಹರಿಸಲು ಸಾದ್ಯವಿಲ್ಲ ಎಂದು ತೀರ್ಮಾನಿಸಿದೆ ಎಂದರು. ಸಭೆಯಲ್ಲಿ ಭದ್ರಾವತಿ ಅಪ್ಪಾಜಿ ಗೌಡ, ಹರಿಹರ‌ ಶಾಸಕ ಶಿವಶಂಕರ್, ತರೀಕೆರೆ ಶಾಸಕ ಶ್ರೀನಿವಾಸ, ಹೊನ್ನಾಳಿ ಶಾಸಕ ಶಾಂತನ ಗೌಡ, ಜಿಪಂ ಸದಸ್ಯ ತೇಜಸ್ವಿ ಪಾಟೀಲ್ ಮೊದಲಾದವರು ಉಪಸ್ಥಿತರಿದ್ದರು.

English summary
Bhadra Catchment Area Development Authority has denied to release 2 TMC of eater for Gadag district multi villages water scheme. CADA has decided on Monday in a meeting held in Chaimenship of HS Sundaresh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X