ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗದಲ್ಲಿ ಅಂತರರಾಷ್ಟ್ರೀಯ ಕರಾಟೆ ಕ್ರೀಡೆಗೆ ಚಾಲನೆ ನೀಡಿದ ಬಿವೈಆರ್

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಆಗಸ್ಟ್.19: ನಗರದ ನೆಹರೂ ಒಳಕ್ರೀಡಾಂಗಣದಲ್ಲಿ ಅಂತರರಾಷ್ಟ್ರೀಯ ಕರಾಟೆ ಕ್ರೀಡೆಗೆ ಭಾನುವಾರ ಮಾಜಿ ಶಾಸಕ ಬಿ.ವೈ ರಾಘವೇಂದ್ರ ಚಾಲನೆ ನೀಡಿದರು.

ಅಮೇರಿಕಾ, ಶ್ರೀಲಂಕಾ, ನೇಪಾಳ, ಮಲೇಶಿಯಾ ಹಾಗೂ ಭಾರತ ದೇಶದಿಂದ ಆಗಮಿಸಿರುವ ಕರಾಟೆ ಕ್ರೀಡಾ ಪಟುಗಳಿಗೆ ನೆಹರೂ ಕ್ರೀಡಾಂಗಣ ಅಕ್ಷರಶಃ ವೇದಿಕೆಯಾಗಿತ್ತು. ರಾಜ್ಯ ಮತ್ತು ಅಂತರರಾಷ್ಟ್ರೀಯ ಫೆಡರೇಷನ್ ವತಿಯಿಂದ ನಡೆಯುತ್ತಿರುವ ಶಿವಮೊಗ್ಗ ಒಪನ್ ಇಂಟರ್ ನ್ಯಾಷನಲ್ ಕರಾಟೆ ಚಾಂಪಿಯನ್ ಶಿಪ್ ಭಾನುವಾರ ಮತ್ತು ಸೋಮವಾರ ನಡೆಯಲಿದೆ.

'ಚಿನ್ನ'ಕ್ಕೆ ಕರಾಟೆ ಪಂಚ್ ನೀಡಿದ ಮಂಗಳೂರು ಮೇಯರ್ ಕವಿತಾ ಸನಿಲ್'ಚಿನ್ನ'ಕ್ಕೆ ಕರಾಟೆ ಪಂಚ್ ನೀಡಿದ ಮಂಗಳೂರು ಮೇಯರ್ ಕವಿತಾ ಸನಿಲ್

7 ರಿಂದ 21 ವರ್ಷದ ವಯೋಮಿತಿಯ 1,500 ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಪ್ರಥಮ ಬಹುಮಾನವಾಗಿ ಪಲ್ಸರ್ ಬೈಕ್, ಎರಡನೇ ಬಹುಮಾನವಾಗಿ 32 ಇಂಚಿನ ಟಿವಿ ನೀಡಲಾಗುತ್ತಿದೆ. ಕತಾಸ್ ಪಟುಗಳಿಗೆ ಮಾತ್ರ ಸಮಾಧಾನಕರ ಬಹುಮಾನ.

BY Raghavendra on Sunday launched the International Karate Sports

ಈ ಕ್ರೀಡೆಯಲ್ಲಿ ಜನರಲ್ ಫಿಟ್ ನೆಸ್ ಗಾಗಿ ಕತಾಸ್ ಮತ್ತು ತೂಕದ ಆಧಾರದ ಮೇಲೆ ಕುಮಿತೆ ಎಂಬ ಎರಡು ವಿಭಾಗಗಳಲ್ಲಿ ಕ್ರೀಡೆಗಳನ್ನು ವಿಂಗಡಿಸಲಾಗಿದೆ. ತೂಕದ ಆಧಾರದ ಮೇಲೆ ಕುಮಿತೆ ಪಂದ್ಯಾವಳಿಯಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಸಮಾಧಾನಕರ ಬಹುಮಾನವಿಲ್ಲ.

BY Raghavendra on Sunday launched the International Karate Sports

ಆದರೆ ಸಾಮಾನ್ಯ ತೂಕದ ಆಧಾರದ ಮೇಲೆ ನಡೆಯುವ ಕತಾಸ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳಿಗೆ ಸಮಾಧಾನಕರ ಬಹುಮಾನ ನೀಡಲಾಗುತ್ತಿದೆ.

English summary
Former MLA BY Raghavendra on Sunday launched the International Karate Sports at Nehru Indoor Stadium in Shivamogga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X