ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯ ಜೊತೆ ರಾಹು, ಕೇತು, ಶನಿ ಪ್ರಚಾರ: ಈಶ್ವರಪ್ಪ ಲೇವಡಿ

|
Google Oneindia Kannada News

Recommended Video

ಸಿದ್ದರಾಮಯ್ಯ ಹಾಗು ಎಚ್ ಡಿ ಕುಮಾರಸ್ವಾಮಿಯನ್ನ ಲೇವಡಿ ಮಾಡಿದ ಕೆ ಎಸ್ ಈಶ್ವರಪ್ಪ | Oneindia Kannada

ಶಿವಮೊಗ್ಗ, ಅಕ್ಟೋಬರ್ 22: ತಾವು ಸೋಲಲು ರಾಹು, ಕೇತು ಮತ್ತು ಶನಿಗಳೇ ಕಾರಣ ಎಂದಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಅದೇ ರಾಹು, ಕೇತು, ಶನಿ ಚುನಾವಣಾ ಪ್ರಚಾರಕ್ಕೆ ಬರುತ್ತಿವೆ ಎಂದು ಬಿಜೆಪಿ ಶಾಸಕ ಕೆ.ಎಸ್. ಈಶ್ವರಪ್ಪ ಲೇವಡಿ ಮಾಡಿದರು.

ಮೇಲ್ನೋಟಕ್ಕೆ ಒಂದಾಗಿರುವಂತೆ ತೋರಿಸುವ ಕಾಂಗ್ರೆಸ್-ಜೆಡಿಎಸ್ ಹಾವು-ಮುಂಗುಸಿ ಥರ ಕಚ್ಚಾಡುತ್ತಿದ್ದಾರೆ. ಈ ಚುನಾವಣೆ ಕರ್ನಾಟಕದ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ ಎಂದು ಈಶ್ವರಪ್ಪ ಹೇಳಿದರು.

ಶಿವಮೊಗ್ಗ ಚುನಾವಣಾ ಚಿತ್ರಣ ಅಂತಿಮ, ಇನ್ನು ಪ್ರಚಾರದ ಭರಾಟೆ ಶಿವಮೊಗ್ಗ ಚುನಾವಣಾ ಚಿತ್ರಣ ಅಂತಿಮ, ಇನ್ನು ಪ್ರಚಾರದ ಭರಾಟೆ

ಸರ್ಕಾರ ಬಿದ್ದುಹೋದರೆ ದಂಗೆ ಏಳಿ ಎಂದು ಕುಮಾರಸ್ವಾಮಿ ಕರೆ ನೀಡುತ್ತಾರೆ. ಯಾವ ಗೂಂಡಾ ಕೂಡ ಈ ರೀತಿ ಹೇಳಿಕೆ ನೀಡುವುದಿಲ್ಲ.

by election 2018 Shimoga lok sabha ks eshwarappa criticise siddaramaiah

ಯಡಿಯೂರಪ್ಪ ಅವರ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಲು ಸಿದ್ದರಾಮಯ್ಯ ಲಿಂಗಾಯತ-ವೀರಶೈವ ಸಮುದಾಯಗಳನ್ನು ಒಡೆಯಲು ನೋಡಿದರು. ಈಗ ಕಾಂಗ್ರೆಸ್ ಪಕ್ಷವೇ ಒಡೆದುಹೋಗುತ್ತಿದೆ. ಡಿ.ಕೆ. ಶಿವಕುಮಾರ್ ಈಗ ಕ್ಷಮೆ ಕೇಳುತ್ತಿದ್ದಾರೆ. ಅದರ ವಿರುದ್ಧ ಕಾಂಗ್ರೆಸ್‌ನಲ್ಲಿಯೇ ಕಚ್ಚಾಟ ಆರಂಭವಾಗುತ್ತಿದೆ. ಮುಂದೆ ಕಾಂಗ್ರೆಸ್ ಮುಳುಗಿ ಹೀಗಲಿದೆ. ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಈಶ್ವರಪ್ಪ ಹೇಳಿದರು.

ರಾಹು, ಕೇತು, ಶನಿ... ಸಿದ್ದು ಹೇಳಿಕೆಗೆ ಮೌನವೇ ಉತ್ತರ ಎಂದ ಸಿಎಂ!ರಾಹು, ಕೇತು, ಶನಿ... ಸಿದ್ದು ಹೇಳಿಕೆಗೆ ಮೌನವೇ ಉತ್ತರ ಎಂದ ಸಿಎಂ!

ಜನರೇ ಉತ್ತರ ನೀಡುತ್ತಾರೆ...
ಜೆಡಿಎಸ್-ಕಾಂಗ್ರೆಸ್‌ನವರು ಶಿವಮೊಗ್ಗಕ್ಕೆ ಬಂದು ಯಡಿಯೂರಪ್ಪ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಅವರ ಮಾತುಗಳಿಗೆ ನಾನು ಈಗ ಉತ್ತರ ನೀಡುವುದಿಲ್ಲ. ಉಪ ಚುನಾವಣೆ ಫಲಿತಾಂಶದ ದಿನ ಶಿವಮೊಗ್ಗದ ಜನರೇ ಉತ್ತರ ನೀಡಲಿದ್ದಾರೆ ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದರು.

ಶಿವಮೊಗ್ಗ : ಮಾಜಿ ಸಂಸದ ಬಿವೈ ರಾಘವೇಂದ್ರ ಆಸ್ತಿ ದ್ವಿಗುಣವಾಗಿದೆ!ಶಿವಮೊಗ್ಗ : ಮಾಜಿ ಸಂಸದ ಬಿವೈ ರಾಘವೇಂದ್ರ ಆಸ್ತಿ ದ್ವಿಗುಣವಾಗಿದೆ!

ಕಾಂಗ್ರೆಸ್ ಮತ್ತು ಜೆಡಿಎಸ್‌ನವರು ವಿಷದ ಬೀಜ ಬಿತ್ತುತ್ತಿದ್ದಾರೆ. ಬಿಜೆಪಿಯಿಂಣದಲೇ ಈಡಿಗ ಸಮುದಾಯದ ಅಭ್ಯರ್ಥಿಗಳು ಸ್ಪರ್ಧಿಸಿ ಗೆದ್ದಿದ್ದಾರೆ ಎಂದು ಕಾಂಗ್ರೆಸ್‌ಗೆ ತಿರುಗೇಟು ನೀಡಿದರು.

by election 2018 Shimoga lok sabha ks eshwarappa criticise siddaramaiah

ರಾಹುಲ್ ಗಾಂಧಿ ಅವರನ್ನು ಅವರ ಪಕ್ಷದವರು ಮತ್ತು ಮಿತ್ರ ಪಕ್ಷದವರೇ ವಿರೋಧಿಸುತ್ತಿದ್ದಾರೆ. 45 ಲೋಕಸಭೆ ಸ್ಥಾನಗಳನ್ನೂ ಅದು ಗೆದ್ದಿಲ್ಲ. ಹೀಗಾಗಿ ಅವರಿಗೆ ನಿಂತ ನೆಲವೇ ಕುಸಿದಂತೆ ಎನಿಸಿದೆ ಎಂದು ಯಡಿಯೂರಪ್ಪ ವ್ಯಂಗ್ಯ ಮಾಡಿದ್ದಾರೆ.

'ಬಿ.ಎಸ್.ಯಡಿಯೂರಪ್ಪ ಅವರಿಗೆ ಪುತ್ರ ಸೋಲುತ್ತಾನೆ ಎನ್ನುವ ಭಯ' 'ಬಿ.ಎಸ್.ಯಡಿಯೂರಪ್ಪ ಅವರಿಗೆ ಪುತ್ರ ಸೋಲುತ್ತಾನೆ ಎನ್ನುವ ಭಯ'

ಈಗಾಗಲೇ ಮಾಯಾವತಿ ಅವರು ಮೈತ್ರಿಕೂಟದಿಂದ ಹೊರಕ್ಕೆ ಹೋಗಿದ್ದಾರೆ. ಹಾಗಿದ್ದರೂ ರಾಹುಲ್ ಗಾಂಧಿ ಹಗಲು ಕನಸು ಕಾಣುತ್ತಿರುವುದು ಹಾಸ್ಯಾಸ್ಪದ. ಇದನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದಿದ್ದಾರೆ.

English summary
BJP MLA KS Eshwarappa criticised Siddaramaiah as he is going to campaign with Rahu, Kethu and Shani who were the reason for Siddaramaiah's defeat in the assembly elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X