ವರ್ಷಪೂರ್ತಿ ಜೋಗ ವೈಭವ : ಏನಿದು ಯೋಜನೆ?

Posted By:
Subscribe to Oneindia Kannada

ಶಿವಮೊಗ್ಗ, ಆಗಸ್ಟ್ 18 : ಶೀಘ್ರದಲ್ಲೇ ವರ್ಷಪೂರ್ತಿ ವಿಶ್ವವಿಖ್ಯಾತ ಜೋಗ ಜಲಪಾತದ ವೈಭವವನ್ನು ಕಣ್ತುಂಬಿ ಕೊಳ್ಳಬಹುದಾಗಿದೆ. 'ವರ್ಷಪೂರ್ತಿ ಜೋಗ ವೈಭವ ಯೋಜನೆ' ಅನುಷ್ಠಾನಕ್ಕೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

ಬುಧವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ, 'ವರ್ಷಪೂರ್ತಿ ಜೋಗ ವೈಭವ ಯೋಜನೆ' ಅನುಷ್ಠಾನಗೊಳಿಸಲು ಒಪ್ಪಿಗೆ ನೀಡಲಾಗಿದೆ. ಕರ್ನಾಟಕದ ಮೂಲದ ಅನಿವಾಸಿ ಭಾರತೀಯ ಉದ್ಯಮಿ ಬಿ.ಆರ್‌. ಶೆಟ್ಟಿ ಅವರ ಸಂಸ್ಥೆ 450 ಕೋಟಿ ವೆಚ್ಚದಲ್ಲಿ ಯೋಜನೆ ಅನುಷ್ಠಾನಗೊಳಿಸಲಿದೆ. [ಜೋಗ ಅಭಿವೃದ್ಧಿಗೆ ಹೂಡಿಕೆ ಮಾಡಲಿದ್ದಾರೆ ಬಿ.ಆರ್.ಶೆಟ್ಟಿ]

ಜೋಗ ಅಭಿವೃದ್ಧಿ ಪ್ರಾಧಿಕಾರದ ಉಸ್ತುವಾರಿಯಲ್ಲಿ, ಸರ್ಕಾರಕ್ಕೆ ಸಲ್ಲಿಸಿರುವ ವಿಸ್ತೃತ ಯೋಜನಾ ವರದಿಗೆ ಅನುಗುಣವಾಗಿ ಯೋಜನೆಯನ್ನು ಅನುಷ್ಠಾನ ಮಾಡಬೇಕಾಗಿದೆ. ವಾಣಿಜ್ಯ ಉದ್ದೇಶದ ಚಟುವಟಿಕೆಗೆ ಅವಕಾಶ ಇರಕೂಡದು ಎಂಬ ಷರತ್ತುಗಳನ್ನು ಸಂಸ್ಥೆಗೆ ವಿಧಿಸಲಾಗಿದೆ.[ಪ್ರಕೃತಿ ಅದ್ಭುತ ಜೋಗ ಜಲಪಾತ]

ಜೋಗ ಜಲಪಾತದಲ್ಲಿ ವರ್ಷಪೂರ್ತಿ ನೀರು ಹರಿಯುವಂತೆ ಮಾಡುವುದು. ಜೋಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿ, ಪಾದಚಾರಿ ಮಾರ್ಗಗಳ ಅಭಿವೃದ್ಧಿ, ಸೌರವಿದ್ಯುತ್‌ ಉತ್ಪಾದನಾ ಘಟಕ, ಅತ್ಯಾಧುನಿಕ ಸೌಲಭ್ಯವುಳ್ಳ ಆಸ್ಪತ್ರೆ ನಿರ್ಮಾಣ ಸೇರಿದಂತೆ ಹಲವು ಯೋಜನೆಗಳು ಇದರಲ್ಲಿ ಒಳಗೊಂಡಿವೆ.....[ಗಲ್ಫ್ ಶ್ರೀಮಂತರ ಪಟ್ಟಿಯಲ್ಲಿ ಕನ್ನಡಿಗ ಬಿ.ಆರ್ ಶೆಟ್ಟಿ]

ಅನುಮತಿ ಪಡೆಯಬೇಕು

ಅನುಮತಿ ಪಡೆಯಬೇಕು

ಕರ್ನಾಟಕದ ಮೂಲದ ಅನಿವಾಸಿ ಭಾರತೀಯ ಉದ್ಯಮಿ ಬಿ.ಆರ್‌. ಶೆಟ್ಟಿ ಅವರ ಸಂಸ್ಥೆ 450 ಕೋಟಿ ವೆಚ್ಚದಲ್ಲಿ ಯೋಜನೆ ಅನುಷ್ಠಾನಗೊಳಿಸಲಿದೆ. ಯೋಜನೆ ಆರಂಭಿಸುವ ಮೊದಲು ಪರಿಸರ ಮತ್ತು ಅರಣ್ಯ ಸೇರಿದಂತೆ ವಿವಿಧ ಇಲಾಖೆಗಳಿಂದ ಸಂಸ್ಥೆಯೇ ಅನುಮತಿಯನ್ನು ಪಡೆಯಬೇಕಾಗಿದೆ.

ಜೋಗ ಅಭಿವೃದ್ಧಿ ಪ್ರಾಧಿಕಾರದ ಉಸ್ತುವಾರಿ

ಜೋಗ ಅಭಿವೃದ್ಧಿ ಪ್ರಾಧಿಕಾರದ ಉಸ್ತುವಾರಿ

ಈ ಯೋಜನೆಯ ಉಸ್ತುವಾರಿಯನ್ನು ಜೋಗ ಅಭಿವೃದ್ಧಿ ಪ್ರಾಧಿಕಾರ ನೋಡಿಕೊಳ್ಳಲಿದೆ. ಯೋಜನೆಗೆ ಹಣ ಹೂಡಿಕೆ ಮಾಡಿದವರು, ಪ್ರವಾಸಿಗರಿಂದ ಶುಲ್ಕಗಳನ್ನು ಸಂಗ್ರಹ ಮಾಡಬಹುದು. ಆದರೆ, ಶುಲ್ಕಗಳ ಮೊತ್ತವನ್ನು ಪ್ರಾಧಿಕಾರ ಅಂತಿಮಗೊಳಿಸಲಿದೆ.

ಕೃತಕ ಜಲಪಾತ ನಿರ್ಮಾಣ

ಕೃತಕ ಜಲಪಾತ ನಿರ್ಮಾಣ

10 ವರ್ಷಗಳ ಹಿಂದೆ ಬೆಂಗಳೂರಿನ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನ ಪ್ರೊ.ವಿಶ್ವನಾಥ್ ಅವರು ಜೋಗದಲ್ಲಿ ಕೃತಕ ಜಲಪಾತ ನಿರ್ಮಾಣ ಮಾಡುವ ಮೂಲಕ ವರ್ಷವಿಡೀ ನೀರು ಹರಿಯುವಂತೆ ಮಾಡುವ ಯೋಜನೆ ತಯಾರು ಮಾಡಿದ್ದರು. ಈ ಯೋಜನಾ ವರದಿಯನ್ನು ಸಂಸ್ಥೆ ಬಳಸಿಕೊಳ್ಳುವ ನಿರೀಕ್ಷೆ ಇದೆ.

80 ಲಕ್ಷ ಪ್ರವಾಸಿಗರು

80 ಲಕ್ಷ ಪ್ರವಾಸಿಗರು

ಜುಲೈ ತಿಂಗಳಿನಿಂದ ಅಕ್ಟೋಬರ್ ತನಕ ಸುಮಾರು 80 ಲಕ್ಷ ಪ್ರಯಾಣಿಕರು ಜೋಗ ಜಲಪಾತಕ್ಕೆ ಭೇಟಿ ನೀಡುತ್ತಾರೆ. ಜಲಪಾತದಲ್ಲಿ ನೀರು ಹರಿಯುವುದು ಕಡಿಯಾದ ಬಳಿಕ ಪ್ರವಾಸಿಗರ ಸಂಖ್ಯೆ ಇಳಿಮುಖವಾಗುತ್ತದೆ. ಈಗ ವರ್ಷಪೂರ್ತಿ ಜೋಗ ಯೋಜನೆ ಮೂಲಕ ವರ್ಷಪೂರ್ತಿ ಪ್ರವಾಸಿಗರನ್ನು ಸೆಳೆಯುವ ಯೋಜನೆ ಹಾಕಿಕೊಳ್ಳಲಾಗಿದೆ.

ಜೋಗ ಜಲಪಾತದ ಕುರಿತು

ಜೋಗ ಜಲಪಾತದ ಕುರಿತು

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಜೋಗ ಜಲಪಾತಕ್ಕೆ ವಿಶ್ವದ ವಿವಿಧ ದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. 831 ಅಡಿಗಳ ಮೇಲಿಂದ ಧುಮ್ಮಿಕ್ಕುವ ಜೋಗ ಜಲಪಾತ ಭಾರತದ ಎರಡನೇ ಅತಿ ಎತ್ತರದ ಜಲಪಾತವಾಗಿದೆ. ಅತಿ ಹೆಚ್ಚು ಮಳೆ ಪಡೆಯುವ ಚಿರಾಪುಂಜಿಯಲ್ಲಿರುವ ನೋಹಕಾಲಿಕೈ ಜಲಪಾತ ದೇಶದ ಅತಿ ಎತ್ತರ ಜಲಪಾತವಾಗಿದೆ (1100 ಅಡಿ).

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Abu Dhabi based Dr B.R.Shetty of NMC Group of Companies has decided to invest Rs 450 crore for developing the world famous Jog Falls in Shivamogga district. In a cabinet meeting Karnataka government approved a detailed project report of the company and asked to go ahead with the project.
Please Wait while comments are loading...