ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ಸಾಗರದಲ್ಲಿ ಪರಿವರ್ತನಾ ಯಾತ್ರೆ : ಅಭ್ಯರ್ಥಿ ಬಗ್ಗೆ ಇನ್ನೂ ಗುಟ್ಟು!

Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಶಿವಮೊಗ್ಗ, ಡಿಸೆಂಬರ್ 28 : 2018ರ ಚುನಾವಣೆಗೆ ಸಾಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರು? ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಇಂದು ಕ್ಷೇತ್ರದಲ್ಲಿ ಪರಿವರ್ತನಾ ಯಾತ್ರೆ ನಡೆಯಿತು. ಆದರೆ, ಅಭ್ಯರ್ಥಿ ಬಗ್ಗೆ ಯಡಿಯೂರಪ್ಪ ಗುಟ್ಟು ಬಿಟ್ಟುಕೊಡಲಿಲ್ಲ.

  ಶಿವಮೊಗ್ಗ ಜಿಲ್ಲೆಯ ಸಾಗರ ಕ್ಷೇತ್ರದಲ್ಲಿ ಗುರುವಾರ ಕರ್ನಾಟಕ ಬಿಜೆಪಿಯ ನವ ಕರ್ನಾಟಕ ಪರಿವರ್ತನಾ ಯಾತ್ರೆಯ ಸಮಾವೇಶ ನಡೆಯಿತು. ತವರು ಜಿಲ್ಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಭವ್ಯ ಸ್ವಾಗತ ಸಿಕ್ಕಿತು.

  ಬೇಳೂರು ಗೋಪಾಲಕೃಷ್ಣ ಕೈ ತಪ್ಪಲಿದೆ ಸಾಗರದ ಟಿಕೆಟ್?

  ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಸಾಗರ-ಹೊಸನಗರ ಕ್ಷೇತ್ರದ ಅಭಿವೃದ್ಧಿಗೆ ತಂದಿರುವ ಯೋಜನೆಗಳ ವಿವರ ನೀಡಿದರು.

  ಶಿಕಾರಿಪುರದಲ್ಲಿ ಪರಿವರ್ತನಾ ಯಾತ್ರೆ, ಸ್ಪರ್ಧೆ ಬಗ್ಗೆ ಬಿಎಸ್‌ವೈ ಮೌನ!

  ತಮ್ಮ ಭಾಷಣದ ಕೊನೆಗೆ ಯಡಿಯೂರಪ್ಪ ಅವರು, 'ನೈಋತ್ಯ ಪದವೀಧರ ಕ್ಷೇತ್ರದಿಂದ ಆಯನೂರು ಮಂಜುನಾಥ್, ಶಿಕ್ಷಕರ ಕ್ಷೇತ್ರದಿಂದ ಗಣೇಶ್ ಕಾರ್ಣಿಕ್ ಅವರನ್ನು ಗೆಲ್ಲಿಸಿ' ಕಳುಹಿಸಿ ಎಂದು ಜನರಲ್ಲಿ ಮನವಿ ಮಾಡಿದರು.

  ಬೇಳೂರು v/s ಹಾಲಪ್ಪ : ಸಾಗರದ ಬಿಜೆಪಿ ಟಿಕೆಟ್‌ ಯಾರಿಗೆ?

  ಸಾಗರ ಕ್ಷೇತ್ರದಲ್ಲಿ 2018ರ ಚುನಾವಣೆ ಅಭ್ಯರ್ಥಿ ಯಾರು? ಎಂಬುದು ಇನ್ನೂ ಖಚಿತಗೊಂಡಿಲ್ಲ. ಮಾಜಿ ಸಚಿವ ಹರತಾಳು ಹಾಲಪ್ಪ, ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಹೆಸರು ಕೇಳಿಬರುತ್ತಿದೆ. ಸಮಾವೇಶದಲ್ಲಿ ಯಡಿಯೂರಪ್ಪ ಅವರು ಗುಟ್ಟು ಬಿಟ್ಟು ಕೊಟ್ಟಿಲ್ಲ...

  ಸಾಗರದಲ್ಲಿ ಬಿಜೆಪಿ ಗೆಲುವು ಖಚಿತ

  ಸಾಗರದಲ್ಲಿ ಬಿಜೆಪಿ ಗೆಲುವು ಖಚಿತ

  ಸಮಾವೇಶದಲ್ಲಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ ಅವರು, 'ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾರು? ಎಂದು ಚಿಂತೆ ಮಾಡುವ ಅಗತ್ಯವಿಲ್ಲ. 150 ಸ್ಥಾನ ಗೆಲ್ಲಬೇಕು, ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದರೆ ಸಾಗರ ಕ್ಷೇತ್ರದಲ್ಲಿ ಪಕ್ಷ ಗೆಲ್ಲಲೇಬೇಕು' ಎಂದರು.

  ಅಭ್ಯರ್ಥಿ ಗೆಲ್ಲಿಸುವ ಜವಾಬ್ದಾರಿ ತೆಗೆದುಕೊಳ್ಳಿ

  ಅಭ್ಯರ್ಥಿ ಗೆಲ್ಲಿಸುವ ಜವಾಬ್ದಾರಿ ತೆಗೆದುಕೊಳ್ಳಿ

  'ಯುವಕರು ಮತ್ತು ಕ್ಷೇತ್ರದ ನಾಯಕರು ಬೂತ್‌ಗಳನ್ನು ಬಲಪಡಿಸಿ. ಯಾರೇ ಅಭ್ಯರ್ಥಿಯಾಗಲಿ, ಅವರನ್ನು ಗೆಲ್ಲಿಸಲೇಬೇಕು ಎಂಬ ಜವಾಬ್ದಾರಿಯನ್ನು ತೆಗೆದುಕೊಳ್ಳಿ' ಎಂದು ಯಡಿಯೂರಪ್ಪ ಕರೆ ನೀಡಿದರು.

  ಬೇಳೂರು v/s ಹಾಲಪ್ಪ

  ಬೇಳೂರು v/s ಹಾಲಪ್ಪ

  ಸಾಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಾರು? ಎಂಬುದು ಇನ್ನೂ ಖಚಿತಗೊಂಡಿಲ್ಲ. ಇಂದಿನ ಪರಿವರ್ತನಾ ಯಾತ್ರೆಯ ಸಮಾವೇಶದಲ್ಲಿ ಸಹ ಯಡಿಯೂರಪ್ಪ ಈ ಬಗ್ಗೆ ಗುಟ್ಟು ಬಿಟ್ಟು ಕೊಟ್ಟಿಲ್ಲ. ಮಾಜಿ ಸಚಿವ ಹರತಾಳು ಹಾಲಪ್ಪ, ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಹೆಸರು ಕೇಳಿಬರುತ್ತಿದೆ.

  ಕಳೆದ ಬಾರಿ ಬಿಜೆಪಿಗೆ ಸೋಲಾಗಿತ್ತು

  ಕಳೆದ ಬಾರಿ ಬಿಜೆಪಿಗೆ ಸೋಲಾಗಿತ್ತು

  2013ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಕ್ಷೇತ್ರದಲ್ಲಿ ಸೋಲು ಉಂಟಾಗಿತ್ತು. ಬೇಳೂರು ಗೋಪಾಲಕೃಷ್ಣ ಅವರು ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಬಿಜೆಪಿಯಿಂದ ಕಣಕ್ಕಿಳಿದಿದ್ದ ಶರಾವತಿ ಸಿ.ಆರ್. ಅವರು ಸಹ 4ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದರು.

  ಸಚಿವರ ಕ್ಷೇತ್ರ ಸಾಗರ

  ಸಚಿವರ ಕ್ಷೇತ್ರ ಸಾಗರ

  ಸಾಗರ ಕ್ಷೇತ್ರದ ಶಾಸಕರು ಹಿರಿಯ ಕಾಂಗ್ರೆಸ್ ನಾಯಕ ಕಾಗೋಡು ತಿಮ್ಮಪ್ಪ. ಸಿದ್ದರಾಮಯ್ಯ ಸಂಪುಟದಲ್ಲಿ ಅವರು ಕಂದಾಯ ಸಚಿವರು. ಈ ಬಾರಿಯ ಚುನಾವಣೆಗೆ ಅವರು ಸ್ಪರ್ಧಿಸುವುದಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಯಾರು? ಎಂಬುದು ಇನ್ನೂ ಖಚಿತವಾಗಿಲ್ಲ.

  2013ರ ಚುನಾವಣೆ ಫಲಿತಾಂಶ

  2013ರ ಚುನಾವಣೆ ಫಲಿತಾಂಶ

  * ಕಾಗೋಡು ತಿಮ್ಮಪ್ಪ - 71,960 ಮತ
  * ಬಿ.ಆರ್.ಜಯಂತ್ - 30,712 ಮತ (ಕೆಜೆಪಿ)
  * ಬೇಳೂರು ಗೋಪಾಲಕೃಷ್ಣ - 23,217 ಮತ (ಜೆಡಿಎಸ್)
  * ಶರಾವತಿ ಸಿ.ರಾವ್ - 5,355 ಮತ (ಬಿಜೆಪಿ)

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Karnataka BJP president B.S.Yeddyurappa addressed Nava Karnataka Parivartan Yatra in Sagar, Shivamogga district on December 28, 2017. But Yeddyurappa not announced candidate for constituency. Former minister Hartal Halappa and Former MLA Beluru Gopalkrishna in a race for the ticket.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more