ಶಿಕಾರಿಪುರದಲ್ಲಿ ಪರಿವರ್ತನಾ ಯಾತ್ರೆ, ಸ್ಪರ್ಧೆ ಬಗ್ಗೆ ಬಿಎಸ್‌ವೈ ಮೌನ!

Posted By: Gururaj
Subscribe to Oneindia Kannada

ಶಿವಮೊಗ್ಗ, ಡಿಸೆಂಬರ್ 27 : 'ಪುರಸಭೆ ಅಧ್ಯಕ್ಷನಾಗಿದ್ದ ನನ್ನನ್ನು ಶಾಸಕನಾಗಿ ಮಾಡಿ, ಮುಖ್ಯಮಂತ್ರಿ ಮಾಡಿದ್ದೀರಿ. ನಿಮ್ಮ ಋಣ ನನ್ನ ಮೇಲಿದೆ. ನಿಮ್ಮ ಋಣವನ್ನು ನಾನು ತೀರಿಸುತ್ತೇನೆ' ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದರು.

ಕರ್ನಾಟಕ ಬಿಜೆಪಿ ಅಧ್ಯಕ್ಷ, 2018ರ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ತವರು ಕ್ಷೇತ್ರ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಬುಧವಾರ ಸಂಜೆ ಪರಿವರ್ತನಾ ಯಾತ್ರೆಯ ಸಮಾವೇಶ ನಡೆಯಿತು.

ರಾಜ್ಯಕ್ಕೆ ಅಚ್ಛೇದಿನ್ ಯಾವಾಗ ಬರುತ್ತೆ?, ಬಿಎಸ್‌ವೈ ಉತ್ತರ ಹೇಳಿದ್ರು!

ದಾವಣಗೆರೆಯಿಂದ ಪರಿವರ್ತನಾ ಯಾತ್ರೆಯಲ್ಲಿ ಆಗಮಿಸಿದ ಯಡಿಯೂರಪ್ಪ ಅವರಿಗೆ ತವರು ಕ್ಷೇತ್ರದಲ್ಲಿ ಭವ್ಯ ಸ್ವಾಗತ ಸಿಕ್ಕಿತು. ಸಾವಿರಾರು ಜನರು ಸೇರಿದ್ದ ಸಮಾವೇಶ ಉದ್ದೇಶಿಸಿ ಬಿ.ಎಸ್.ಯಡಿಯೂರಪ್ಪ ಮಾತನಾಡಿದರು.

ಉತ್ತರ ಕರ್ನಾಟಕದಿಂದ ಬಿಎಸ್‌ವೈ ಸ್ಪರ್ಧೆ : ಯಾರು, ಏನು ಹೇಳಿದರು?

2018ರ ವಿಧಾನಸಭೆ ಚುನಾವಣೆಗೆ ಬಿ.ಎಸ್.ಯಡಿಯೂರಪ್ಪ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ? ಎಂಬುದು ಕುತೂಹಲದ ವಿಷಯವಾಗಿದೆ. ಉತ್ತರ ಕರ್ನಾಟಕದಿಂದ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ತವರು ಕ್ಷೇತ್ರದಲ್ಲಿ ಯಡಿಯೂರಪ್ಪ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಯಾವುದೇ ಘೋಷಣೆ ಮಾಡಿಲ್ಲ.

ರಾಣೆಬೆನ್ನೂರಿನಿಂದ ಸ್ಪರ್ಧಿಸಲಿದ್ದಾರೆ ಬಿಎಸ್‌ವೈ ಪುತ್ರ ಬಿ.ವೈ.ರಾಘವೇಂದ್ರ?

ಕ್ಷೇತ್ರದ ಶಾಸಕ ಬಿ.ವೈ.ರಾಘವೇಂದ್ರ, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಬಳ್ಳಾರಿ ಸಂಸದ ಶ್ರೀರಾಮುಲು, ಬಿಜೆಪಿ ನಾಯಕರಾದ ಗೋವಿಂದ ಕಾರಜೋಳ, ಬಸವರಾಜ ಬೊಮ್ಮಾಯಿ ಮುಂತಾದ ನಾಯಕರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

5 ರಿಂದ 6 ಸಾವಿರ ಜನ

5 ರಿಂದ 6 ಸಾವಿರ ಜನ

ಸಮಾವೇಶ ಉದ್ದೇಶಿಸಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, 'ಪರಿವರ್ತನಾಯಾತ್ರೆಗೆ ಸಿಗುತ್ತಿರುವ ಬೆಂಬಲ ನೋಡಿ ನಾನೇ ಆಶ್ಚರ್ಯಗೊಂಡಿದ್ದೇನೆ. ದಿನಕ್ಕೆ ಮೂರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ರಾತ್ರಿ 9 ಗಂಟೆಯಾದರೂ 5 ರಿಂದ 6 ಸಾವಿರ ಜನರು ಸೇರುತ್ತಿದ್ದಾರೆ. ನನ್ನ ಕಣ್ಣು ತುಂಬಿ ಬಂದಿದೆ' ಎಂದರು.

ಜನ ಮತ್ತು ದೈವ ಬಲವಿದೆ

ಜನ ಮತ್ತು ದೈವ ಬಲವಿದೆ

'ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರು ನನ್ನನ್ನು ಕರ್ನಾಟದ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಾರೆ. ಮುಂದಿನ ಚುನಾವಣೆಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಮಾಡಿದ್ದಾರೆ. ಇದು ನಿಮ್ಮ ಆಶೀರ್ವಾದ
ಚುನಾವಣೆಗೆ ಮುನ್ನ ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸುವುದು ಬಿಜೆಪಿ ಮಾತ್ರ. ನಮಗೆ ಗೆಲುವಿನ ಮೇಲೆ ಅಷ್ಟು ವಿಶ್ವಾಸವಿದೆ' ಎಂದರು.

ನೀರು, ರೈಲು ಮಾರ್ಗ ಕ್ಷೇತ್ರಕ್ಕೆ ಬರಲಿದೆ

ನೀರು, ರೈಲು ಮಾರ್ಗ ಕ್ಷೇತ್ರಕ್ಕೆ ಬರಲಿದೆ

'ಕ್ಷೇತ್ರವನ್ನು ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ನಿಮ್ಮ ಋಣ ತೀರಿಸುವುದು ಇನ್ನೂ ಬಾಕಿ ಇದೆ. ಕ್ಷೇತ್ರಕ್ಕೆ ಮೂರು ನೀರಾವರಿ ಯೋಜನೆ ಬರಬೇಕು. ಶಿವಮೊಗ್ಗ- ಶಿಕಾರಿಪುರ-ರಾಣೆಬೆನ್ನೂರು ರೈಲು ಮಾರ್ಗ ನಿರ್ಮಾಣವಾಗಬೇಕು ಎಂಬುದು ನನ್ನ ಕನಸು. ಇದನ್ನು 5 ವರ್ಷಗಳಲ್ಲಿ ಈಡೇರಿಸುವೆ' ಎಂದು ಹೇಳಿದರು.

ಯುವಕರಿಗೆ, ಮಹಿಳೆಯರಿಗೆ ಉದ್ಯೋಗ ಕೊಡುವೆ

ಯುವಕರಿಗೆ, ಮಹಿಳೆಯರಿಗೆ ಉದ್ಯೋಗ ಕೊಡುವೆ

'ಶಿವಮೊಗ್ಗ ಏರ್ ಪೋರ್ಟ್ ಕಾಮಗಾರಿ ನಿಂತು ಹೋಗಿದೆ. ಶಿಕಾರಿಪುರದಲ್ಲಿ ಗಾರ್ಮೆಂಟ್ಸ್ ಆರಂಭಿಸಿ ಶಿರಾಳಕೊಪ್ಪ, ಶಿಕಾರಿಪುರದ ಯುವಕರಿಗೆ, ಮಹಿಳೆಯರಿಗೆ ಉದ್ಯೋಗ ನೀಡುತ್ತೇವೆ' ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka BJP president B.S.Yeddyurappa addressed Nava Karnataka Parivartan Yatra in Shikaripura, Shivamogga district. Shikaripura is the home constituency for B.S.Yeddyurappa, his son B.Y. Raghavendra is the sitting MLA.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ