ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಪ್ತ ಸಹಾಯಕನನ್ನು ಬದಲಾಯಿಸಿದ ಕೆಎಸ್ ಈಶ್ವರಪ್ಪ

By ನಮ್ಮ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಸೆ. 24: ವಿಧಾನ ಪರಿಷತ್ ಸದಸ್ಯ ಕೆ.ಎಸ್.ಈಶ್ವರಪ್ಪ ಅವರು ತಮ್ಮ ಅಪ್ತ ಸಹಾಯಕನನ್ನು ಬದಲಾಯಿಸಿದ್ದಾರೆ. ಈ ಬಗ್ಗೆ ಭಾನುವಾರ ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿ ವಿವರಿಸಿದರು. ವಿನಯ್ ನನ್ನ ಸಹಾಯಕ ಎಂದು ಮಾಧ್ಯಮಗಳು ಪ್ರಸಾರ ಮಾಡುವಂತಿಲ್ಲ ಎಂದು ಎಚ್ಚರಿಕೆ ನೀಡಿದರು.

ಇನ್ನು ಮುಂದೆ ವಿನಯ್ ಬದಲಿಗೆ ಬಸವರಾಜ್ ಎಸ್ ಕುರಿ ನನ್ನ ಅಧಿಕೃತ ಆಪ್ತ ಸಹಾಯಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ಆದರೆ, ಮುದ್ರಣ ಹಾಗೂ ಟಿವಿ ಮಾದ್ಯಮಗಳಲ್ಲಿ ವಿನಯ್ ಹಾಗೂ ನನ್ನ ನಡುವಿನ ಸಂಬಂಧಗಳ ಕುರಿತು ಪ್ರಸಾರ ವಾಗುತ್ತಿದೆ. ಈ ಕುರಿತು ಘನ ಸಿವಿಲ್ ನ್ಯಾಯಾಲಯದಲ್ಲಿ ದಾವೆ(ಸಂಖ್ಯೆ 26078/2017) ಸಲ್ಲಿಸಲಾಗಿದೆ.

ಇನ್ನು ಮುಂದೆ ಮುದ್ರಣ ಹಾಗೂ ದೃಶ್ಯ ಮಾದ್ಯಮಗಳಲ್ಲಿ ಅನಗತ್ಯವಾಗಿ ನನ್ನ ಹಾಗೂ ವಿನಯ್ ನಡುವೆ ಸಂಬಂಧ ಕಲ್ಪಿಸಿ ಪ್ರಸಾರ ಮಾಡುವುದಾಗಲಿ ಹಾಗೂ ಮುದ್ರಣ ಮಾಡುವುದಾಗಲಿ ನಡೆಸಬಾರದು ಎಂದು ನ್ಯಾಯಾಲಯವು ಸೆ.23ರಂದು ತಡೆಯಾಜ್ಞೆ ನೀಡಿದೆ ಎಂದರು.

ಕಾಂಗ್ರೆಸ್ ನಡೆ ಮನೆ ಮನೆಗೆ

ಕಾಂಗ್ರೆಸ್ ನಡೆ ಮನೆ ಮನೆಗೆ

ಕಾಂಗ್ರೆಸ್ ನಡೆ ಮನೆ ಮನೆಗೆ ಎಂದು ಘೋಷಣೆ ಮೂಲಕ ಅಭಿಯಾನ ಪ್ರಾರಂಭಿಸುತ್ತಿದೆ. ಆದರೆ ಅದರದೇ ಪಕ್ಷದ ಶಾಸಕರಾದ ರಾಜು 'ಕಳ್ಳರ ಪಕ್ಷ' ಎಂದು ಹೇಳಿದ್ದಾರೆ ಮಹಿಳಾ ವಿವಿಯ ಕುಲಪತಿ ಮಲ್ಲಿಕಾ ಘಂಟಿ ಅವರು ವಿಧಾನ ಸೌಧದಲ್ಲಿ ಸೂಟ್ ಕೇಸ್ ಸಂಸ್ಕೃತಿ ಇದೆ ಎಂದು ಹೇಳಿದ್ದಾರೆ. ಹಾಗದರೆ ಕಾಂಗ್ರೆಸ್ ಮನೆ ಮನೆಗೆ ಅಲ್ಲ ಕಳ್ಳರು ಮನೆ ಮನೆಗೆ ಎಂದು ಹೇಳಿದರು.

ಅಲ್ಲಿಯ ತನಕ ಪಕ್ಷವೇ ಅಭ್ಯರ್ಥಿ

ಅಲ್ಲಿಯ ತನಕ ಪಕ್ಷವೇ ಅಭ್ಯರ್ಥಿ

ನೈರುತ್ಯ ವಲಯದ ಪದವೀಧರ ಕ್ಷೇತ್ರಕ್ಕೆ ಇಗಾಗಲೇ ಕಾಂಗ್ರೆಸ್ ಪಕ್ಷ ಅಭ್ಯರ್ಥಿ ಯನ್ನ ನೇಮಿಸಿದೆ. ಆದರೆ ಬಿಜೆಪಿ ಇನ್ನೂ ನೇಮಿಸಿಲ್ಲ ಹಾಗಾದರೆ ಬಿಜೆಪಿಯಲ್ಲಿ ಅಭ್ಯರ್ಥಿ ಆಯ್ಕೆನೆ ಗೊಂದಲವಿದೆಯೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ ಯಾವ ಗೊಂದಲ ನೂ ಇಲ್ಲ ಚುನಾವಣೆ ಇನ್ನೂ ದೂರವಿದೆ. ಚುನಾವಣೆ ಹತ್ತಿರ ದಲ್ಲಿರುವಂತೆ ಅಭ್ಯರ್ಥಿ ಗಳ ಹೆಸರನ್ನು ಘೋಷಿಸಲಾಗುವುದು. ಅಲ್ಲಿಯ ತನಕ ಪಕ್ಷವೇ ಅಭ್ಯರ್ಥಿ ಎಂದರು.

ಸಂತೋಷ್ ಮತ್ತು ಬಿಎಸ್ ವೈ

ಸಂತೋಷ್ ಮತ್ತು ಬಿಎಸ್ ವೈ

ನಿಮ್ಮ ಪಕ್ಷದಲ್ಲಿ ಮತ್ತೆ ಸಂತೋಷ್ ಮತ್ತು ಬಿಎಸ್ ವೈ ಬಣದ ನಡುವೆ ಭಿನ್ನಾಭಿಪ್ರಾಯ ನಡೆದಿದೆ ಎಂದು ಸುದ್ದಿ ಇದೆ ಈ ಬಗ್ಗೆ ಗೊಂದಲವಿದೆಯಾ ಎಂದು ಕೇಳಿ ದ ಪ್ರಶ್ನೆಗೆ ಉತ್ತರಿಸಿದ ಅವರು ಚುನಾವಣೆ ಸಮಿತಿ ಆಯುಕ್ತರು ಮಾಧ್ಯಮದವರೆ, ಪಕ್ಷದ ಹಿರಿಯರು ಮಾಧ್ಯಮದವರೆ ಆಗಿರುವುದರಿಂದ ಇಂತಹ ಪ್ರಶ್ನೆಗಳು ಹುಟ್ಟುವುದು ಸಹಜ ಹಾಗಾಗಿ ಇಂತಹ ಭಿನ್ನಾಭಿಪ್ರಾಯಕ್ಕೆ ನಮ್ಮಲ್ಲಿ ಅವಕಾಶ ಇಲ್ಲ. ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದೇನೆ ಬಂದ ಮೇಲೆ ಈ ರೀತಿ ಪ್ರಶ್ನೆಗೆ ಪ್ರತಿಕ್ರಿಯಿಸುತ್ತೇನೆ ಎಂದರು.

ನಾನು ಶಿವಮೊಗ್ಗದಿಂದಲೆ ಸ್ಪರ್ಧಿಸುತ್ತೇನೆ

ನಾನು ಶಿವಮೊಗ್ಗದಿಂದಲೆ ಸ್ಪರ್ಧಿಸುತ್ತೇನೆ

ನಾನು ಶಿವಮೊಗ್ಗದಿಂದಲೆ ಸ್ಪರ್ಧಿಸುತ್ತೇನೆ ಎಂದು ಉತ್ತರ ಕರ್ನಾಟಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ್ದೆ. ಅದರಂತೆ ನಾನು ಸ್ವಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ. ಬಿಎಸ್ ಯಡಿಯೂರಪ್ಪ ಅವರಿಗೆ ರಾಷ್ಟ್ರೀಯ ಅಧ್ಯಕ್ಷರು ಹೇಳಿದ್ದಾರೆ ಎಂದು ಮಾದ್ಯಮದಲ್ಲಿ ಕೇಳಿರುವುದರಿಂದ ಅವರು ಬೇರೆಡೆ ಸ್ಪರ್ಧಿಸಬಹುದು ಎಂದು ಪ್ರಶ್ನೆವೊಂದಕ್ಕೆ ಉತ್ತರಿಸಿದರು

English summary
Shivamogga Legislative council Opposition BJP leader K S Eshwarappa today said he has changed his personal assistant. N S Vinay is longer working with him and Basavaraj S Kuri will be new PA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X