ರಾಜ್ಯಸಭೆಗೆ ರುದ್ರೇಗೌಡ: ನೆಮ್ಮದಿಯ ನಿಟ್ಟುಸಿರು ಬಿಟ್ಟ ಈಶ್ವರಪ್ಪ

Posted By: ಶಿವಮೊಗ್ಗ ಪ್ರತಿನಿಧಿ
Subscribe to Oneindia Kannada

ರುದ್ರೇಗೌಡರು ರಾಜ್ಯಸಭೆಗೆ ಆಯ್ಕೆಯಾದ ಹಿನ್ನಲೆಯಲ್ಲಿ ಬಹಳ ದಿನಗಳ ಹಿಂದಿನಿಂದ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಶಿವಮೊಗ್ಗ ವಿಧಾನ ಸಭೆ ಚುನಾಣೆಗೆ ಬಿಜೆಪಿಯ ಟಿಕೆಟ್ ಗೊಂದಲ ಮುಕ್ತಾಯವಾಗಲಿದೆ. ಬಿಜೆಪಿ ವರಿಷ್ಠರು ರುದ್ರೇಗೌಡರಿಗೆ ರಾಜ್ಯಸಭೆಗೆ ಸೂಚಿಸಿರುವುದು ಬಿಜೆಪಿ ಕಾರ್ಯಕರ್ತರೂ ಸೇರಿದಂತೆ ಎಲ್ಲರಲ್ಲೂ ನಿರಾಳತೆ ಮೂಡಿಸಿದೆ. ರಾಜ್ಯ ಸಭೆಗೆ ದೆಹಲಿಗೆ ತೆರಳಲು ರುದ್ರೇಗೌಡರಿಗೆ ಹೈಕಮಾಂಡ್ ಅಸ್ತು ಎಂದಿರುವುದು ಇದೀಗ ರುದ್ರೇಗೌಡರಿಗೆ ಲೈನ್ ಕ್ಲಿಯರ್ ಆಗಿದೆ.

ಈ ಕುರಿತು ಮಾತನಾಡಿದ ರಾಜ್ಯಸಭೆಯ ಅಭ್ಯರ್ಥಿ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ರುದ್ರೇಗೌಡರು, ನಾನು ಶಿವಮೊಗ್ಗ ವಿಧಾನ ಸಭಾ ಚುನಾವಣೆಗೆ ಬಿಜೆಪಿ ಪಕ್ಷದ ಆಕಾಂಕ್ಷಿ ಹೌದು ಆದರೆ ನನ್ನನ್ನ ರಾಜ್ಯ ಸಭೆಗೆ ಸ್ಪರ್ಧಿಸಲು ಬಿ.ಎಸ್.ಯಡ್ಡಿಯೂರಪ್ಪ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಹಾಗಾಗಿ ಪಕ್ಷ ಏನು ಜವಬ್ದಾರಿ ನೀಡುತ್ತೆ ಅದನ್ನ ನಿಬಾಯಿಸುವುದು ನನ್ನ ಕರ್ತವ್ಯ ಎಂದರು.

ರಾಜ್ಯಸಭಾ ಚುನಾವಣೆ: ಬಿಜೆಪಿಯಿಂದ ಅಚ್ಚರಿಯ ಅಭ್ಯರ್ಥಿ

ಪಕ್ಷದಿಂದ ಅಧಿಕೃತಗೊಂಡಿಲ್ಲ
ನಾನು ರಾಜ್ಯಸಭೆ ಚುನಾವಣೆಗೆ ಆಯ್ಕೆಯಾಗಿರುವ ಬಗ್ಗೆ ನಮ್ಮ ಪಕ್ಷದ ವತಿಯಿಂದ ಅಧಿಕೃತ ಮಾಹಿತಿ ಬಂದಿಲ್ಲ. ನಾನು ಸಹ ಸುದ್ದಿ ಮಾಧ್ಯಮದಲ್ಲಿ ನೋಡಿರುವುದು. ಹಾಗಾಗಿ ಮುಂದೆ ಪಕ್ಷ ಏನು ಸೂಚಿಸುತ್ತೆ ಅದನ್ನು ನಿರ್ವಹಿಸಲು ಸಿದ್ದ. ಶಿವಮೊಗ್ಗ ವಿಧಾನಸಭೆಗೆ ಈಶ್ವರಪ್ಪನವರನ್ನು ಪಕ್ಷ ಸೂಚಿಸಿದರೆ ಜಿಲ್ಲಾಧ್ಯಕ್ಷರನ್ನಾಗಿ ಅವರನ್ನು ಗೆಲ್ಲಿಸಲು ನಾನು ಬದ್ಧನಿದ್ದೇನೆ ಎಂದರು.

BJP gives ticket to Rudre Gowda for Rajya sabha, Eshwarappa relief

ವಿಜಯ ಸಂಕೇಶ್ವರ್, ರಾಜೀವ್ ಚಂದ್ರಶೇಖರ್ ಹೆಸರನ್ನ ಪಕ್ಷ ಸೂಚಿಸಿತ್ತು. ಈಗ ನನ್ನ ಹೆಸರನ್ನ ಬಿಎಸ್‌ವೈ ಸೂಚಿಸಿದ್ದರಿಂದ ಅವರು ಹೇಳಿದಂತೆ ಕೇಳುವುದು ನನ್ನ ಕರ್ತವ್ಯ ಸಹ ಹೌದು ಎಂದರು.

ರುದ್ರೇಗೌಡ ಹಾಗೂ ಈಶ್ವರಪ್ಪ ಅವರ ನಡುವೆ ಟೆಕೆಟ್‌ಗಾಗಿ ಕಲಹ ಏರ್ಪಟ್ಟಿತ್ತು, ಕಳೆದ ಬಾರಿ ಕೆಜೆಪಿಯಿಂದ ಸ್ಪರ್ಧಿಸಿ ಕಡಿಮೆ ಅಂತರದಲ್ಲಿ ಸೋತಿದ್ದ ರುದ್ರೇಗೌಡ ಅವರು ಈ ಬಾರಿ ಶಿವಮೊಗ್ಗ ನಗರ ಕ್ಷೇತ್ರದಿಂದ ಟಿಕೆಟ್ ಕೇಳಿದ್ದರು. ಇಷ್ಟೆ ಅಲ್ಲದೆ ಯಡಿಯೂರಪ್ಪ ಅವರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ 'ಈಶ್ವರಪ್ಪ ಚುನಾವಣೆಗೆ ನಿಂತರೆ ಠೇವಣಿ ಕಳೆದುಕೊಳ್ಳುತ್ತಾರೆ' ಎಂದು ಹೇಳಿದ್ದು ಬಿಜೆಪಿಯಲ್ಲಿ ಭಿನ್ನಪತ ಸೃಷ್ಠಿಸಿತ್ತು.

ಬರಲಿಲ್ಲ ಅಮಿತ್ ಶಾ, ಬಿಜೆಪಿ ಸಮಾವೇಶ ರದ್ದು

ಇದೀಗ ರುದ್ರೇಗೌಡ ಅವರನ್ನು ರಾಜ್ಯಸಭೆಗೆ ಸೂಚಿಸಿ ಯಡಿಯೂರಪ್ಪ ಅವರು ಈಶ್ವರಪ್ಪ ಹಾಗೂ ರುದ್ರೇಗೌಡ ಅವರನ್ನು ಏಕಕಾಲಕ್ಕೆ ಸಮಾಧಾನ ಪಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BJP gives ticket to Shivamogga district BJP president Rudre Gowda for Rajya sabha election. BJP leader Eshwarappa get relief. because Eshwarappa and Rudre Gowda are fighting for the Shivamogga ticket.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ