ಭದ್ರಾವತಿ ಸರ್ಕಾರಿ ಆಸ್ಪತ್ರೆಯಿಂದ ಗಂಡು ಮಗು ಕಳ್ಳತನ

Posted By:
Subscribe to Oneindia Kannada

ಶಿವಮೊಗ್ಗ, ಮೇ 11 : ಭದ್ರಾವತಿ ಸರ್ಕಾರಿ ಆಸ್ಪತ್ರೆಯಲ್ಲಿ ಅಮ್ಮನ ಮಡಿಲಲ್ಲಿ ಮಲಗಿದ್ದ ಗಂಡು ಮಗು ಕಳ್ಳತನವಾಗಿದೆ. ಓಲ್ಡ್ ಟೌನ್ ಠಾಣೆ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿದ್ದು, ಪರೀಶಿಲನೆ ನಡೆಸುತ್ತಿದ್ದಾರೆ.

ಪಟ್ಟಣದ ಗಾಂಧಿ ನಗರ ಬಡಾವಣೆ ನಿವಾಸಿಗಳಾದ ಅರುಣ್ ಕುಮಾರ್ ಮತ್ತು ಜೀವಿತಾ ದಂಪತಿಯ ಮಗು ಆಸ್ಪತ್ರೆಯಿಂದ ಕಳ್ಳತನವಾಗಿದೆ. ಬುಧವಾರ ಬೆಳಗ್ಗೆ 6 ಗಂಟೆಗೆ ಮಗು ಕಳ್ಳತನವಾದ ಬಗ್ಗೆ ಜೀವಿತಾ ಅವರು ಆಸ್ಪತ್ರೆಯ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. [ಜನನ ಪ್ರಮಾಣ ಪತ್ರ ಪಡೆಯುವುದು ಹೇಗೆ?]

jeevetha

ಸರ್ಕಾರಿ ಆಸ್ಪತ್ರೆಯ ಹೆರಿಗೆ ವಿಭಾಗದ ಭಾಗಿಲನ್ನು ರಾತ್ರಿ ಹಾಕಲಾಗಿತ್ತು. ಗ್ಲಾಸ್ ಒಡೆದು, ಬಾಗಿಲು ತೆರೆದು ಅಮ್ಮನ ಮಡಿಲಲ್ಲಿ ಮಲಗಿದ್ದ ಮಗುವನ್ನು ಕಳ್ಳತನ ಮಾಡಲಾಗಿದೆ. ಹೆರಿಗೆ ವಿಭಾಗದಲ್ಲಿ 20ಕ್ಕೂ ಹೆಚ್ಚು ಮಕ್ಕಳಿದ್ದರು. [ಬಾಡಿಗೆ ತಾಯಿಂದ ಮಗು ಪಡೆದರೂ 6 ತಿಂಗಳ ಹೆರಿಗೆ ರಜೆ]

ಸಿಸಿಟಿವಿ ಇಲ್ಲ : ಭದ್ರಾವತಿ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲವು ದಿನಗಳ ಹಿಂದೆ ಸಿಸಿಟಿವಿ ಆಳವಡಿಸಲಾಗಿದೆ. ಆದರೆ, ಅದು ಕಾರ್ಯನಿರ್ವಹಣೆ ಮಾಡುತ್ತಿಲ್ಲ. ಆದ್ದರಿಂದ, ಆಸ್ಪತ್ರೆಗೆ ಬಂದವರು ಯಾರು? ಎಂಬುದನ್ನು ಪತ್ತೆ ಹಚ್ಚುವುದು ಕಷ್ಟದ ಕೆಲಸವಾಗಿದೆ.

ಆಸ್ಪತ್ರೆಯ ಸಿಬ್ಬಂದಿಗಳು ಓಲ್ಡ್ ಟೌನ್ ಠಾಣೆ ಪೊಲೀಸರಿಗೆ ಮಗು ಕಳುವಾದ ಬಗ್ಗೆ ಮಾಹಿತಿ ನೀಡಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ನಾಲೆಗೆ ಬಿದ್ದ ಕಾರು, 5 ಸಾವು : ಚಾಲಕನ ನಿಯಂತ್ರಣ ತಪ್ಪಿದ ಕಾರು ನಾಲೆಗೆ ಉರುಳಿ ಬಿದ್ದು 5 ಜನರು ಸಾವನ್ನಪ್ಪಿದ ಘಟನೆ ಭದ್ರಾವತಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಮೃತಪಟ್ಟವರನ್ನು ಶಿವಮೊಗ್ಗದ ಗಾಡಿಕೊಪ್ಪದ ನಿವಾಸಿಗಳಾದ ನೇತ್ರಾವತಿ (41), ಅಭಿಲಾಷ (17), ಸಹನಾ (20), ಬೇಬಿ (35), ಧನುಷ್ (12) ಎಂದು ಗುರುತಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A newborn baby was stolen from government hospital Bhadravathi, Shivamogga on May 11, 2016. Case registered at Old town police station.
Please Wait while comments are loading...