ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ : ಭದ್ರಾವತಿ ಶಾಸಕ ಎಂ.ಜೆ.ಅಪ್ಪಾಜಿ ಗೌಡ ಸಂದರ್ಶನ

|
Google Oneindia Kannada News

Recommended Video

ಭದ್ರಾವತಿ ಶಾಸಕ ಎಂ.ಜೆ.ಅಪ್ಪಾಜಿ ಗೌಡ ಸಂದರ್ಶನ | Oneindia Kannada

ಶಿವಮೊಗ್ಗ, ಏಪ್ರಿಲ್ 11 : 'ಎಂಪಿಎಂ ಹಾಗೂ ವಿಎಸ್ಐಎಲ್ ಕಾರ್ಖಾನೆಗಳ ಅಧೋಗತಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರಣ' ಎಂದು ಭದ್ರಾವತಿ ಕ್ಷೇತ್ರದ ಶಾಸಕ ಎಂ.ಜೆ.ಅಪ್ಪಾಜಿಗೌಡ ಅವರು ಆರೋಪಿಸಿದರು.

ಜೆಡಿಎಸ್ ನಾಯಕ ಮತ್ತು ಭದ್ರಾವತಿ ಕ್ಷೇತ್ರದ ಶಾಸಕ ಎಂ.ಜೆ.ಅಪ್ಪಾಜಿ ಗೌಡ ಅವರು ಒನ್ ಇಂಡಿಯಾ ಕನ್ನಡಕ್ಕೆ ಸಂದರ್ಶನ ನೀಡಿದ್ದಾರೆ. ಸಂದರ್ಶನದಲ್ಲಿ ಚುನಾವಣೆ ಸಿದ್ಧತೆ, ಭದ್ರಾವತಿ ಕ್ಷೇತ್ರದ ಸಮಸ್ಯೆಗಳ ಕುರಿತು ಮಾತನಾಡಿದ್ದಾರೆ.

 ವಿಡಿಯೋ : ಭದ್ರಾವತಿ ಮಾಜಿ ಶಾಸಕ ಬಿ.ಕೆ.ಸಂಗಮೇಶ್ ಸಂದರ್ಶನ ವಿಡಿಯೋ : ಭದ್ರಾವತಿ ಮಾಜಿ ಶಾಸಕ ಬಿ.ಕೆ.ಸಂಗಮೇಶ್ ಸಂದರ್ಶನ

'ಎಂಪಿಎಂ ಹಾಗೂ ವಿಎಸ್ಐಎಲ್ ಕಾರ್ಖಾನೆ ಮುಚ್ಚಿ ಹೋಗುತ್ತಿತ್ತು. ದೇವೇಗೌಡರು ಪ್ರಧಾನ ಮಂತ್ರಿಗಳಾಗಿದ್ದಾಗ ಅದನ್ನು ಉಳಿಸಿಕೊಂಡಿದ್ದೇವೆ. ನಂತರ ಬಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಣಿ ಗುತ್ತಿಗೆ ನೀಡದೆ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ' ಎಂದು ಅಪ್ಪಾಜಿ ಗೌಡ ಅವರು ದೂರಿದರು.

Bhadravathi MLA MJ Appaji Gowda interview

'ರಾಜ್ಯ ಮತ್ತು ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯಿಂದಾಗಿ ಭದ್ರಾವತಿ ಕ್ಷೇತ್ರದಲ್ಲಿ ಸುಮಾರು 35 ಸಾವಿರ ಉದ್ಯೋಗ ಸೃಷ್ಟಿಯಾಗುವುದು ತಪ್ಪಿದೆ. ಇದರ ಬಗ್ಗೆ ನೋವುಂಟಾಗಿದೆ. ಸರ್ಕಾರಗಳು ಇತ್ತ ಗಮನ ಹರಿಸಬೇಕು' ಎಂದು ಅವರು ಹೇಳಿದ್ದಾರೆ.

ಸಂಗಮೇಶ್ ಎದುರಾಳಿ ನಾ? : 'ರಾಜಕರಾಣ ಎಂದ ಮೇಲೆ ಎದುರಾಳಿಗಳು ಇದ್ದೆ ಇರುತ್ತಾರೆ. ಅದನ್ನೆಲ್ಲಾ ಕೌಂಟ್‌ಗೆ ಇಟ್ಟುಕೊಳ್ಳುವುದಿಲ್ಲ. ನನಗೆ ಅದರ ಅವಶ್ಯಕತೆ ಇಲ್ಲ. ನಾವಿಲ್ಲಿ ಪರೀಕ್ಷೆಗೆ ಕುಳಿತುಕೊಳ್ಳುತ್ತೇವೆ. ತೀರ್ಮಾನವನ್ನು ಜನರಿಗೆ ಬಿಡುತ್ತೇವೆ, ಜನರ ಮೇಲೆ ನನಗೆ ಭರವಸೆ ಇದೆ'

ಕ್ಷೇತ್ರ ಪರಿಚಯ : ಜೆಡಿಎಸ್, ಕಾಂಗ್ರೆಸ್ ಭದ್ರ ಕೋಟೆ ಭದ್ರಾವತಿ!ಕ್ಷೇತ್ರ ಪರಿಚಯ : ಜೆಡಿಎಸ್, ಕಾಂಗ್ರೆಸ್ ಭದ್ರ ಕೋಟೆ ಭದ್ರಾವತಿ!

ವೈಯಕ್ತಿ ಪ್ರತಿಷ್ಠೆ ಇಲ್ಲ : 'ಚುನಾವಣೆಯಲ್ಲಿ ವೈಯಕ್ತಿಕ ಪ್ರತಿಷ್ಠೆ ಬರುವುದಿಲ್ಲ. ನಾವು ಜನರಿಗಾಗಿ ಕೆಲಸ ಮಾಡುವವರು. ಜನರ ಜೊತೆ ಇರುವವರು. ಜನರಿಗಾಗಿ ಏನು ಮಾಡಿದ್ದೇವೆ ಎಂಬುದನ್ನು ಅವರೇ ತೀರ್ಮಾನಿಸುತ್ತಾರೆ. ವಿರೋಧ ಪಕ್ಷಗಳು ಹೇಳುವ ಮಾತನ್ನು ಅವರು ಕೇಳಿಸಿಕೊಳ್ಳುವುದಿಲ್ಲ' ಎಂಬ ವಿಶ್ವಾಸ ನನಗಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

ಅಪ್ಪಾಜಿ ಗೌಡರನ್ನು ಏಕೆ ಬೆಂಬಲಿಸಬೇಕು? : 'ಅಪ್ಪಾಜಿ ಗೌಡರು ಜನರ ನಡುವೆ ಇದ್ದಾರೆ. ಸುಳ್ಳು ಹೇಳಲ್ಲ, ಜಾತಿ-ಜಾತಿಗಳನ್ನು ಒಡೆಯುವುದಿಲ್ಲ. ಜನರ ಮುಂದೆ ಏನು ಮಾತನಾಡುತ್ತಾರೋ? ಆ ಕೆಲಸವನ್ನು ಮಾತ್ರ ಮಾಡುತ್ತಾರೆ. ಚುನಾವಣೆ ಬಂದಾಗ ಗಿಮಿಕ್‌ ಗಳನ್ನು ಮಾಡುವುದಿಲ್ಲ. ಆದ್ದರಿಂದ, ಅವರನ್ನು ಬೆಂಬಲಿಸಬೇಕು'.

2013ರ ಚುನಾವಣೆಯಲ್ಲಿ ಎಂ.ಜೆ.ಅಪ್ಪಾಜಿ ಗೌಡ ಅವರು 78,370 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿ.ಕೆ.ಸಂಗಮೇಶ್ ಅವರು 34,271 ಮತ ಪಡೆದಿದ್ದರು. ಸಂಗಮೇಶ್ ಅವರು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.

ಭದ್ರಾವತಿ ಕ್ಷೇತ್ರದ ಚುನಾವಣೆ ಎಂದರೆ ಅದು ಅದು ಅಪ್ಪಾಜಿ ಗೌಡ ಮತ್ತು ಬಿ.ಕೆ.ಸಂಗಮೇಶ್ ನಡುವಿನ ಹೋರಾಟ. ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದ ಜನರು ಯಾರಿಗೆ ಬೆಂಬಲ ನೀಡುತ್ತಾರೆ? ಎಂದು ಕಾದು ನೋಡಬೇಕಿದೆ.

English summary
M.J.Appaji Gowda interview : M.J.Appaji Gowda JD(S) leader and sitting MLA of the Bhadravathi assembly constituency, Shivamogga. He is also party candidate for Karnataka Assembly elections 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X