ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಕ್ರೆಬೈಲಿನ ಮರಿಯಾನೆ ಬಾಲಾಜಿ ಇನ್ನು ನೆನಪು ಮಾತ್ರ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಜುಲೈ 13 : ಸಕ್ರೆಬೈಲು ಆನೆ ಬಿಡಾರದಲ್ಲಿದ್ದ 2 ವರ್ಷದ ಆನೆ ಮರಿ ಬಾಲಾಜಿ ಮೃತಪಟ್ಟಿದೆ. ದಾಂಡೇಲಿಯಲ್ಲಿ ಸೆರೆ ಸಿಕ್ಕಿದ ಈ ಆನೆ ಮರಿ ಬಿಡಾರಕ್ಕೆ ಆಗಮಿಸುವ ಜನರ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.

ದಾಂಡೇಲಿ ಅರಣ್ಯದಲ್ಲಿ ತಾಯಿಯಿಂದ ಬೇರ್ಪಟ್ಟ ಒಂದು ತಿಂಗಳ ಆನೆಮರಿಯನ್ನು ರಕ್ಷಿಸಿ, ಅರಣ್ಯ ಇಲಾಖೆ ಸಿಬ್ಬಂದಿ ಸಕ್ರೆಬೈಲು ಆನೆ ಬಿಡಾರಕ್ಕೆ ಕರೆತಂದಿದ್ದರು. ಆದರೆ, ಕಳೆದ ಒಂದು ತಿಂಗಳಿನಿಂದ ಆನೆ ಮರಿ ಅಸ್ವಸ್ಥಗೊಂಡು ನಿಗೂಢ ಕಾಯಿಲೆಯಿಂದ ಬಳಲುತ್ತಿತ್ತು.

ಮರಿ ಆನೆ ಉಳಿಸಲು ಹೆಣ್ಣಾನೆ ದಾಳಿ: 60 ಪ್ರಯಾಣಿಕರನ್ನು ರಕ್ಷಿಸಿದ ಚಾಲಕಮರಿ ಆನೆ ಉಳಿಸಲು ಹೆಣ್ಣಾನೆ ದಾಳಿ: 60 ಪ್ರಯಾಣಿಕರನ್ನು ರಕ್ಷಿಸಿದ ಚಾಲಕ

ಅನಾರೋಗ್ಯದಿಂದಾಗಿ ಅಸ್ವಸ್ಥಗೊಂಡಿದ್ದ ಆನೆ ಮರಿ ಕಳೆದ 15 ದಿನಗಳಿಂದ ಆಹಾರ ತ್ಯಜಿಸಿತ್ತು. ನಂತರ ತೀವ್ರ ಅಸ್ವಸ್ಥಗೊಂಡು ಬುಧವಾರ ಮೃತಪಟ್ಟಿದೆ. ಬಾಲಾಜಿ ಕೇವಲ ಪ್ರವಾಸಿಗರಿಗೆ ಮಾತ್ರವಲ್ಲದೇ ಮಾವುತರು, ಕಾವಾಡಿಗಳು ಮತ್ತು ಅವರ ಕುಟುಂಬದವರಿಗೂ ಅಚ್ಚು ಮೆಚ್ಚಿನ ಮರಿಯಾಗಿತ್ತು.

Baby elephant dies at Sakrebailu elephant camp

2016ರ ಅಕ್ಟೋಬರ್‌ನಲ್ಲಿ ದಾಂಡೇಲಿ ಅರಣ್ಯದಲ್ಲಿ ತಾಯಿ ಆನೆಯಿಂದ ಬೇರ್ಪಟ್ಟು ಮರಿಯಾನೆ ಹಾಲು, ಆಹಾರ ಇಲ್ಲದೇ ಅಸ್ವಸ್ಥಗೊಂಡು ಸ್ಥಳೀಯರಿಗೆ ಸಿಕ್ಕಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಅದನ್ನು ರಕ್ಷಿಸಿ ಸಕ್ರೆಬೈಲು ಆನೆ ಬಿಡಾರಕ್ಕೆ ಕಳಿಸಿದ್ದರು.

ಆಗುಂಬೆಯಲ್ಲಿ ಮತ್ತೆ ಕಾಣಿಸಿಕೊಂಡ ಒಂಟಿ ಸಲಗಆಗುಂಬೆಯಲ್ಲಿ ಮತ್ತೆ ಕಾಣಿಸಿಕೊಂಡ ಒಂಟಿ ಸಲಗ

Baby elephant dies at Sakrebailu elephant camp

ಬಿಡಾರಕ್ಕೆ ಬಂದ ಬಳಿಕ ಚೇತರಿಸಿಕೊಂಡು ಲವಲವಿಕೆಯಿಂದ ಓಡಾಡಿಕೊಂಡಿತ್ತು. ಬಿಡಾರಕ್ಕೆ ಬರುತ್ತಿದ್ದ ಪ್ರವಾಸಿಗರಿಗೂ ಮನರಂಜನೆ ನೀಡುತ್ತಿತ್ತು. ಮಾವುತರು, ಕಾವಾಡಿಗಳು ಮತ್ತು ಅವರ ಕುಟುಂಬದವರಿಗೂ ಅಚ್ಚುಮೆಚ್ಚಾಗಿತ್ತು.

English summary
2 year old Baby elephant died in Sakrebailu elephant camp, Shivamogga. Baby elephant separated from mother in Dandeli forest in 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X