• search

ಜೋಗ ಜಲಪಾತದಲ್ಲಿ ಮೈಮರೆತು ಹಾಡಿದ ಅಟಲ್ ಜೀ!

Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಶಿವಮೊಗ್ಗ, ಆಗಸ್ಟ್ 17 : ದಿ. ಅಟಲ್ ಬಿಹಾರಿ ವಾಜಪೇಯಿ ಅವರು 1968 ರಲ್ಲಿ ಪ್ರಾಂತೀಯ ಜನಸಂಘ ಸಮಾವೇಶದಲ್ಲಿ ಪಾಲ್ಗೊಳ್ಳಲು ಮೊದಲ ಬಾರಿಗೆ ಶಿವಮೊಗ್ಗಕ್ಕೆ ಆಗಮಿಸಿದ್ದರು. ಆಗ ಅವರು ಆರ್‌ಎಸ್‌ಎಸ್‌ನ ಡಿ.ಎಚ್.ಸುಬ್ಬಣ್ಣ ಮತ್ತು ಡಿ.ಎಚ್.ಶಂಕರಮೂರ್ತಿ ಅವರ ಬಿ.ಎಚ್. ರಸ್ತೆಯ ಕೂಡು ಕುಟುಂಬದ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು.

  ಆಗ ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೆ ಸುಬ್ಬಣ್ಣ ಅವರು ಕಳೆದ ಅನುಭವವನ್ನು ನೆನಪಿಸಿಕೊಂಡಿದ್ದಾರೆ.

  ವಾಜಪೇಯಿ ಅಂತಿಮ ದರ್ಶನ ಪಡೆದ ದೇವೇಗೌಡ, ಕುಮಾರಸ್ವಾಮಿ

  ಪ್ರಾಂತೀಯ ಸಮಾವೇಶದಲ್ಲಿ ಭಾಗವಹಿಸಿದ್ದ ವಾಜಪೇಯಿ ಅವರನ್ನು ನಾನು ನನ್ನ ಅಂಬಾಸಿಡರ್ ಕಾರಿನಲ್ಲಿ ಕೂರಿಸಿಕೊಂಡು ಜೋಗ ಫಾಲ್ಸ್ ನೋಡಲು ಕರೆದುಕೊಂಡು ಹೋಗುವ ಅವಕಾಶ ಆಗ ನನಗೆ ಒದಗಿಬಂದಿತ್ತು. ಅವರು ಜೋಗ ಜಲಪಾತ ಸೌಂದರ್ಯವನ್ನು ನೋಡಿ ವಿಸ್ಮಯಗೊಂಡಿದ್ದರು.

  Atal Bihari Vajpayee visited Jog falls Shivamogga remember by RSS worker

  ಜೋಗ ಜಲಪಾತ ಸೌಂದರ್ಯವನ್ನು ನೋಡಿದ ಅವರು ಆಶ್ಚರ್ಯ ಚಕಿತರಾದರು. ಜೋಗ ಜಲಪಾತದ ಒಂದು ನೋಟವನ್ನು ಕಣ್ಣಲ್ಲಿ ತುಂಬಿಕೊಂಡು ನಂತರ ಜಲಪಾತದ ಕೆಳ ಭಾಗಕ್ಕೆ ಹೋಗಲು ಒತ್ತಾಯಿಸಿದರು.

  ಜೋಗ ಜಲಪಾತದ ಕೆಳಗೆ ನೀರು ಮತ್ತು ನಿಂಬೆ ಹಣ್ಣಿನೊಂದಿಗೆ ಹೊರಟೆವು. ಯಾವುದೇ ಮೆಟ್ಟಿಲುಗಳಿಲ್ಲದ ಆ ಜಾಗದಲ್ಲಿ ಇಳಿಯುವುದು ನಿಜಕ್ಕೂ ಸವಾಲು ಆಗಿತ್ತು. ನಾವು ಇಬ್ಬರು ಮಾತ್ರವೇ ಫಾಲ್ಸ್ ಕೆಳ ಭಾಗಕ್ಕೆ ಹೋದೆವು.

  ವಿಡಿಯೋ ಸಾಂಗ್ ನಲ್ಲಿ ಅಟಲ್ -ಜಗಜೀತ್ ಸಿಂಗ್ -ಶಾರುಖ್

  ಕೆಳ ಭಾಗ ತಲುಪುತ್ತಿದ್ದಂತೆಯೇ ವಾಜಪೇಯಿ ಅವರು ಒಂದು ದೊಡ್ಡ ಬಂಡೆಯ ಮೇಲೆ ಮಲಗಿ, ಹಾಡಲು ಶುರು ಮಾಡಿದರು. ಅವರು ಸುಮಾರು ಅರ್ಧ ಗಂಟೆ ದೊಡ್ಡ ಕಲ್ಲಿನ ಮೇಲೆ ಮಲಗಿದ್ದ ನೆನಪು ಮೆರಯಲಾಗದು ಎಂದು ಆ ದಿನಗಳನ್ನು ಸುಬ್ಬಣ್ಣ ಅವರು ಇಂದು ಮೆಲುಕು ಹಾಕಿದರು.

  Atal Bihari Vajpayee visited Jog falls Shivamogga remember by RSS worker

  ಫಾಲ್ಸ್‌ ಮೇಲಕ್ಕೆ ಹತ್ತುವುದು ನಮ್ಮಿಬ್ಬರಿಗೆ ಸುಲಭ ಕೆಲಸವಾಗಿರಲಿಲ್ಲ. ಪರಿಸ್ಥಿತಿ ಕಠಿಣವಾಗಿದ್ದನ್ನು ಗಮನಿಸಿದ ವಾಜಪೇಯಿಜೀ ಏಕ್, ದೋ, ತೀನ್, ಚಾರ್.. ಎಣಿಸುವ ಮೂಲಕ 10 ಹೆಜ್ಜೆ ಮುಂದಕ್ಕೆ ಹೋಗುತ್ತಿದ್ದರು. ಅವರು ತಮ್ಮ ಶರ್ಟ್ ಪ್ಯಾಂಟ್ ಎರಡು ಬಿಚ್ಚಿಹಾಕಿ ಮೇಲಕ್ಕೆ ಹತ್ತಿದರು ನಂತರ ನಾವು ಒಟ್ಟಿಗೆ ಕುಳಿತು ವಿಶ್ರಾಂತಿ ತೆಗೆದುಕೊಂಡು ಜಲಪಾತ ಏರುತ್ತಾ ಮೇಲಕ್ಕೆ ಬಂದಾಗ ಮಧ್ಯಾಹ್ನವಾಗಿತ್ತು.

  ವಾಜಪೇಯಿ ಅವರಿಗೆ ಅಂತಿಮ ನಮನ ಸಲ್ಲಿಸಿದ ರಾಜ್ಯ ಬಿಜೆಪಿ ನಾಯಕರು

  ಮೇಲೆ ಬಂದ ನಂತರ ಸ್ವಲ್ಪ ಆಯಾಸಗೊಂಡಿದ್ದರು. ಹಾಗಾಗಿ ವಾಜಪೇಯಿ ಅವರೊಂದಿಗೆ ಕೆಲ ಸಮಯ ಕಾರಿನಲ್ಲಿ ಕುಳಿತು ನಿದ್ರಿಸಿದೆವು. ನಾವು ಮನೆಗೆ ಬರುವಷ್ಟರಲ್ಲಿ ಮಧ್ಯಾಹ್ನ 3 ಗಂಟೆಯಾಗಿತ್ತು. ಈ ನಡುವೆ ಸಹೋದರ ಶಂಕರ ಮೂರ್ತಿ, ವಾಜಪೇಯಿಜೀಯೊಂದಿಗೆ ಊಟ ಮಾಡಲು ಕೆಲವು ಸ್ನೇಹಿತರನ್ನು ಆಹ್ವಾನಿಸಿದ್ದರು. ಅವರು ನಮ್ಮೊಂದಿಗೆ ಒಂದು ಚಪಾತಿ ತಿಂದು ವಿಶ್ರಾಂತಿ ಪಡೆದರು ಎಂದು ಸುಬ್ಬಣ್ಣ ಹೇಳಿದರು.

  Atal Bihari Vajpayee visited Jog falls Shivamogga remember by RSS worker

  ನಾಲ್ಕು ಚಾಪತಿ ಮತ್ತು ಸಬ್ಜಿ : ಶಿವಮೊಗ್ಗದಿಂದ ಹರಿಹರಕ್ಕೆ ಹೊರಡಲು ವಾಜಪೇಯಿ ಅವರು ಮುಂದಾದರು. ನಾಲ್ಕು ಚಾಪತಿ ಮತ್ತು ಸಬ್ಜಿಯನ್ನು ಪ್ಯಾಕ್ ಮಾಡಲು ನನಗೆ ಹೇಳಿದರು. ನಾನು ಅವರನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ನಗರದ ರೈಲ್ವೆ ನಿಲ್ದಾಣಕ್ಕೆ ಬಿಟ್ಟು ರೈಲು ಹತ್ತಿಸಿದ ನಂತರ ಅವರು ನನಗೆ 'ಅರೆ ಸುಬ್ಬಾಣ್ಣಾ, ನೀವು ನಾಲ್ಕು ಚಾಪತಿ ಮತ್ತು ಸಬ್ಜಿಯನ್ನು ಪ್ಯಾಕ್ ಮಾಡಿದ್ದೀರಾ ತಾನೇ ?' ಎಂದು ಕೇಳಿದರು. ಇದು ಅವರು ಆಹಾರವನ್ನು ಪ್ರೀತಿಸುತ್ತಿದ್ದ ಮತ್ತು ತಮ್ಮ ಆತ್ಮೀಯರೊಂದಿಗೆ ಬೆರೆಯುವ ಪರಿಯಾಗಿತ್ತು ಎಂದು ಸುಬ್ಬಣ್ಣ ಅವರು ಅವರೊಂದಿಗೆ ಕೇಳದ ಸಮಯವನ್ನು ನೆನಪು ಮಾಡಿಕೊಂಡರು.

  ಶಿವಮೊಗ್ಗ ಜಿಲ್ಲೆಯಲ್ಲಿ ಅಟಲ್ ಜೀ ಕಳೆದ ಕ್ಷಣದಗಳು ಅಂದಿನ ನಾಯಕರಿಗೆ ಮರೆಯಲು ಸಾಧ್ಯವಿಲ್ಲ ಅವರದೂ ವ್ಯಕ್ತತ್ವವೇ ಹಾಗೆ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಮಕ್ಕಳೊಂದಿಗೆ ಮಕ್ಕಳಾಗಿ ವರ್ತಿಸುತ್ತಿದ್ದರು ಸರಳ ಸಜ್ಜನ ವ್ಯಕ್ತಿ ಎಷ್ಟೇ ಎತ್ತರಕ್ಕೆ ಏರಿದರು ನಡೆದು ಬಂದ ಹೆಜ್ಜೆಯನ್ನು ಅವರು ಎಂದು ಮರೆತು ಇರಲಿಲ್ಲ ಎಂದರು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Former Prime Minister Atal Bihari Vajpayee visited Jog falls Shivamogga, Karnataka. Here is remember by RSS worker Subbanna.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more