ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಭಿಮಾನಿಗಾಗಿ ಭದ್ರಾವತಿಗೆ ಬಂದಿದ್ದರು ವಾಜಪೇಯಿ

By Manjunatha
|
Google Oneindia Kannada News

Recommended Video

Atal Bihari Vajpayee : ಅಭಿಮಾನಿಗಳೆಂದ್ರೆ ಅಟಲ್‌ಗೆ ಅಚ್ಚುಮೆಚ್ಚು..! | Oneindia Kannada

ಬೆಂಗಳೂರು, ಆಗಸ್ಟ್‌ 16: ಅಟಲ್ ಬಿಹಾರಿ ವಾಜಪೇಯಿ ಅವರಿಗೂ ಕರ್ನಾಟಕಕ್ಕೂ ಅಳಿಯದ ನಂಟಿದೆ. ಅವರು ತಮ್ಮ ಕಷ್ಟದ ದಿನಗಳಲ್ಲಿ ಕರ್ನಾಟಕಕ್ಕೆ ಬಂದಿದ್ದರು. ಇಲ್ಲಿಂದಲೇ ಸ್ಫೂರ್ಥಿ ಪಡೆದು ಮುನ್ನುಗ್ಗಿದ್ದರು.

ಅದು 1984ರ ಸಮಯ ಕಾಂಗ್ರೆಸ್ ಪಕ್ಷ ಹಿಂದೆಂದೂ ಕಾಣದಂತ ವಿಜಯವನ್ನು ಲೋಕಸಭೆ ಚುನಾವಣೆಯಲ್ಲಿ ಕಂಡಿತ್ತು. ಅದಕ್ಕೆ ಕಾರಣವೂ ಇತ್ತು. ಅದಾಗ ತಾನೇ ಇಂದಿರಾ ಗಾಂಧಿ ಹತ್ಯೆಯಾಗಿತ್ತು.

'ಐ ಜಸ್ಟ್ ಕಾಂಟ್ ಫಾರ್ಗೆಟ್ ಮಂಗಳೂರು' ಎಂದಿದ್ದರು ವಾಜಪೇಯಿ'ಐ ಜಸ್ಟ್ ಕಾಂಟ್ ಫಾರ್ಗೆಟ್ ಮಂಗಳೂರು' ಎಂದಿದ್ದರು ವಾಜಪೇಯಿ

ದೇಶದೆಲ್ಲೆಡೆ ಕಾಂಗ್ರೆಸ್ ಹವಾ ಎದ್ದಿತ್ತು, ಆ ಹವಾಕ್ಕೆ ಬಿಜೆಪಿಯ ಮುಖ್ಯ ಮುಖ ಎನಿಸಿಕೊಂಡಿದ್ದ ವಾಜಪೇಯಿ ಅವರೂ ಸಹ ಸೋತುಬಿಟ್ಟಿದ್ದರು. ಬಿಜೆಪಿಗೆ ಅದು ಭಾರಿ ಹಿನ್ನಡೆ.

Atal Bihari Vajpayee came to Badravathi once

ವಾಜಪೇಯಿ ಅವರಂತಹಾ ಮೇರು ವ್ಯಕ್ತಿಯನ್ನು ಸೋಲಿಸಿದ ಜನರರಿರುವ ಈ ದೇಶದಲ್ಲಿ ನಾನು ಬದುಕಲಾರೆ ಎಂದು ಭದ್ರಾವತಿಯ ವಾಜಪೇಯಿ ಅಭಿಮಾನಿ ಲಕ್ಷ್ಮಿನಾರಾಯಣ ಎಂಬಾತ ಆತ್ಮಹತ್ಯೆ ಮಾಡಿಕೊಂಡರು.

1982 ರಲ್ಲಿ ಚಾಮರಾಜನಗರಕ್ಕೆ ಆಗಮಿಸಿದ್ದ ವಾಜಪೇಯಿ..!1982 ರಲ್ಲಿ ಚಾಮರಾಜನಗರಕ್ಕೆ ಆಗಮಿಸಿದ್ದ ವಾಜಪೇಯಿ..!

ಆತ್ಮಹತ್ಯೆ ವಿಷಯ ವಾಜಪೇಯಿ ಅವರಿಗೆ ತಲುಪಿ ಅಲ್ಲಿಂದ ಭದ್ರಾವತಿಗೆ ಬಂದಿದ್ದ ವಾಜಪೇಯಿ ಲಕ್ಷ್ಮಿನಾರಾಯಣ ಮನೆಗೆ ಭೇಟಿ ನೀಡಿ, ಸಾಂತ್ವಾನ ಹೇಳಿ, ಆತನ ತಂಗಿ, ತಮ್ಮನ ಓದಿನ ಜವಾಬ್ದಾರಿ ವಹಿಸಿಕೊಂಡಿದ್ದರು. ತಮ್ಮ ಹೋರಾಟ ನಿತ್ಯ ನಿರಂತರ ಎಂದು ಅಂದು ಹೇಳಿದ್ದ ವಾಜಪೇಯಿ ಮತ್ತೆ ಪಕ್ಷ ಕಟ್ಟುವ ಕಾಯಕದಲ್ಲಿ ತೊಡಗಿಕೊಂಡು ಅಧಿಕಾರ ಗದ್ದುಗೆ ಏರಿದ್ದರು.

English summary
Atal Bihari Vajpayee came to Badravathi once. His fan in Badravathi commits suicide because Vajpayee lost in Lok Sabha elections in 1984.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X