'ಯುಆರ್ ಅನಂತಮೂರ್ತಿ ಕರ್ನಾಟಕದ ಪೂನಂ ಪಾಂಡೆ'

Posted By:
Subscribe to Oneindia Kannada
BJP State spokes person Ayanur Manjunath terms UR Ananthamurthy as Karnataka's Poonam Pandey
ಶಿವಮೊಗ್ಗ, ಸೆಪ್ಟೆಂಬರ್ 18: 'ಮೋದಿ ಪ್ರಧಾನಿಯಾಗುವ ದೇಶದಲ್ಲಿ ನಾನಿರಲಾರೆ' ಎಂದಿರುವ ಜ್ಞಾನಪೀಠ ಸಾಹಿತಿ ಡಾ. ಯುಆರ್ ಅನಂತಮೂರ್ತಿ ಅವರು 'ಕರ್ನಾಟಕದ ಪೂನಂ ಪಾಂಡೆ' ಎಂದು ಬಿಜೆಪಿಯ ವಕ್ತಾರ ಆಯನೂರು ಮಂಜುನಾಥ್ ಬಣ್ಣಿಸಿದ್ದಾರೆ.

'ಪ್ರಚಾರಪ್ರಿಯ ಅನಂತಮೂರ್ತಿ ಅವರು ಒಬ್ಬ ಅವಕಾಶವಾದಿ, ನಂಬಿಕೆಗೆ ಅರ್ಹರಲ್ಲದ ವ್ಯಕ್ತಿ' ಎಂದು ಆಯನೂರು ಮಂಜುನಾಥ್ ತಿಳಿಸಿದ್ದಾರೆ.

'ಪೂನಂ ಪಾಂಡೆ ಎಂಬ ಮಾಡೆಲ್ ಭಾರತ ವಿಶ್ವ ಕಪ್ ಗೆದ್ದರೆ ಪೂರ್ಣ ಬೆತ್ತಲೆಯಾಗುತ್ತೇನೆ ಎಂದು ಹೇಳಿದ್ದರು. ತಕ್ಷಣ ಎಲ್ಲರೂ ಸದ್ಯ ಭಾರತ ವಿಶ್ವ ಕಪ್ ಗೆಲ್ಲದಿದ್ದರೂ ಪರವಾಗಿಲ್ಲ. ಆದರೆ ಈ ಹೆಣ್ಣುಮಗಳು ಬೆತ್ತಲಾಗುವುದನ್ನು ನಾವು ನೋಡಲಾರೆವು ಎಂದು ಮಾತನಾಡಿಕೊಂಡರು'.

'ಈ ಅನಂತಮೂರ್ತಿ ಪರಿಸ್ಥಿತಿಯೂ ಹಾಗೇ ಆಗಿದೆ. ತಮ್ಮ ವಿಚಿತ್ರ ಹೇಳಿಕೆಗಳ ಮೂಲಕ ಸಾಹಿತ್ಯ ಲೋಕದಲ್ಲಿ ಮೂರ್ತಿ ಬೆತ್ತಲಾಗುತ್ತಿದ್ದಾರೆ' ಎಂದುಆಯನೂರು ಮಂಜುನಾಥ್ ವಿಷಾದಿಸಿದ್ದಾರೆ.

'ನನ್ನದೂ ವೈಯಕ್ತಿಕ ಅಭಿವ್ಯಕ್ತಿ ಸ್ವಾತಂತ್ರ್ಯವೇ. ಕರ್ನಾಟಕದಿಂದ ಎಲ್ಲ ಸವಲತ್ತುಗಳನ್ನು ಪಡೆದಿರುವ ಯುಆರ್ ಅನಂತಮೂರ್ತಿ ಅವರು ಸಾಹಿತ್ಯ ಲೋಕಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ. ಅದರ ಬಗ್ಗೆ ನನಗೂ ಗೌರವವಿದೆ.

ಆದರೆ ಅದರಾಚೆಗೆ ದಿನಕ್ಕೊಂದು ಹೇಳಿಕೆ ನೀಡುತ್ತಾ ರೋಚಕವಾಗಿ. ಚೀಪಾಗಿ ಮಾತನಾಡುವ ಯುಆರ್ ಅನಂತಮೂರ್ತಿ ಅವರು ನಿಜಕ್ಕೂ ಕರ್ನಾಟಕದ ಪೂನಂ ಪಾಂಡೆ' ಎಂದು ಆಯನೂರು ಹೇಳಿದ್ದಾರೆ.

ಮೋದಿ ಕುರಿತಾದ ಹೇಳಿಕೆಗೆ ನಾನು ಈಗಲೂ ಬದ್ಧ:

'ಆಯನೂರು ಮಂಜುನಾಥ್ ಅವರ ಮಾತಿಗೆ ತಾವು ಯಾವುದೇ ಪ್ರತಿಕ್ರಿಯೆ ನೀಡಲಾರೆ. ಯಾರ ಬಗ್ಗೆ ನನಗೆ ಗೌರವವಿಲ್ಲವೋ ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಮೋದಿ ಬಗ್ಗೆ ನಾನು ಈ ಹಿಂದೆ ನೀಡಿದ್ದ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದೇನೆ' ಎಂದು ಅನಂತಮೂರ್ತಿ ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BJP State spokes person Ayanur Manjunath terms UR Ananthamurthy as Karnataka's Poonam Pandey. Ayanur Manjunath came down heavily on famous Kannada writer Ananthamurthy for issuing statement against BJP and Modi. Earlier, BJP State General Secretary CT Ravi had termed UR Ananthamurthy as an intestinal parasite.
Please Wait while comments are loading...