ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಲ್ಕು ವರ್ಷಗಳ ನಂತರ ಲಿಂಗನಮಕ್ಕಿ ಜಲಾಶಯ ಭರ್ತಿ

By Nayana
|
Google Oneindia Kannada News

ಶಿವಮೊಗ್ಗ, ಆಗಸ್ಟ್ 14 : ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಎರಡು ವಾರಗಳಿಂದ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಲಿಂಗನಮಕ್ಕಿ ಜಲಾಶಯ ಭರ್ತಿಯಾಗಿದ್ದು, 3 ಕ್ರಸ್ಟ್ ಗೇಟ್‌ನಿಂದ ಒಂದು ಲಕ್ಷ ಕ್ಯೂಸೆಕ್‌ ನೀರು ಹೊರಕ್ಕೆ ಬಿಡಲಾಗಿದೆ.

72ನೇ ಸ್ವಾತಂತ್ರ್ಯ ದಿನಾಚರಣೆ 2018

ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಬೆಂಬಿಡದೆ ಮಳೆ ಸುರಿಯುತ್ತಿದೆ, ಲಿಂಗನಮಕ್ಕಿಯಿಂದ ಇನ್ನೂ ಹೆಚ್ಚಿನ ನೀರು ಹೊರ ಬಿಡುವ ಸಾಧ್ಯತೆ ಇದೆ, ನಾಲ್ಕು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಲಿಂಗನಮಕ್ಕಿ ಜಲಾಶಯ ಭರ್ತಿಯಾಗಿದೆ.

ಲಿಂಗನಮಕ್ಕಿ ಜಲಾಶಯ ಭರ್ತಿ, ಪ್ರವಾಹದ ಎಚ್ಚರಿಕೆಲಿಂಗನಮಕ್ಕಿ ಜಲಾಶಯ ಭರ್ತಿ, ಪ್ರವಾಹದ ಎಚ್ಚರಿಕೆ

ಶರಾವತಿ ನದಿ ಪಾತ್ರದ ಜನತೆಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ, ಒಳಹರಿವು 95000ಕ್ಯೂಸೆಕ್‌ ತಲುಪಿದ ಪರಿಣಾಮ ಎಚ್ಚರಿಕೆಯಿಂದ ಇರಬೇಕಿದೆ, ಮಹರಾಷ್ಟ್ರದಲ್ಲಿ ಮಳೆ ಅಬ್ಬರ, ರಾಜ್ಯದಲ್ಲಿ ಪ್ರವಾಹ. ಕಂಪ್ಲಿ ಮತ್ತು ಗಂಗಾವತಿಗೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗಿದೆ. ಕೆಲವೆಡೆ ನದಿ ನೀರು ಅಪಾಯದ ಮಟ್ಟ ತಲುಪಿದೆ.

After four years Linganamakki dam over flowing

ಜನ ಜೀವನ ಅಸ್ತವ್ಯಸ್ತಗೊಂಡಿದೆ ಸಂಚಾರಕ್ಕೂ ಪರದಾಟ ಅನುಭವಿಸುವಂತಾಗಿದೆ. ಇನ್ನು ತುಂಗಭದ್ರಾ ಜಲಾಶಯ ಕೂಡ ಅಪಾಯದ ಮಟ್ಟವನ್ನು ತಲುಪಿದೆ. ಇನ್ನು ಕೆಆರ್‌ಎಸ್‌ ಜಲಾಶಯ ಕೂಡ ಭರ್ತಿಯಾಗಿದ್ದು ಮಂಗಳವಾರ 1,20,000 ಕ್ಯೂಸೆಕ್‌ ನೀರು ಬಿಡಲಾಗಿದೆ. ಇದರಿಂದ ಶ್ರೀರಂಗಪಟ್ಟಣ ಸುತ್ತಮುತ್ತಲಿನ ಜಮೀನುಗಳು ಸಂಪೂರ್ಣವಾಗಿ ಜಲಾವೃತವಾಗಿದೆ. ಇನ್ನು ಹಂಪಿ ಡ್ಯಾಂಗೆ ಪ್ರವಾಸಿಗರು ದೌಡಾಯಿಸುತ್ತಿದ್ದಾರೆ.

English summary
After consecutive four years of lack of rain, Linganamakki dam is over flowing this year. It is expected to release one lakh cueseqs of water in a day or two.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X