ಶಿವಮೊಗ್ಗ ಎಸ್‌ಪಿಯಾಗಿ ಅಭಿನವ್ ಖರೆ ಅಧಿಕಾರ ಸ್ವೀಕಾರ

Posted By:
Subscribe to Oneindia Kannada

ಶಿವಮೊಗ್ಗ, ಆಗಸ್ಟ್ 26 : ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಭಿನವ್ ಖರೆ ಅವರು ಅಧಿಕಾರ ವಹಿಸಿಕೊಂಡರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ರವಿ ಡಿ. ಚನ್ನಣ್ಣನವರ್‌ ಅವರನ್ನು ಸರ್ಕಾರ ಮೈಸೂರಿಗೆ ವರ್ಗಾವಣೆ ಮಾಡಿತ್ತು

ಶುಕ್ರವಾರ ರವಿ ಡಿ. ಚನ್ನಣ್ಣನವರ್‌ ಅವರು ಅಭಿನವ್‌ ಖರೆ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು. ಕರ್ನಾಟಕ ಸರ್ಕಾರ ಸೋಮವಾರ ರವಿ ಡಿ. ಚನ್ನಣ್ಣನವರ್‌ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಮೈಸೂರು ಎಸ್‌ಪಿಯಾಗಿ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.[ಶಿವಮೊಗ್ಗ ಎಸ್ ಪಿ ವರ್ಗಾವಣೆ]

Abhinav Khare takes charge as SP of Shivamogga

ಅಧಿಕಾರವಹಿಸಿಕೊಂಡ ಬಳಿಕ ಮಾತನಾಡಿದ ಅಭಿನವ್ ಖರೆ ಅವರು, 'ಗಣಪತಿ ಉತ್ಸವ ಸಮೀಪದಲ್ಲಿದ್ದು, ಶಾಂತಿಯುತವಾಗಿ ಉತ್ಸವ ನಡೆಸಲು ಆದ್ಯತೆ ನೀಡಲಾಗುತ್ತದೆ. ಕಳೆದ ವರ್ಷ ಅನುಸರಿಸಿದ ಕ್ರಮಗಳನ್ನು ಈ ವರ್ಷವೂ ಮುಂದುವರೆಸಿಕೊಂಡು ಹೋಗಲಾಗುತ್ತದೆ' ಎಂದರು ಹೇಳಿದರು.[ಶಿವಮೊಗ್ಗ ಎಸ್ಪಿ ಕೈಗೆ ಇನ್ಸ್ ಪೆಕ್ಟರ್ ಸಿಕ್ಕಿಬಿದ್ದದ್ದು ಹೇಗೆ?]

'ರವಿ ಡಿ. ಚನ್ನಣ್ಣನವರ್‌ ಅವರ ಕಾರ್ಯಶೈಲಿ ವಿಭಿನ್ನವಾಗಿದ್ದು, ಅವರು ಜಿಲ್ಲೆಯಲ್ಲಿ ಈಗಾಗಲೇ ಕೈಗೊಂಡಿರುವಂತಹ ಉತ್ತಮ ಕಾರ್ಯಗಳನ್ನು ಮುಂದುವರಸಿಕೊಂಡು ಹೋಗಲಾಗುತ್ತದೆ' ಎಂದು ತಿಳಿಸಿದರು.

Abhinav Khare

ವರ್ಗಾವಣೆಗೊಂಡ ಐಪಿಎಸ್ ಅಧಿಕಾರಿಗಳು

* ಸಿಐಡಿ ಎಸ್‌ಪಿ ಡಾ. ಡಿ.ಸಿ.ರಾಜಪ್ಪ - ಬೆಂಗಳೂರು ರೈಲ್ವೆ ಎಸ್‌ಪಿ
* ಮೈಸೂರು ಎಸ್‌ಪಿ ಅಭಿನವ್‌ ಖರೆ - ಶಿವಮೊಗ್ಗ ಎಸ್‌ಪಿ
* ಶಿವಮೊಗ್ಗ ಎಸ್‌ಪಿ ಎಸ್‌ಪಿ ರವಿ ಡಿ. ಚನ್ನಣ್ಣನವರ್‌ - ಮೈಸೂರು ಎಸ್‌ಪಿ

ವಿಡಿಯೋ : ರವಿ ಡಿ. ಚನ್ನಣ್ಣನವರ್‌ ಅವರ ಸ್ಫೂರ್ತಿ ತುಂಬುವ ಮಾತುಗಳು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Abhinav Khare took charge as superintendent of police Shivamoga on Friday, August 26, 2016.
Please Wait while comments are loading...