224 ಕ್ಷೇತ್ರದ ಹೆಸರು ಹೇಳುವ ಶಿವಮೊಗ್ಗದ 6ರ ಪೋರ!

Posted By: ಶಿವಮೊಗ್ಗ ಪ್ರತಿನಿಧಿ
Subscribe to Oneindia Kannada

ಶಿವಮೊಗ್ಗ, ಏಪ್ರಿಲ್ 12 : ಶಿವಮೊಗ್ಗದ 6 ವರ್ಷದ ಪೋರ ಈಗ ರಾಜ್ಯಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದಾನೆ. ಎರಡು ನಿಮಿಷದಲ್ಲಿ ಈತ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಹೆಸರನ್ನು ಪಟಪಟನೇ ಹೇಳುತ್ತಾನೆ. ಜಿಲ್ಲಾಧಿಕಾರಿಗಳು ಸಹ ಈ ಪೋರ ಸಾಧನೆಗೆ ಭೇಷ್ ಎಂದಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಹೆಸರನ್ನು ಹೇಳಲು ಬಹುತೇಕ ಮಂದಿ ಏದುಸಿರು ಬಿಡುವ ಪರಿಸ್ಥಿತಿ ಇರುವಾಗ ಶಿವಮೊಗ್ಗದ ವಿನೋಬ ನಗರದ ಈ ಆರು ವರ್ಷದ ಇಂದ್ರಜಿತ್ ಒಂದೇ ಉಸಿರಿನಲ್ಲಿ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳ ಹೆಸರನ್ನು ಕ್ರಮಬದ್ಧವಾಗಿ ಹೇಳುತ್ತಾನೆ.

ಶಿವಮೊಗ್ಗ ಜಿಲ್ಲೆಯ ವಿಧಾನಸಭಾ ಕ್ಷೇತ್ರದ ಸಮಸ್ಯೆಗಳು

ವಿಧಾನಸಭಾ ಕ್ಷೇತ್ರ ಸಂಖ್ಯೆ ಒಂದು ನಿಪ್ಪಾಣಿಯಿಂದ ಆರಂಭಿಸಿ 224 ನೇ ಕ್ಷೇತ್ರವಾದ ಗುಂಡ್ಲುಪೇಟೆವರೆಗೆ ಯಾವುದೇ ತಪ್ಪಿಲ್ಲದಂತೆ ಹೇಳುವ ಈ ಬಾಲಕ ಅದರೊಂದಿಗೆ ಎಲ್ಲರೂ ಮೇ 12ರಂದು ನಡೆಯುವ ಚುನಾವಣೆಯಲ್ಲಿ ತಪ್ಪದೇ ಮತ ಚಲಾಯಿಸುವಂತೆ ಮನವಿಯನ್ನೂ ಮಾಡುತ್ತಿದ್ದಾನೆ.

6 year old boy will rattle all 224 Assembly constituencies names

ಜಿಲ್ಲಾಧಿಕಾರಿ ಎಂ.ಲೋಕೇಶ್ ಅವರು ಎರಡು ದಿನಗಳ ಹಿಂದೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 'ಜಿಲ್ಲೆಯ ಚುನಾವಣಾ ಜಾಗೃತಿ ಅಭಿಯಾನದ ಐಕಾನ್ ಆಗಿ ಈ ಪುಟ್ಟ ಪೋರ ಇಂದ್ರಜಿತ್‍ನನ್ನು ಘೋಷಣೆ ಮಾಡಿದ್ದಾರೆ.'

ಕ್ಷೇತ್ರ ಪರಿಚಯ : ಶಿವಮೊಗ್ಗ ನಗರದಲ್ಲಿ ಈ ಬಾರಿ ಕಮಲ ಅರಳುವುದೇ?

'ಎಲ್ಲಾ ವಿಧಾನಸಭಾ ಕ್ಷೇತ್ರಗಳ ಹೆಸರನ್ನು ನೆನಪಿಟ್ಟುಕೊಂಡು ತಪ್ಪಿಲ್ಲದಂತೆ ಹೇಳುವ ಈ ಪುಟ್ಟ ಬಾಲಕ ಪ್ರತಿಯೊಬ್ಬರಿಗೂ ಮಾದರಿಯಾಗಿದ್ದಾನೆ. ಮತದಾರರ ಜಾಗೃತಿ ಐಕಾನ್ ಆಗಿ ಈ ಬಾಲಕನನ್ನು ಆಯ್ಕೆ ಮಾಡಲಾಗಿದ್ದು, ಪ್ರತಿಯೊಬ್ಬರೂ ಮತಗಟ್ಟೆಗೆ ಬಂದು ತಪ್ಪದೇ ಮತ ಚಲಾಯಿಸಲು ಈ ಬಾಲಕ ಸ್ಪೂರ್ತಿಯಾಗಲಿ' ಎಂದು ಜಿಲ್ಲಾಧಿಕಾರಿಗಳು ಹೇಳಿದರು.

'ಕಳೆದ ಕೆಲವು ತಿಂಗಳಿನಿಂದ ನನ್ನ ಮಗನಿಗೆ ವಿಧಾನಸಭಾ ಕ್ಷೇತ್ರಗಳ ಹೆಸರನ್ನು ಕಲಿಸಲು ಆರಂಭಿಸಿದೆ. ಆತನ ಉತ್ಸಾಹದಿಂದಾಗಿ ಎಲ್ಲಾ ಕ್ಷೇತ್ರಗಳ ಹೆಸರನ್ನು ಕಂಠಪಾಠ ಮಾಡಿದ್ದಾನೆ. ಇದಕ್ಕಾಗಿ ಆತನ ಮೇಲೆ ನಾವು ಯಾವುದೇ ಒತ್ತಡವನ್ನು ಹೇರಿಲ್ಲ' ಎಂದು ಇಂದ್ರಜಿತ್ ತಂದೆ ಶಿವಕುಮಾರ್ ಸಂತಸ ಹಂಚಿಕೊಂಡಿದ್ದಾರೆ.

6 year old boy will rattle all 224 Assembly constituencies names

ಇಂದ್ರಜಿತ್ ತಂದೆ ಶಿವಕುಮಾರ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಣೆಹೊಸೂರಿನಲ್ಲಿ ಶಿಕ್ಷಕರು. 'ನನ್ನ ಮಗ ಸಣ್ಣಂದಿನಿಂದಲು ಬಲು ಚೂಟಿ. ಏನೇ ಹೇಳಿದರೂ ತಕ್ಷಣ ಅದನ್ನು ಗ್ರಹಿಸಿ ಮನನ ಮಾಡಿಕೊಳ್ಳುತ್ತಾನೆ. ಆತನನ್ನು ಚುನಾವಣಾ ಕಾರ್ಯದ ಜಿಲ್ಲಾ ಐಕಾನ್ ಆಗಿ ಆಯ್ಕೆ ಮಾಡಿರುವುದು ಹೆಮ್ಮೆ ಅನಿಸುತ್ತಿದೆ' ಎಂದರು.

ಇಂದ್ರಜಿತ್ ರಾಯಲ್ ಡೈಮಂಡ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ 1ನೇ ತರಗತಿ ಓದುತ್ತಿದ್ದಾನೆ. ತಾಯಿ ಆಶಾ ಅವರು ಗೃಹಿಣಿಯಾಗಿದ್ದಾರೆ. ಈ ಬಾಲಕನ ಪ್ರತಿಭೆಯನ್ನು ವಿಡಿಯೋ ರೆಕಾರ್ಡ್ ಮಾಡಲಾಗಿದ್ದು, ವಿಡಿಯೋವನ್ನು ಡೆಪ್ಯುಟಿ ಕಮಿಷನರ್ ಶಿವಮೊಗ್ಗ ಫೇಸ್‍ಬುಕ್ ಪೇಜ್‍ನಲ್ಲಿ ಅಪ್‍ಲೋಡ್ ಮಾಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
6-year-old boy of Shivamogga Indrajith has been declared as the district icon for the Systematic Voter's Education and Electoral Participation (SVEEP) campaign of the Election Commission. Indrajith who can rattle off the names of all the 224 Assembly constituencies in Karnataka

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ