ಶಿವಮೊಗ್ಗ: ಪಿಯು ವಿದ್ಯಾರ್ಥಿನಿ ಮೇಲೆ 6 ಮಂದಿ ಗ್ಯಾಂಗ್ ರೇಪ್

Posted By: Prithviraj
Subscribe to Oneindia Kannada

ಶಿವಮೊಗ್ಗ, ಅಕ್ಟೋಬರ್, 24: ಹದಿನೇಳು ವರ್ಷದ ಪಿ.ಯು. ವಿದ್ಯಾರ್ಥಿನಿ ಮೇಲೆ ದುಷ್ಕರ್ಮಿಗಳು 6 ಮಂದಿ ದುಷ್ಕರ್ಮಿಗಳು ಅತ್ಯಾಚಾರ ಮಾಡಿ 46ದಿನಗಳಿಂದ ಯುವತಿಯನ್ನು ಬಂಧನದಲ್ಲಿಟ್ಟಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಶಿವಮೊಗ್ಗ ಹೊರವಲಯದ ಸಕ್ರೆಬೈಲಿನಲ್ಲಿ ಆರು ಮಂದಿ ದುಷ್ಕರ್ಮಿಗಳ ತಂಡ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

6 men gangraped Bengaluru PU student in Shimoga

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀರು ನಾಲ್ಕು ಮಂದಿ ಕಾಮುಕರನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಲಾಗಿದೆ ಎಂದು ಶಿವಮೊಗ್ಗ ಜಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ತಿಳಿಸಿದ್ದಾರೆ.

ದುಷ್ಕರ್ಮಿಗಳ ವಿರುದ್ಧ ಶಿವಮೊಗ್ಗ ಸುರಭಿ ಮಹಿಳಾ ಸಾಂತ್ವಾನ ಕೇಂದ್ರದಲ್ಲಿ ದೂರು ದಾಖಲಾಗಿದ್ದು, ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಘಟನೆ ಹಿನ್ನೆಲೆ:

ಸಂತ್ರಸ್ತ ವಿದ್ಯಾರ್ಥಿನಿಯು ಬೆಂಗಳೂರಿನ ಕಾಲೇಜೊಂದರಲ್ಲಿ ಪಿ.ಯು. ವ್ಯಾಸಾಂಗ ಮಾಡುತ್ತಿದ್ದಳು, ಮನೆಯವರೊಂದಿಗೆ ಜಗಳ ಮಾಡಿಕೊಂಡು ಶಿವಮೊಗ್ಗ ಟ್ರೈನ್ ಹತ್ತಿ ಬಂದಿದ್ದಾಳೆ.

ಶಿವಮೊಗ್ಗ ರೈಲ್ವೇ ನಿಲ್ದಾಣದಲ್ಲಿ ಇಳಿದು ಸಹ್ಯಾದ್ರಿ ಕಾಲೇಜಿಗೆ ಹೋಗಬೇಕೆಂದು ಚಾಲಕ ಶಾರುಖ್ ಎಂಬುವವರ ಆಟೋ ಹತ್ತಿದ್ದಾಳೆ.

ಆಟೋ ಸ್ವಲ್ಪ ದೂರ ಕ್ರಮಿಸುತಿದ್ದಂತೆಯೇ ಚಾಲಕ ಶಾರುಖ್ ನ ಮತ್ತಿಬ್ಬರು ಸ್ನೇಹಿತರು ಹತ್ತಿದ್ದಾರೆ. ಕೂಡಲೇ ವಿದ್ಯಾರ್ಥಿನಿ ಆಕ್ಷೇಪಿಸಿದ್ದಾಳೆ. ಆದರೆ ಚಾಲಕ ಶಾರುಖ್ ಇವರು ಸಹ ಸಹ್ಯಾದ್ರಿ ಕಾಲೇಜು ಬಳಿ ಇಳಿದುಕೊಳ್ಳುತ್ತಾರೆ ಎಂದು ಹೇಳಿದ್ದಾನೆ.

ಶಾರುಖ್ ಆಟೋವನ್ನು ಸಹ್ಯಾದ್ರಿ ಕಾಲೇಜು ಬಳಿ ತೆಗೆದುಕೊಂಡು ಹೋಗದೆ ತುಂಗಭದ್ರಾ ನದಿ ಸಮೀಪದ ರಸ್ತೆ ಹಿಡಿದು ನೇರವಾಗಿ ಸಕ್ರೆಬೈಲಿನತ್ತ ಹೋಗಿದ್ದಾನೆ. ದಾರಿ ತಪ್ಪಿದ್ದನ್ನು ಪ್ರಶ್ನಿಸಿ ವಿದ್ಯಾರ್ಥಿನಿ ಜಗಳ ಮಾಡಿದ್ದಾಳೆ.

ಈ ದುರ್ಷರ್ಮಿಗಳು ವಿದ್ಯಾರ್ಥಿನಿಯ ಬಾಯಿಗೆ ಬಟ್ಟೆ ತುರುಕಿ ಬಾಯಿ ಮುಚ್ಚಿಸಿದ್ದಾರೆ. ಈ ವೇಳೆಗಾಗಲೇ ಸ್ಥಳಕ್ಕೆ ಇನ್ನಿಬ್ಬರು ದುಷ್ಕರ್ಮಿಗಳು ಬಂದಿದ್ದಾರೆ. ಆರು ಮಂದಿ ಸೇರಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ವಿದ್ಯಾರ್ಥಿನಿ ದೂರು ನೀಡಿದ್ದಾಳೆ.

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಅತ್ಯಾಚಾರ (ಸೆಕ್ಷನ್ 376), ಲೈಂಗಿಕ ದೌರ್ಜನ್ಯ (ಸೆಕ್ಷನ್ 370) ಕೇಸ್ ದಾಖಲಿಸಲಾಗಿದೆ.

ಬಿಜೆಪಿ ಖಂಡನೆ:

ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ವಿಧಾನ ಪರಿಷತ್ ಸದಸ್ಯ ಎಂ.ಬಿ.ಭಾನುಪ್ರಕಾಶ್, ಸೇರಿದಂತೆ ಇತರ ಬಿಜೆಪಿ ಮುಖಂಡರು ಸೋಮವಾರ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ಅವರನ್ನು ಭೇಟಿ ಮಾಡಿ ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಒತ್ತಾಯ ಮಾಡಿದ್ದಾರೆ.

ಘಟನೆಯನ್ನು ಖಂಡಿಸಿ ಎಬಿವಿಪಿ ಮುಖಂಡರು ಅಕ್ಟೋಬರ್ 26ರಂದು ಶಿವಮೊಗ್ಗದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A 17-year-old girl was raped by 6 culprites in Shimoga district Sakrebylu. on the pretext of helping her and was kept in confinement for 46 days here.
Please Wait while comments are loading...