ಶಿವಮೊಗ್ಗ : ಭೀಕರ ಅಪಘಾತ, 6 ಜನ ಸ್ಥಳದಲ್ಲೇ ಸಾವು

Posted By: Gururaj
Subscribe to Oneindia Kannada

ಶಿವಮೊಗ್ಗ, ಆಗಸ್ಟ್. 28 : ಶಿವಮೊಗ್ಗ-ಸಾಗರ ರಸ್ತೆಯ ಆಯನೂರು ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. 6 ಜನರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕುಂಸಿ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.

ವಿಜಯಪುರ: ಮನೆ ಗೋಡೆ ಕುಸಿದು ಮೂವರ ದುರ್ಮರಣ

ಸೋಮವಾರ ಮಧ್ಯಾಹ್ನ ಸಾಗರಕ್ಕೆ ತೆರಳುತ್ತಿದ್ದ ಲಾರಿ ಮಾರುತಿ ಕಾರಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಕಾರಿನಲ್ಲಿ ಎಲ್ಲರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

6 dead in road accident in Shivamogga

ಮೃತಪಟ್ಟವರು ಹೊಸನಗರದ ಬ್ರಹ್ಮೇಶ್ವರದವರು ಎಂದು ತಿಳಿದುಬಂದಿದೆ. ಕುಂಸಿ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಚಿಕ್ಕಮಗಳೂರು : ಬೈಕ್‌ಗೆ ಗುದ್ದಿದ ಶಾಸಕರ ಕಾರು, ಸವಾರನಿಗೆ ಗಾಯ

ಮೃತಪಟ್ಟವರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕುಂಸಿ ಪೊಲೀಸ್ ಠಾಣೆಗೆ : 08182-262332 ಕರೆ ಮಾಡಬಹುದಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Six people died on the spot when truck rammed into Maruthi car near Aynur, Shivamogga on August 28, 2017. Kumsi police visited the spot.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X