ಶಿವಮೊಗ್ಗದಲ್ಲಿ ಮೂರು ದಿನಗಳ ಕಾಲ ವೈನ್ ಫೆಸ್ಟ್

Posted By: Gururaj
Subscribe to Oneindia Kannada

ಶಿವಮೊಗ್ಗ, ಅಕ್ಟೋಬರ್ 11 : ತೋಟಗಾರಿಕಾ ಇಲಾಖೆ ವತಿಯಿಂದ ಶಿವಮೊಗ್ಗದಲ್ಲಿ 'ಶಿವಮೊಗ್ಗ ವೈನ್ ಫೆಸ್ಟ್' ಆಯೋಜಿಸಲಾಗಿದೆ. ಅಕ್ಟೋಬರ್ 13ರಂದು ಫೆಸ್ಟ್‌ಗೆ ಚಾಲನೆ ದೊರೆಯಲಿದ್ದು, ಮೂರು ದಿನಗಳ ಕಾಲ ಬಗೆ-ಬಗೆಯ ವೈನ್ ರುಚಿಯನ್ನು ಸವಿಯಬಹುದಾಗಿದೆ.

ಲಕ್ಷಾಂತರ ಪ್ರವಾಸಿಗರನ್ನು ಸೆಳೆದ ಹೆರಿಟೇಜ್ ವೈನ್ ಟೂರ್

ತೋಟಗಾರಿಕಾ ಇಲಾಖೆ, ಕರ್ನಾಟಕ ದ್ರಾಕ್ಷಾರಸ ಮಂಡಳಿ ಮತ್ತು ಶಿವಮೊಗ್ಗ ಜಿಲ್ಲಾ ಹಾಪ್ ಕಾಮ್ಸ್ ವತಿಯಿಂದ ಮೂರು ದಿನಗಳ SHIVAMOGGA WINEFEST ಹಮ್ಮಿಕೊಳ್ಳಲಾಗಿದೆ. ಫೆಸ್ಟ್‌ನಲ್ಲಿ ಪಾಲ್ಗೊಳ್ಳಲು ಪ್ರವೇಶ ದರ 20 ರೂ.ಗಳು.

ಆಹಾರ ಸಂಸ್ಕೃತಿ: ವೈನ್ ಕುಡಿದು ವೈನಾಗಿರಿ!

3 Days of wine fest in Shivamogga from October 13 to 15, 2017

ಪ್ರತಿದಿನ ಬೆಳಗ್ಗೆ 11 ರಿಂದ ರಾತ್ರಿ 9 ಗಂಟೆಯ ತನಕ ಫೆಸ್ಟ್ ನಡೆಯಲಿದೆ. ವಿನೋಬನಗರದಲ್ಲಿರುವ ಜಿಲ್ಲಾ ಹಾಪ್‌ಕಾಮ್ಸ್ ಆವರಣದಲ್ಲಿ ಫೆಸ್ಟ್ ಆಯೋಜಿಸಲಾಗಿದೆ. ವೈನ್ ಮಾರಾಟದ ಮೇಲೆ ಶೇ 10ರಷ್ಟು ರಿಯಾಯಿತಿ ಇರುತ್ತದೆ.

11 ಜಿಲ್ಲೆಗಳಲ್ಲಿ ಸ್ಥಾಪನೆಯಾಗಲಿದೆ ವೈನ್ ಬೋಟಿಕ್

ಮೇಳದಲ್ಲಿ ವಿವಿಧ ಬಗೆಯ ವೈನ್‌ ಗಳ ರುಚಿಯನ್ನು ಸವಿಯಬಹುದಾಗಿದೆ. ಪ್ರತಿ ದಿನ ಸಂಜೆ ವಿವಿಧ ತಂಡಗಳ ಸಂಗೀತ ಕಾರ್ಯಕ್ರಮನ್ನು ಆಯೋಜನೆ ಮಾಡಲಾಗಿದೆ. 21 ವರ್ಷ ಮೇಲ್ಪಟ್ಟವರು ಮಾತ್ರ ಮೂರು ದಿನಗಳ ಕಾಲ ನಡೆಯುವ ಫೆಸ್ಟ್‌ನಲ್ಲಿ ಪಾಲ್ಗೊಳ್ಳಬಹುದಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Horticulture department has organized wine-fest in Shivamogga from October 13 to 15, 2017 at district HOPCOMS ground, Vinoba Nagar.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ