ಶಿವಮೊಗ್ಗ : 20 ಲಕ್ಷ ರುಪಾಯಿ ಮೌಲ್ಯದ ಗಾಂಜಾ ಗಿಡ ವಶ

By: ಶಿವಮೊಗ್ಗ ಪ್ರತಿನಿಧಿ
Subscribe to Oneindia Kannada

ಶಿವಮೊಗ್ಗ, ಅಕ್ಟೋಬರ್ 7: ಮೆಕ್ಕೆಜೋಳ ಹೊಲದಲ್ಲಿ ಬೆಳೆದಿದ್ದ 400ಕ್ಕೂ ಹೆಚ್ಚು ಗಾಂಜಾ ಗಿಡಗಳನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಶನಿವಾರ ಬೆಳಗ್ಗೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು ಕುಂಚೇನಹಳ್ಳಿ ಸಮೀಪದ ಹೊಲವೊಂದರಲ್ಲಿ ಬೆಳೆದಿದ್ದ 20 ಲಕ್ಷ ರುಪಾಯಿ ಮೌಲ್ಯದ ಗಾಂಜಾ ಗಿಡ ವಶಪಡಿಸಿಕೊಂಡು, ಪ್ರಕರಣ ದಾಖಲಿಸಿದ್ದಾರೆ.

ನಕಲಿ ಚಿನ್ನ ತೋರಿಸಿ ವಂಚಿಸುತ್ತಿದ್ದ ಚಾಣಾಕ್ಷರ ತಂಡ ಕಂಬಿ ಹಿಂದೆ

ಅಬಕಾರಿ ಜಿಲ್ಲಾ ಅಧಿಕಾರಿ ವೈ.ಆರ್. ಮೋಹನ್ ಮಾರ್ಗದರ್ಶನದಲ್ಲಿ ಅಬಕಾರಿ ಇಲಾಖೆ ಇನ್ ಸ್ಪೆಕ್ಟರ್ ಗಳಾದ ಶೀಲಾ, ಹನುಮಂತಪ್ಪ, ಮೈಲಾ ನಾಯ್ಕ, ಸಬ್ ಇನ್ ಸ್ಪೆಕ್ಟರ್ ಗಳಾದ ಮಂಜಯ್ಯ, ಲೋಕೇಶ್, ದೀಪ ಅವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತು.

20 lakhs worth of marijuana seized by Shivamogga police

ದಾಳಿಯ ಸಂದರ್ಭದಲ್ಲಿ ಆರೋಪಿಗಳು ಪರಾರಿಯಾಗಿದ್ದಾರೆ. ಜಿಲ್ಲೆಯಲ್ಲಿ ಗಾಂಜಾ ಮಾಫಿಯಾ ಮಿತಿ ಮೀರಿದ್ದು, ಅಪರಾಧ ಚಟುವಟಿಕೆ ಹೆಚ್ಚಲು ಕಾರಣವಾಗಿದೆ. ಎಸ್ಪಿ ಅಭಿನವ ಖರೆ ಗಾಂಜಾ ಮಾಫಿಯಾ ಮಟ್ಟ ಹಾಕಲು ಕಠಿಣ ಕ್ರಮ ಕೈಗೊಂಡಿದ್ದಾರೆ. ಇದಕ್ಕೆ ಪೂರಕವಾಗಿ ಶನಿವಾರ ದಾಳಿ ನಡೆದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
20 lakhs worth of marijuana seized by Shivamogga police on Saturday. Marijuana grown in agriculture field.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ