ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ : ಜೂಜಾಡುತ್ತಿದ್ದ ಪಾಲಿಕೆ ಆಡಳಿತ ಪಕ್ಷದ ನಾಯಕ ಬಂಧನ

By ನಮ್ಮ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಅಕ್ಟೋಬರ್ 13 : ಅಕ್ರಮವಾಗಿ ಜೂಜಾಡುತ್ತಿದ್ದವರನ್ನು ಶಿವಮೊಗ್ಗದಲ್ಲಿ ಬಂಧಿಸಲಾಗಿದೆ. ಶಿವಮೊಗ್ಗ ಮಹಾನಗರ ಪಾಲಿಕೆ ಆಡಳಿತ ಪಕ್ಷದ ನಾಯಕ ಮೋಹನ್ ರೆಡ್ಡಿ ಸೇರಿದಂತೆ 14 ಜನರು ಬಂಧಿತರು.

ಶಿವಮೊಗ್ಗ ಅಡಿಕೆ ಮಂಡಿ ವರ್ತಕರ ಕ್ಲಬ್ ಮೇಲೆ ಗುರುವಾರ ರಾತ್ರಿ ದಾಳಿ ನಡೆಸಿದ ಪೊಲೀಸರು, ಅಕ್ರಮವಾಗಿ ಜೂಟಾಡುತ್ತಿದ್ದವರನ್ನು ಬಂಧಿಸಿದರು. ಬಂಧಿತರಿಂದ 3.14 ಲಕ್ಷ ಹಣ, 16 ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

arrest

ಶಿವಮೊಗ್ಗ ಮಹಾನಗರ ಪಾಲಿಕೆ ಆಡಳಿತ ಪಕ್ಷದ ನಾಯಕ ಮೋಹನ್ ರೆಡ್ಡಿ, ಪ್ರತೀಕ್, ಭಾಸ್ಕರ್, ಮಧು, ಕಾಮೇಶ್, ಮಂಜುನಾಥ, ಅರುಣ್, ಲಕ್ಷ್ಮೀಕಾಂತ ಶೆಟ್ಟಿ, ಪ್ರದೀಪ, ಪ್ರಶಾಂತ ಮತ್ತಿತರರು ಬಂಧಿತರು.

ಶಿವಮೊಗ್ಗ ಎಸ್ಪಿ ಅಭಿನವ್ ಖರೆ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಮಂಜುನಾಥ ಶೆಟ್ಟಿ ಹಾಗೂ ಇನ್ಸ್‌ಪೆಕ್ಟರ್ ಕೆ. ಕುಮಾರ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ 25ಕ್ಕೂ ಹೆಚ್ಚು ಸಿಬ್ಬಂದಿ ಪಾಲ್ಗೊಂಡಿದ್ದರು.

ಕಳಪೆ ಬೆಲ್ಲ ಮಾರಾಟ, ಪರಿಶೀಲನೆ : ಭದ್ರಾವತಿ ತಾಲ್ಲೂಕಿನ ಅರಳಿಹಳ್ಳಿ ತಿಪ್ಲಾಪುರ ಕ್ಯಾಂಪ್‌ನ ಆಲೆಮನೆಗಳ ಮೇಲೆ ದಾಳಿ ನಡೆದಿದೆ. ಕನಿಷ್ಠ ಗುಣಮಟ್ಟದ ಬೆಲ್ಲವನ್ನು ತಯಾರು ಮಾಡಿ, ಸುತ್ತಲಿನ ಅಂಗಡಿಗಳಿಗೆ ಮಾರುತ್ತಿರುವ ಬಗ್ಗೆ ಸ್ಥಳೀಯರು ದೂರು ನೀಡಿದ್ದರು.

15 arrested over illegal gambling in Shivamogga

ದೂರಿನ ಅನ್ವಯ ಆಹಾರ ಸುರಕ್ಷತಾ ಮತ್ತು ಗುಣಮಟ್ಟದ ಪ್ರಾಧಿಕಾರ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಆಲೆಮನೆಯಲ್ಲಿ ಕೊಳೆತ ಬೆಲ್ಲ ಹಾಗೂ ಸಕ್ಕರೆ ತಯಾರಿಸುತ್ತಿದ್ದು, ಎಲ್ಲಾ ಅಂಗಡಿಗಳಿಗೂ ಸರಬರಾಜು ಮಾಡುತ್ತಿರುವುದು ದಾಳಿ ವೇಳೆ ಬೆಳಕಿಗೆ ಬಂದಿದೆ.

English summary
Shivamogga mahanagara palike member and 14 other arrested by police during raid on illegal gambling at club on October 12, 2017 night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X