• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚೀನಾದಲ್ಲಿ ಅನಿಲ ಸ್ಫೋಟ ದುರಂತ, ಹಲವಾರು ಮಂದಿ ಸಾವು

By Dw News
|
Google Oneindia Kannada News

ಬೀಜಿಂಗ್, ಜೂನ್ 13: ಮಧ್ಯ ಚೀನಾದಲ್ಲಿ ಭಾನುವಾರದಂದು ನೈಸರ್ಗಿಕ ಅನಿಲ ಸ್ಫೋಟ ಸಂಭವಿಸಿದೆ. ಸುಮಾರು 12ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ. ನೂರಾರು ಮಂದಿ ಗಾಯಗೊಂಡಿದ್ದಾರೆ.

ಹುಬೈ ಪ್ರಾಂತ್ಯದ ಶಿಯಾನ್ ಎಂಬಲ್ಲಿ ಸಂಭವಿಸಿದ ಈ ಸ್ಫೋಟದಲ್ಲಿ 11 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದರೆ, ಒಬ್ಬರು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.

ಸುಮಾರು 144ಕ್ಕೂ ಅಧಿಕ ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರ ಪೈಕಿ 37ಕ್ಕೂ ಅಧಿಕ ಮಂದಿ ಸ್ಥಿತಿ ಗಂಭೀರವಾಗಿ ಎಂದು ತಿಳಿದು ಬಂದಿದೆ.

ಸ್ಫೋಟಗೊಂಡಿದ್ದು ಎಲ್ಲಿ?

ಶಿಯಾನ್ ತರಕಾರಿ ಮಾರುಕಟ್ಟೆ ಬಳಿ ಸ್ಥಳೀಯ ಕಾಲಮಾನ 6.30 am (2230 UTC/GMT) ವೇಳೆಗೆ ಸ್ಫೋಟ ಸಂಭವಿಸಿದೆ ಸುದ್ದಿ ಸಂಸ್ಥೆ ಸಿಸಿಟಿವಿ ವರದಿ ಮಾಡಿದೆ.


ತರಕಾರಿ ಮಾರುಕಟ್ಟೆಗೆ ಹೊಂದಿಕೊಂಡಂತೆ ಅನೇಕ ಅಂಗಡಿ ಮಳಿಗೆಗಳಿಗೂ, ಸ್ಥಳೀಯ ನಿವಾಸಿಗಳು ಉಪಹಾರ ಸೇವಿಸುವ ವೇಳೆ ಭಾರಿ ಶಬ್ದದೊಂದಿಗೆ ಸ್ಫೋಟವಾಗಿದೆ ಎಂದು ಹಾಂಕಾಂಗ್ ಆಪ್ ಡೈಲಿ ಸುದ್ದಿಪತ್ರಿಕೆ ಪ್ರತ್ಯಕ್ಷದರ್ಶಿಯ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿದೆ.


ಸ್ಫೋಟಕ್ಕೆ ಸಂಭವಿಸಿದ ಚಿತ್ರಗಳು, ವಿಡಿಯೋಗಳು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿವೆ.

ಘಟನಾ ಸ್ಥಳಕ್ಕೆ ತೆರಳಿರುವ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸ್ಥಳೀಯ ಆಡಳಿತ ಅಧಿಕಾರಿಗಳು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಕಮ್ಯೂನಿಸ್ಟ್ ಪಕ್ಷದ ಮೂಲಗಳು ತಿಳಿಸಿವೆ. ಸ್ಫೋಟಕ್ಕೆ ಏನು ಕಾರಣ ಎಂಬುದು ಇನ್ನೂ ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. (dpa, Reuters)

English summary
The blast, in the central city of Shiyan, caused widespread damage to buildings and vehicles, and left several people trapped. At least 11 people have died and more than 140 were hospitalized.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X