ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲ್ಲಿದ್ದಲು ಕೊರತೆ ಆತಂಕ: ಜಾರ್ಖಂಡ್‌ನಲ್ಲಿ ಜೋಶಿ ಸಭೆ

|
Google Oneindia Kannada News

ರಾಂಚಿ, ಏಪ್ರಿಲ್ 28: ರಾಷ್ಟ್ರದಾದ್ಯಂತ ಕಲ್ಲಿದ್ದಲು ಕೊರತೆಯ ಬಗ್ಗೆ ಹೆಚ್ಚುತ್ತಿರುವ ಕಳವಳದ ನಡುವೆ, ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ್ ಜೋಶಿ ನಿನ್ನೆಯಷ್ಟೇ ಉಷ್ಣ ವಿದ್ಯುತ್ ಸ್ಥಾವರಗಳು ಸಾಕಷ್ಟು ದಾಸ್ತಾನು ಹೊಂದಿವೆ ಎಂದು ದೇಶಕ್ಕೆ ಭರವಸೆ ನೀಡಿದರು. ಇಂದು (ಏಪ್ರಿಲ್ 28) ಜಾರ್ಖಂಡ್‌ನಲ್ಲಿ ಪ್ರಲ್ಹಾದ್ ಜೋಶಿ ಕಲ್ಲಿದ್ದಲು ಉತ್ಪಾದನೆ ಹೆಚ್ಚಳದ ಬಗ್ಗೆ ಸಭೆ ನಡೆಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮೂಲಕ ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ್ ಜೋಶಿ ಮಾಹಿತಿ ನೀಡಿದ್ದಾರೆ. "ಇಂದು ಜಾರ್ಖಂಡ್‌ನ ಮುಖ್ಯ ಕಾರ್ಯದರ್ಶಿ, ರಾಜ್ಯದ ಗಣಿ ಕಾರ್ಯದರ್ಶಿ ಮತ್ತು ಇತರ ಹಿರಿಯ ಅಧಿಕಾರಿಗಳೊಂದಿಗೆ ನನ್ನ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಕೋಲ್ ಇಂಡಿಯಾ ಲಿಮಿಟೆಡ್‌ನ ಅಧ್ಯಕ್ಷ, ಹೆಚ್ಚುವರಿ ಕಲ್ಲಿದ್ದಲು ಕಾರ್ಯದರ್ಶಿ ಮತ್ತು ಗೊಡ್ಡದ ಜಿಲ್ಲಾಧಿಕಾರಿ ಉಪಸ್ಥಿತರಿದ್ದರು," ಎಂದು ತಿಳಿಸಿದ್ದಾರೆ.

"ಸಭೆಯಲ್ಲಿ , ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ರಾಜಮಹಲ್ ಪ್ರದೇಶದಲ್ಲಿ ಗಣಿಗಾರಿಕೆ ಚಟುವಟಿಕೆಗಳಿಗೆ ಅನುಕೂಲಕರ ವಾತಾವರಣವನ್ನು ನಿರ್ಮಿಸಲು ಬಗೆಹರಿಸಬೇಕಾದ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು. ಈ ನಿಟ್ಟಿನಲ್ಲಿ ರಾಜ್ಯದ ಆಡಳಿತ ತಂಡ ಓದಗಿಸುತ್ತಿರುವ ಬೆಂಬಲ ಮತ್ತು ಸಹಕಾರ ಶ್ಲಾಘನೀಯ," ಎಂದು ಅಭಿನಂದಿಸಿದ್ದಾರೆ.

Union Minister Pralhad Joshi held meeting in Jharkhand over Increasing Coal Production

"ರಾಂಚಿಯ ಸಿಸಿಎಲ್‌ನ ಸಿ.ಎಂ.ಡಿ ಯೊಂದಿಗೆ ನಡೆದ ಪರಿಶೀಲನಾ ಸಭೆಯಲ್ಲಿ ಸಿಸಿಎಲ್ ಘಟಕದಿಂದ ಕಲ್ಲಿದ್ದಲು ಉತ್ಪಾದನೆ ಮತ್ತು ಗಣಿಗಾರಿಕೆಯನ್ನು ಹೆಚ್ಚಿಸುವ ಬಗ್ಗೆ ವಿಸ್ತೃತವಾಗಿ ಸಮಾಲೋಚನೆ ನಡೆಸಲಾಯಿತು. ಹಾಗೆ ರಾಜ್ಯಾಡಳಿತದ ಸಹಾಯದೊಂದಿಗೆ ಭೂಮಿಯನ್ನು ಹೊರೆಮುಕ್ತವಾಗಿಸಲು ಅನುಸರಿಸಬಹುದಾದ ವಿಧಾನಗಳ ಕುರಿತು ಚರ್ಚಿಸಲಾಯಿತು," ಎಂದು ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ್ ಜೋಶಿ ವಿವರಣೆ ನೀಡಿದ್ದಾರೆ.

ಪವರ್ ಕಟ್‌ಗೆ ಕಾರಣ Coal ಮಣ್ಣು ಮಸಿ ಅಲ್ಲ, ಪೇಮೆಂಟ್ ಕಟ್ಪವರ್ ಕಟ್‌ಗೆ ಕಾರಣ Coal ಮಣ್ಣು ಮಸಿ ಅಲ್ಲ, ಪೇಮೆಂಟ್ ಕಟ್

"ಈಸ್ಟರ್ನ್ ಕೋಲ್‌ಫೀಲ್ಡ್ ಲಿಮಿಟೆಡ್ ನಿಂದ ಗಣಿಗಾರಿಕೆ ಕಾರ್ಯಾಚರಣೆಗಳು ಮತ್ತು ಕಲ್ಲಿದ್ದಲು ತೆಗೆಯುವಿಕೆಯನ್ನು ಪರಿಶೀಲಿಸಲಾಗಿದೆ. ರಾಷ್ಟ್ರದ ಇಂಧನ ಬೇಡಿಕೆಗಳನ್ನು ಪೂರೈಸಲು ಕಲ್ಲಿದ್ದಲು ಗಣಿಗಾರರ ಶ್ರಮವನ್ನು ಶ್ಲಾಘಿಸಲಾಗಿದೆ ಮತ್ತು ಕಲ್ಲಿದ್ದಲು ಉತ್ಪಾದನೆ ಮತ್ತು ರವಾನೆಯನ್ನು ಮತ್ತಷ್ಟು ಹೆಚ್ಚಿಸಲು ಒತ್ತಾಯಿಸಲಾಗಿದೆ," ಎಂದು ಕೂಡಾ ಟ್ವೀಟ್ ಮಾಡಿದ್ದಾರೆ.

Union Minister Pralhad Joshi held meeting in Jharkhand over Increasing Coal Production

ಭಾರತದಲ್ಲಿ ಸಾಕಷ್ಟು ಕಲ್ಲಿದ್ದಲು ಇದೆ ಎಂದಿದ್ದ ಕೇಂದ್ರ ಸಚಿವರು

ರಾಷ್ಟ್ರದಾದ್ಯಂತ ಕಲ್ಲಿದ್ದಲು ಕೊರತೆಯ ಬಗ್ಗೆ ಹೆಚ್ಚುತ್ತಿರುವ ಕಳವಳದ ನಡುವೆ, ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ್ ಜೋಶಿ, ಉಷ್ಣ ವಿದ್ಯುತ್ ಸ್ಥಾವರಗಳು ಸಾಕಷ್ಟು ದಾಸ್ತಾನು ಹೊಂದಿವೆ ಎಂದು ದೇಶಕ್ಕೆ ಭರವಸೆ ನೀಡಿದ್ದಾರೆ. ಕೇಂದ್ರ ಸಚಿವರು ವಿವರಗಳನ್ನು ಒದಗಿಸಿದ್ದಾರೆ. ಏಪ್ರಿಲ್ 25 ರವರೆಗೆ ದೇಶದ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ 21.55 ಮಿಲಿಯನ್ ಟನ್ ಕಲ್ಲಿದ್ದಲು ಇದೆ ಎಂದು ಪ್ರತಿಪಾದಿಸಿದರು.

'Coal' ಕೊಳ್ಳಲು ಕಾಸಿಲ್ಲ, ಪಾಕಿಸ್ತಾನದಲ್ಲಿ 'Power' ಇಲ್ಲ'Coal' ಕೊಳ್ಳಲು ಕಾಸಿಲ್ಲ, ಪಾಕಿಸ್ತಾನದಲ್ಲಿ 'Power' ಇಲ್ಲ

ಕಲ್ಲಿದ್ದಲು ಕೋರಿದ ತಮಿಳುನಾಡು ಸಿಎಂ

ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಪಾರಾದಿಪ್‌ನಲ್ಲಿ ಎಫ್‌ಎಸ್‌ಎ (ಇಂಧನ ಪೂರೈಕೆ ಒಪ್ಪಂದ) ಪ್ರಕಾರ ಪ್ರತಿದಿನ 72,000 ಮೆಟ್ರಿಕ್ ಟನ್ ಕಲ್ಲಿದ್ದಲು ಪೂರೈಕೆಯನ್ನು ಮಾಡಬೇಕು ಎಂದು ಕಲ್ಲಿದ್ದಲು ಸಚಿವಾಲಯಕ್ಕೆ ನಿರ್ದೇಶನ ನೀಡುವಂತೆ ನಾನು ವಿನಂತಿಸುತ್ತೇನೆ ಎಂದಿದ್ದಾರೆ. ಈ ಹಂತದಿಂದ ಮಾತ್ರ ರಾಜ್ಯದಲ್ಲಿ ನಿರಂತರ ವಿದ್ಯುತ್ ಸರಬರಾಜನ್ನು ನಿರ್ವಹಿಸಲು ನಮಗೆ ಸಾಧ್ಯವಾಗುತ್ತದೆ ಮತ್ತು ಆದ್ದರಿಂದ ನಾನು ಈ ನಿಟ್ಟಿನಲ್ಲಿ ನಿಮ್ಮ ವೈಯಕ್ತಿಕ ಮಧ್ಯಸ್ಥಿಕೆಯನ್ನು ಕೋರುತ್ತೇನೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಮನವಿ ಮಾಡಿದ್ದಾರೆ.

English summary
Union Minister Pralhad Joshi held meeting in Jharkhand over Increasing Coal Production.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X