• search
  • Live TV
ರಾಂಚಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಝೂನಲ್ಲಿ ಯುವಕನ ಮೇಲೆ ದಾಳಿ ಮಾಡಿದ ಹೆಣ್ಣು ಹುಲಿ 'ಅನುಷ್ಕಾ'

|

ರಾಂಚಿ, ಜಾರ್ಖಂಡ್: ಭಗವಾನ್ ಬಿರ್ಸಾ ಬೈಯಾಲಾಜಿಕಲ್ ಪಾರ್ಕ್ ನಲ್ಲಿರುವ ಓರ್ಮಾಂಜಿ ಝೂನಲ್ಲಿ ಯುವಕನ ಮೇಲೆ 'ಅನುಷ್ಕಾ' ಎಂಬ ಹೆಣ್ಣು ಹುಲಿ ದಾಳಿ ಮಾಡಿದೆ. ಹುಲಿಯ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಯುವಕ ಮೃತಪಟ್ಟಿದ್ದಾನೆ.

ಝೂಗೆ ತೆರಳಿದ್ದ ಆ ಯುವಕನಿಗೆ 22 ವರ್ಷ ವಯಸ್ಸಾಗಿತ್ತು ಎನ್ನಲಾಗಿದೆ. ಆದ್ರೆ, ಆ ಯುವಕನ ಗುರುತು ಪತ್ತೆ ಆಗಿಲ್ಲ.

ಮುಳ್ಳುಹಂದಿ ಕೊಂದು ತಿಂದು ಜೈಲು ಸೇರಿದ 'ಟಿಕ್ ಟಾಕ್' ಭೂಪ.!ಮುಳ್ಳುಹಂದಿ ಕೊಂದು ತಿಂದು ಜೈಲು ಸೇರಿದ 'ಟಿಕ್ ಟಾಕ್' ಭೂಪ.!

ನಿನ್ನೆ ಬುಧವಾರ (ಮಾರ್ಚ್ 4) ಝೂಗೆ ಭೇಟಿ ನೀಡಿದ್ದ ಆ ಯುವಕ ಹೆಣ್ಣು ಹುಲಿ ಅನುಷ್ಕಾ ಇರುವ ಪಂಜರದ ಕಡೆಗೆ ಹೋಗಿದ್ದಾನೆ. ಪಂಜರದ ಪಕ್ಕದಲ್ಲೇ ಇದ್ದ ಮರವನ್ನು ಹತ್ತಿದ ಆ ಯುವಕ ಆಯಾತಪ್ಪಿ ಕೆಳಗೆ ಬಿದ್ದಿದ್ದಾನೆ. ಆಗ ಹೆಣ್ಣು ಹುಲಿ ಅನುಷ್ಕಾ ಯುವಕನ ಮೇಲೆ ದಾಳಿ ಮಾಡಿದೆ.

ತಕ್ಷಣ ಝೂನಲ್ಲಿದ್ದ ಸಿಬ್ಬಂದಿ ಯುವಕನನ್ನು ರಕ್ಷಿಸಲು ಮುಂದಾಗಿದ್ದಾರೆ. ಆದರೆ ಪ್ರಯೋಜನ ಆಗಿಲ್ಲ. ಹುಲಿಯ ದಾಳಿಗೆ ಸಿಲುಕಿದ ಯುವಕ ಸಾವನ್ನಪ್ಪಿದ್ದಾನೆ. ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಪರೀಕ್ಷಿಸುತ್ತಿದ್ದಾರೆ.

English summary
Tigress Anushka kills youth in Ranchi's Ormanjhi Zoo.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X