ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದಿನ ಕಾಂಗ್ರೆಸ್-ಜೆಎಂಎಂ ನಿಂದ ಅಧಿಕಾರಕ್ಕಾಗಿ ಕಿತ್ತಾಟ:ಮೋದಿ

|
Google Oneindia Kannada News

ರಾಂಚಿ, ನವೆಂಬರ್ 25: ಜಾರ್ಖಂಡ್ ನಲ್ಲಿ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಹಿಂದಿನ ಕಾಂಗ್ರೆಸ್ ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷಗಳ ಆಡಳಿತದ ಮೇಲೆ ವಾಗ್ದಾಳಿ ನಡೆಸಿದ ಮೋದಿ, ಈ ಪಕ್ಷಗಳು ಅಧಿಕಾರದ ತೃಷೆಗಾಗಿ ಕಿತ್ತಾಡಿಕೊಂಡರು. ರಾಜ್ಯದ ಸಂಪನ್ಮೂಲಗಳನ್ನು ತನ್ನ ಸ್ವಾರ್ಥಕ್ಕೆ ಬಳಸಿಕೊಂಡಾಗ ಜನರು ಇವರನ್ನು ತಿರಸ್ಕರಿಸಿದರು ಎಂದರು.

"ಈ ಚುನಾವಣೆಯು ಸೇವೆ ಮಾಡುವವರು ಮತ್ತು ಲೂಟಿಕೋರರ ನಡುವಿನ ಸ್ಪರ್ಧೆಯಾಗಿದೆ. ಕಾಂಗ್ರೆಸ್ ನಲ್ಲಿ ಸಮಸ್ಯೆಗಳಿವೆ, ನಮ್ಮಲ್ಲಿ ಪರಿಹಾರಗಳಿವೆ. ಅವರ ಮೇಲೆ ಆರೋಪಗಳಿವೆ, ನಮ್ಮಲ್ಲಿ ಮಾಡಿದ ಕೆಲಸದ ವರದಿ ಇವೆ. ಅವರಲ್ಲಿ ಖಾಲಿ ಭರವಸೆಗಳಿವೆ, ನಮ್ಮಲ್ಲಿ ಅಭಿವೃದ್ದಿ ಪುರಾವೆಗಳಿವೆ" ಎಂದು ಜಾರ್ಖಂಡ್ ನ ಡಾಲ್ಟೋಗಂಜ್ ನಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.

ಜಾರ್ಖಂಡ್ ಚುನಾವಣೆ: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಗೋಶಾಲೆ, ಚಿತ್ರನಗರಿಜಾರ್ಖಂಡ್ ಚುನಾವಣೆ: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಗೋಶಾಲೆ, ಚಿತ್ರನಗರಿ

ಕಾಶ್ಮೀರದ ವಿಶೇಷ ಸ್ಥಾನಮಾನ ಮತ್ತು ಅಯೋಧ್ಯೆಯ ವಿವಾದಗಳನ್ನು ನಾವು ರದ್ದು ಪಡಿಸಿದ್ದೇವೆ ಎಂದ ಮೋದಿ, ಹಿಂದಿನ ಕಾಂಗ್ರೆಸ್ ಸರ್ಕಾರಗಳು ತಮ್ಮ ಮತ ಬ್ಯಾಂಕ್ ಗಾಗಿ ಇಂತಹ ವಿಷಗಳನ್ನು ನಿರ್ಲಕ್ಷಿಸಿದ್ದರು ಎಂದು ಕಿಡಿಕಾರಿದರು.

PM Modi In Jharkhand: Previous Congress-JMM Regimes Driven By Lust For Power

ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳು ರಾಮ ಜನ್ಮಭೂಮಿಯ ಬಗ್ಗೆ ಏನು ಮಾಡಿದರ? ಹೇಗೆ ರಾಜಕೀಯ ಆಟಗಳನ್ನು ಆಡಿದರು? ಈ ಸಮಾಜವನ್ನು ಹೇಗೆ ವಿಭಜಿಸಲಾಯಿತು? ಇವರು ಮತಬ್ಯಾಂಕ್ ಸಲುವಾಗಿ ರಾಮ ಜನ್ಮಭೂಮಿ ವಿಷಯವನ್ನು ನೇಣು ಹಾಕಿದ್ದರು. ಅದನ್ನು ನಿರ್ಧರಿಸಲು ಇವರು ಅನುಮತಿ ಕೊಡಲಿಲ್ಲ ಎಂದು ಟೀಕಿಸಿದರು.

ಜಾರ್ಖಂಡ್ ನ ಮತ್ತೊಂದು ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ರಾಜಕೀಯ ಅಸ್ಥಿರತೆಯಿಂದಾಗಿ, ಬಿಜೆಪಿಯೇತರ ಸಕಾರಗಳ ಆಡಳಿತದಲ್ಲಿ ನಕ್ಸಲರು ಪ್ರವರ್ಧಮಾನಕ್ಕೆ ಬಂದರು ಎಂದು ವಿಪಕ್ಷಗನ್ನು ಟೀಕಿಸಿದರು.

ಜಾರ್ಖಂಡ್ ನಲ್ಲಿ 'ಕೈ' ಮೇಲೆ ಮಾಡುತ್ತಾರಾ ಈ ಪ್ರಚಾರಕರು?ಜಾರ್ಖಂಡ್ ನಲ್ಲಿ 'ಕೈ' ಮೇಲೆ ಮಾಡುತ್ತಾರಾ ಈ ಪ್ರಚಾರಕರು?

ಇದೇ ಸಂದರ್ಭದಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ರಘುಬರ್ ದಾಸ್ ನೇತೃತ್ವದ ಸರ್ಕಾರ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ್ದಕ್ಕಾಗಿ ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿದರು. 2000 ರಲ್ಲಿ ರಚನೆಗೊಂಡ ನಂತರ ಐದು ವರ್ಷ ಪೂರ್ಣಗೊಳಿಸಿದ್ದು ಇದು ಮೊದಲನೆಯದಾಗಿದೆ.

ಕಳೆದ ಐದು ವರ್ಷಗಳಲ್ಲಿ ಜಾರ್ಖಂಡ್ ನಲ್ಲಿ ಬಿಜೆಪಿ ಸರ್ಕಾರ ಉತ್ತಮ ಆಡಳಿತ ನೀಡಿದ್ದರಿಂದಲೇ, ರಾಜ್ಯದ ಇತಿಹಾಸದಲ್ಲಿ ಮುಖ್ಯಮಂತ್ರಿಯೊಬ್ಬರು ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ್ದಾರೆ ಎಂದು ಮೋದಿ ತಿಳಿಸಿದರು. ಕೇಂದ್ರ ಮತ್ತು ರಾಜ್ಯದಲ್ಲಿ ಪಕ್ಷವು ಅಧಿಕಾರದಲ್ಲಿದ್ದ ಕಾರಣ ಜಾರ್ಖಂಡ್ ನ ಡಬಲ್ ಎಂಜಿನ್ ಬೆಳವಣಿಗೆ ಸಾಧ್ಯವಾಯಿತು ಎಂದರು.

English summary
Attacking The Previous Congress-JMM Regimes In Jharkhand, Prime Minister Narendra Modi On Monday Said The Parties Were Driven By Lust For Power And Exploited The States Resources While Neglecting Its People.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X