ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾರ್ಖಂಡ್ ನ್ಯಾಯಾಧೀಶರ ಸಾವು: ಅಪಘಾತವಲ್ಲ ಕೊಲೆ

|
Google Oneindia Kannada News

ರಾಂಛಿ, ಜುಲೈ 29: ಜಾರ್ಖಂಡ್‌ನ ನ್ಯಾಯಾಧೀಶರ ಸಾವು ಸಹಜ ಅಪಘಾತದಿಂದ ಸಂಭವಿಸಿದ್ದಲ್ಲ ಅದೊಂದು ಕೊಲೆ ಎಂಬುದು ತಿಳಿದುಬಂದಿದೆ.

ಜುಲೈ 28ರ ಬೆಳಗ್ಗೆ ರಸ್ತೆ ಸಮೀಪದಲ್ಲಿ ವಾಕಿಂಗ್ ಮಾಡುತ್ತಿದ್ದ ಜಾರ್ಖಂಡ್‌ನ ಜಿಲ್ಲಾ ಮತ್ತು ಹೆಚ್ಚುವರಿ ನ್ಯಾಯಾಧೀಶ ಉತ್ತಮ್ ಆನಂದ್ ಅವರಿಗೆ ಹಿಂದಿನಿಂದ ಬಂದ ಆಟೋ ರಿಕ್ಷಾವೊಂದು ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು.

ಆದರೆ ಇದೊಂದು ಆಕಸ್ಮಿಕ ಘಟನೆಯಲ್ಲ, ಇದು ಉದ್ದೇಶಪೂರ್ವಕವಾಗಿ ನಡೆದ ಕೊಲೆಯಂತೆ ಕಾಣುತ್ತದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

Not Accident, CCTV Suggests Jharkhand Judge Was Murdered By Tempo Driver

ಬೆಳಗಿನ ಜಾವ 1 ಗಂಟೆ ಸುಮಾರಿಗೆ ತನ್ನ ವಾಹನವನ್ನು ಕಳವು ಮಾಡಲಾಗಿದೆ ಎಂದು ಧನ್ಬಾದ್‌ನ ಮಹಿಳೆಯೊಬ್ಬರು ದೂರು ನೀಡಿದ್ದು, ಆಟೋ ಆ ಮಹಿಳೆಯ ಹೆಸರಿನಲ್ಲಿ ನೋಂದಾಯಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಅಪಘಾತ ಬಗ್ಗೆ ಎಲ್ಲಾ ಕೋನಗಳಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಡಿಐಜಿ ಮಯೂರ್ ಪಟೇಲ್ ಕನ್ಹಯ್ಯಲಾಲ್ ಅವರು ಹೇಳಿದ್ದಾರೆ. ಅಪಘಾತದ ಬಗ್ಗೆ ಹೆಚ್ಚಿನ ವಿವರಗಳನ್ನು ಸಂಗ್ರಹಿಸಲು ವಿವಿಧ ಪೊಲೀಸ್ ತಂಡಗಳನ್ನು ರಚಿಸಲಾಗಿದೆ" ಎಂದು ಅವರು ತಿಳಿಸಿದರು.

ಅಪಘಾತದ ಸಿಸಿಟಿವಿ ದೃಶ್ಯಾವಳಿಗಳು ಘಟನೆಯ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿದ್ದು, ಆಟೋ ಚಾಲಕ ಉದ್ದೇಶಪೂರ್ವಕವಾಗಿ ಉತ್ತಮ್ ಆನಂದ್ ಅವರಿಗೆ ಹಿಂದಿನಿಂದ ಆಟೋ ಹರಿಸಿದಂತೆ ತೋರುತ್ತದೆ.

ಧನ್ಬಾದ್‌ನ ಸೆಷನ್ಸ್ ನ್ಯಾಯಾಧೀಶರು ಗಾಲ್ಫ್ ಮೈದಾನದ ಬಳಿಯ ನಿರ್ಜನ ರಸ್ತೆಯಲ್ಲಿ ಬೆಳಗ್ಗೆ ವಾಕಿಂಗ್ ಮಾಡುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ನ್ಯಾಯಾಧೀಶರು ಹಿರಾಪುರದ ಜೂಡ್ ಕಾಲೋನಿಯಲ್ಲಿರುವ ತಮ್ಮ ಮನೆಯಿಂದ 500 ಮೀಟರ್‌ಗಿಂತಲೂ ಕಡಿಮೆ ದೂರದಲ್ಲಿ ಮೃತಪಟ್ಟಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆಟೋ ಚಾಲಕ ಹಾಗೂ ಆತನ ಜತೆಗಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ವರದಿ ಹೇಳಿದೆ.

English summary
The supposed accident of a judge in Jharkhand’s Dhanbad has taken a chilling turn after CCTV footage from the scene revealed that a tempo driver deliberately ran him over during his morning walk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X