• search
  • Live TV
ರಾಂಚಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೋದಿ ಎದೆ ಅಳತೆಯ ಹೊಸ ರಿಪೋರ್ಟ್, 56 ಅಲ್ಲ 65 ಇಂಚು!

|

ರಾಂಚಿ, ನವೆಂಬರ್ 25: ಕೇಂದ್ರದ ಹಿರಿಯ ಸಚಿವರೊಬ್ಬರು ಮೋದಿ ಅವರ ಎದೆಯ ಅಳತೆ ಮಾಡಿ ಹೊಸ 'ವರದಿ' ಮುಂದಿಟ್ಟಿದ್ದಾರೆ! 'ಮೋದಿ ಅವರ ಎದೆ 56 ಇಂಚಿನದ್ದಲ್ಲ ಅದು 65 ಇಂಚಿನದ್ದು' ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ 'ವರದಿ' ನೀಡಿದ್ದಾರೆ.

ಜಾರ್ಖಂಡ್‌ನ ಪಲಾಮು ನಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ 68 ವರ್ಷದ ರಾಜನಾಥ್ ಸಿಂಗ್, '2019 ರ ಲೋಕಸಭೆ ಚುನಾವಣೆ ಪ್ರಣಾಳಿಕೆ ಮಾಡುವ ಜವಾಬ್ದಾರಿ ನನ್ನದೇ ಆಗಿತ್ತು. ಆಗ ನಾನು ಪ್ರಧಾನಿ ಅವರೊಂದಿಗೆ ನೇರ ಸಂಪರ್ಕದಲ್ಲಿಗೆ, ಆಗ ಹೆದರಬೇಡಿ ನಾವು ಎಲ್ಲ ಭರವಸೆಗಳನ್ನು ಈಡೇರಿಸುತ್ತೇವೆ ಎಂದು ಹೇಳಿದ್ದರು' ಎಂದರು.

'ಜನ ಹೇಳುತ್ತಾರೆ ಮೋದಿ 56 ಇಂಚಿನ ಎದೆಯವರು ಎಂದು ಆದರೆ ಅಳತೆಯಲ್ಲಿ ತಪ್ಪಾಗಿರಬೇಕು, ಮೋದಿ ಎದೆಯ ಅಳತೆ 65 ಇಂಚು' ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

ಮೋದಿ ಅವರೇ ಒಮ್ಮೆ ಹೇಳಿದ್ದರು, 'ನಾನು 56 ಇಂಚಿನ ಎದೆಯವನೆಂದು' ತಮಗೆ ಸಾಧಿಸುವ ಧೈರ್ಯ, ಶಕ್ತಿ ಇದೆ ಎಂಬುದಕ್ಕೆ ಉಪಮೆಯಾಗಿ ಅವರು ಇದನ್ನು ಹೇಳಿದ್ದರು. ಮೋದಿ ಹೇಳಿಕೆ ಬಗ್ಗೆ ಹಲವು ಪರ, ವಿರೋಧ, ವ್ಯಂಗ್ಯದ ಪ್ರತಿಹೇಳಿಕೆಗಳು ಬಂದಿದ್ದವು.

ಮುಂದುವರೆದು ಮಾತನಾಡಿದ ರಾಜನಾಥ್ ಸಿಂಗ್, 'ನಾವು (ಬಿಜೆಪಿ) ಅಧಿಕಾರಕ್ಕೆ ಬಂದ ಕೂಡಲೇ ನೀಡಿದ್ದ ಭರವಸೆಯಂತೆ ಆರ್ಟಿಕಲ್ 370 ರದ್ದು ಮಾಡಿದೆವು. ಇನ್ನು ಮುಂದೆ ದೇಶದಲ್ಲಿ ಎರಡು ಸಂವಿಧಾನ ಇರುವುದಿಲ್ಲಎರಡು ಧ್ವಜ ಇರುವುದಿಲ್ಲ, ದೇಶಕ್ಕೆಲ್ಲಾ ಒಂದೇ ಪ್ರಧಾನಿ ಅದು ಮೋದಿ'' ಎಂದು ರಾಜನಾಥ್ ಸಿಂಗ್ ಹೇಳಿದರು.

'ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವುದಾಗಿ ನಾವು ಮೊದಲಿನಿಂದಲೂ ಹೇಳುತ್ತಲೇ ಬಂದಿದ್ದೇವೆ. ಈಗ ಅದಕ್ಕೆ ಸಮಯ ಬಂದಿದೆ. ಜಗತ್ತಿನ ಯಾವ ಶಕ್ತಿಯೂ ಸಹ ರಾಮಮಂದಿರ ನಿರ್ಮಾಣ ನಿರ್ಮಾಣವನ್ನು ತಡೆಯಲು ಸಾಧ್ಯವಿಲ್ಲ' ಎಂದರು.

English summary
Prime minister Narendra Modi's chest size is not 56 its 65 said defence minister Rajanath Singh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X