ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

ಜಾರ್ಖಂಡ್ ಸಿಎಂ ಆದ ಹೇಮಂತ್ ಸೊರೆನ್, ಬಿಜೆಪಿಯಿಂದ ರಾಜ್ಯ ಕಸಿದ ತೃಪ್ತಿ ಕಾಂಗ್ರೆಸ್‌ಗೆ

|
Google Oneindia Kannada News

ರಾಂಚಿ, ಡಿಸೆಂಬರ್ 29: ಜಾರ್ಖಂಡ್ ಮುಖ್ಯಮಂತ್ರಿಯಾಗಿ ಜೆಎಂಎಂ ಪಕ್ಷದ ನಾಯಕ ಹೇಮಂತ್ ಸೊರೆನ್ ಅವರು ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಜೆಎಂಎಂ-ಕಾಂಗ್ರೆಸ್-ಆರ್‌ಜೆಡಿ ಪಕ್ಷ ಮೈತ್ರಿಯು ಇತ್ತೀಚಿಗೆ ನಡೆದ ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಿದ್ದು, ಸರ್ಕಾರ ರಚಿಸಿದೆ.

ರಾಜ್ಯದ 81 ಕ್ಷೇತ್ರಗಳಿಗೆ ಒಟ್ಟು5 ಹಂತಗಳಲ್ಲಿ ಮತದಾನ ನಡೆದಿತ್ತು. ಚುನಾವಣೆಯಲ್ಲಿ ಜೆಎಂಎಂ-ಕಾಂಗ್ರೆಸ್-ಆರ್‌ಜೆಡಿ ಪಕ್ಷವು 47 ಕ್ಷೇತ್ರಗಳಲ್ಲಿ ಜಯಗಳಿಸಿದೆ. ಕಳೆದ ಚುನಾವಣೆಯಲ್ಲಿ ಗೆದ್ದಿದ್ದ ಬಿಜೆಪಿ 29 ಸ್ಥಾನಗಳಿಗೆ ಕುಸಿದಿದೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 41.

Live Updates Of Jharkhand Cm Hemant Soren Swearing In Ceremony

ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಶಿಬು ಸೊರೆನ್ ಅವರ ಪುತ್ರ ಹೇಮಂತ್ ಸೂರೆನ್ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದು, ಆರ್‌ಜೆಡಿ-ಕಾಂಗ್ರೆಸ್‌-ಜೆಎಂಎಂ ನ ಒಮ್ಮತದ ಆಯ್ಕೆ ಅವರಾಗಿದ್ದಾರೆ. ಹೇಮಂತ್ ಎರಡನೇ ಬಾರಿಗೆ ಜಾರ್ಖಂಡ್‌ ನ ಸಿಎಂ ಆಗಲಿದ್ದಾರೆ.

ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮವು ರಾಂಚಿಯ ಮೊರಾಬದಿ ಮೈದಾನದಲ್ಲಿ ಮಧ್ಯಾಹ್ನ 2 ಗಂಟೆಗೆ ಪ್ರಾರಂಭವಾಗಲಿದೆ.

Newest FirstOldest First
4:40 PM, 29 Dec

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಹೇಮಂತ್ ಸೊರೆನ್ ಅವರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಭಾಶಯ ಸಲ್ಲಿಸಿದರು.
4:19 PM, 29 Dec

ರಾಜ್ಯ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರು ಜಾರ್ಖಂಡ್ ಸಿಎಂ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಹಾಜರಿದ್ದು, ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್‌ ಗೆ ಶುಭಾಶಯ ಸಲ್ಲಿಸಿದರು.
2:45 PM, 29 Dec

ಜಾರ್ಖಂಡ್‌ ಕಾಂಗ್ರೆಸ್ ನಾಯಕ ರಾಮೇಶ್ವರ ಓರನ್ ಅವರು ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಅವರೊಂದಿಗೆ ಆರ್‌ಜೆಡಿಯ ಸತ್ಯಾನಂದ ಭೋಗತ್ ಅವರು ಪ್ರಮಾಣ ವಚನ ಸ್ವೀಕರಿಸಿದರು.
2:42 PM, 29 Dec

ಜಾರ್ಖಂಡ್ ರಾಜ್ಯದ 11 ನೇ ಸಿಎಂ ಆಗಿ ಹೇಮಂತ್ ಸೊರೆನ್ ಇಂದು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ರಾಂಚಿಯಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಕೇಂದ್ರದ ವಿಪಕ್ಷಗಳ ನಾಯಕರುಗಳು ಭಾಗವಹಿಸಿದ್ದರು.
1:59 PM, 29 Dec

ರಾಹುಲ್ ಗಾಂಧಿ ಮತ್ತು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಅವರು ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.
1:57 PM, 29 Dec

ಅಭಿನಂದಿಸಲು ಆಗಮಿಸುವ ಪಕ್ಷದ ಕಾರ್ಯಕರ್ತರು, ಮುಖಂಡರು ಹೂಗುಚ್ಛದ ಬದಲಿಗೆ ಪುಸ್ತಕಗಳನ್ನು ತರುವಂತೆ ಹೇಮಂತ್ ಸೊರೆನ್ ನಿನ್ನೆಯೇ ಮನವಿ ಮಾಡಿದ್ದರು.
1:56 PM, 29 Dec

ಪ್ರಮಾಣ ವಚನ ಸ್ವೀಕಾರ ವೇದಿಕೆಗೆ ಜೆಎಂಎಂ ನ ಹೇಮಂತ್ ಸೊರೆನ್ ಆಗಮಿಸಿದ್ದಾರೆ. ಕೆಲವೇ ಕ್ಷಣಗಳಲ್ಲಿ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ.
Advertisement
1:27 PM, 29 Dec

ಜಾರ್ಖಂಡ್‌ ನ 11 ಮುಖ್ಯಮಂತ್ರಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸುತ್ತಿರುವ ಹೇಮಂತ್ ಸೊರೆನ್‌ ಗೆ ಶುಭಾಶಯ ತಿಳಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ತಾವು ಕಾರ್ಯಕ್ರಮಕ್ಕೆ ಭಾಗಿ ಆಗಲು ಸಾಧ್ಯವಾಗದೇ ಇರುವ ಬಗ್ಗೆ ಖೇದ ವ್ಯಕ್ತಪಡಿಸಿದ್ದಾರೆ.
1:20 PM, 29 Dec

ಜಾರ್ಖಂಡ್‌ನ 11ನೇ ಮುಖ್ಯಮಂತ್ರಿಯಾಗಿ ಜೆಎಂಎಂನ ಹೇಮಂತ್‌ ಸೊರೇನ್‌ ಅವರು ಭಾನುವಾರ ಸಂಜೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
8:13 AM, 29 Dec

ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್, ಆಂಧ್ರ ಮಾಜಿ ಸಿಎಂ ಚಂದ್ರಬಾಬು ನಾಯ್ಡು, ಡಿಎಂಕೆ ನಾಯಕ ಸ್ಟ್ಯಾಲಿನ್, ಇನ್ನೂ ಹಲವು ಇತರೆ ನಾಯಕರು ಪ್ರಮಾಣ ವಚನ ಕಾರ್ಯಕ್ರಮಕ್ಕೆ ಹಾಜರಾಗುವ ಸಾಧ್ಯತೆ ಇದೆ.
8:11 AM, 29 Dec

ಪ್ರಮಾಣ ವಚನ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ ಪಿ.ಚಿದಂಬರಂ, ಗುಲಾಂ ನಬಿ ಆಜಾದ್, ಮಧ್ಯಪ್ರದೇಶ ಸಿಎಂ ಕಮಲನಾಥ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಚತ್ತೀಸ್‌ಘಡ ಸಿಎಂ ಭೂಪೇಶ್ ಬಘೇಲ್, ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ಸಮಾಜವಾದಿ ಪಕ್ಷ ನಾಯಕ ಅಖಿಲೇಶ್ ಯಾದವ್, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಭಾಗವಹಿಸುವ ನಿರೀಕ್ಷೆ ಇದೆ.
8:08 AM, 29 Dec

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೂ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ. ಇತ್ತೀಚೆಗಷ್ಟೆ ಅವರು ವಿಪಕ್ಷಗಳು ಒಗ್ಗಟ್ಟು ಪ್ರದರ್ಶಿಸಬೇಕು ಎಂದಿದ್ದರು. ಅಂತೆಯೇ ಇಂದು ಹೇಮಂತ್ ಸೊರೆನ್ ಪ್ರಮಾಣ ವಚನದಲ್ಲಿ ವಿಪಕ್ಷಗಳು ಒಗ್ಗಟ್ಟು ಪ್ರದರ್ಶಿಸುವ ಸಾಧ್ಯತೆ ಇದೆ.
Advertisement
8:04 AM, 29 Dec

ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಶಿಬು ಸೊರೆನ್ ಅವರ ಪುತ್ರ ಹೇಮಂತ್ ಸೂರೆನ್ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದು, ಆರ್‌ಜೆಡಿ-ಕಾಂಗ್ರೆಸ್‌-ಜೆಎಂಎಂ ನ ಒಮ್ಮತದ ಆಯ್ಕೆ ಅವರಾಗಿದ್ದಾರೆ. ಹೇಮಂತ್ ಎರಡನೇ ಬಾರಿಗೆ ಜಾರ್ಖಂಡ್‌ ನ ಸಿಎಂ ಆಗಲಿದ್ದಾರೆ.

English summary
Jharkhand Cm Hemant Soren Swearing In Ceremony LIVE updates in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X