ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾರ್ಖಂಡ್: ನಾಮಪತ್ರ ಸಲ್ಲಿಕೆ ವೇಳೆ ಪಾಕಿಸ್ತಾನ ಪರ ಘೋಷಣೆ- ಇಬ್ಬರ ಬಂಧನ

|
Google Oneindia Kannada News

ರಾಂಚಿ, ಏ.21: ನಾಮಪತ್ರ ಸಲ್ಲಿಕೆ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಿದ ಘಟನೆ ಜಾರ್ಖಂಡ್ ಗಿರಿದಿಹ್ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಮೂವರನ್ನು ಬಂಧಿಸಲಾಗಿದೆ.

ಜಾರ್ಖಂಡ್ ನಲ್ಲಿ ಪಂಚಾಯತ್ ಚುನಾವಣೆ ಆರಂಭವಾಗಿದೆ. ಈ ಸಮಯದಲ್ಲಿ ಜಾರ್ಖಂಡ್‌ನ ಗಿರಿದಿಹ್ ಜಿಲ್ಲೆಯ ಗಂಡೆ ಬ್ಲಾಕ್‌ನಲ್ಲಿ ಮುಖ್ಯ ಅಭ್ಯರ್ಥಿಯೊಬ್ಬರ ನಾಮನಿರ್ದೇಶನಕ್ಕೆ ತೆರಳಿದ್ದರು. ಈ ವೇಳೆ ಬೃಹತ್ ಮೆರವಣಿಗೆ ಮಾಡಲಾಯಿತು. ಈ ಮೆರವಣಿಗೆಯಲ್ಲಿ ಪಾಕಿಸ್ತಾನದ ಪರ ಘೋಷಣೆಗಳ ಪ್ರಕರಣವು ಮುನ್ನೆಲೆಗೆ ಬಂದಿದೆ. ಬುಧವಾರ ಜಾರ್ಖಂಡ್‌ನಲ್ಲಿ ಪಂಚಾಯತ್ ಚುನಾವಣೆಗೆ ಅಭ್ಯಾರ್ಥಿ ಶಾಕಿರ್ ನಾಮಪತ್ರ ಸಲ್ಲಿಸಲು ತೆರಳುವ ವೇಳೆ ಮೆರವಣಿಗೆಯಲ್ಲಿ ಬೆಂಬಲಿಗರು ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗಿದ್ದಾರೆ.

ಜಾರ್ಖಂಡ್ ರೋಪ್ ವೇ ದುರಂತ; ರಕ್ಷಣಾ ತಂಡದೊಂದಿಗೆ ಮೋದಿ ಸಂವಾದ ಜಾರ್ಖಂಡ್ ರೋಪ್ ವೇ ದುರಂತ; ರಕ್ಷಣಾ ತಂಡದೊಂದಿಗೆ ಮೋದಿ ಸಂವಾದ

ಇದನ್ನು ಗಾಂಡೇಯ ಸರ್ಕಲ್ ಆಫೀಸರ್ ರಫಿ ಆಲಂ ಮತ್ತು ಗಂಡೆ ಠಾಣೆ ಪ್ರಭಾರಿ ಹಸನೈನ್ ಕೂಡ ಖಚಿತಪಡಿಸಿದ್ದಾರೆ. ಗಾಂಧಿ ಪಿಎಸ್ ಪ್ರದೇಶದಲ್ಲಿ ಪಂಚಾಯತ್ ಚುನಾವಣೆಗೆ ನಾಮಪತ್ರ ಸಲ್ಲಿಸುವ ಮೆರವಣಿಗೆಯಲ್ಲಿ ಪಾಕಿಸ್ತಾನದ ಪರ ಘೋಷಣೆ (ಪಾಕಿಸ್ತಾನ ಜಿಂದಾಬಾದ್) ಕೇಳಿಬಂದ ವಿಡಿಯೋ ವೈರಲ್ ಆಗಿದೆ ಎಂದು ಗಿರಿದಿಹ್ ಎಸ್‌ಡಿಪಿಒ ಅನಿಲ್ ಕುಮಾರ್ ಸಿಂಗ್ ಖಚಿತಪಡಿಸಿದ್ದಾರೆ.

ಮುಖ್ಯ ಅಭ್ಯರ್ಥಿ ಮೊಹಮ್ಮದ್ ಶಾಕಿರ್ ಅವರ ಬೆಂಬಲಿಗರು ಬ್ಲಾಕ್ ಕಚೇರಿ ಗೇಟ್ ಬಳಿ ಅವರನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗುತ್ತಿದ್ದರು. ಇದೇ ವೇಳೆ ಪಾಕಿಸ್ತಾನದ ಪರ ಘೋಷಣೆಗಳು ಕೇಳಿ ಬಂದಿವೆ. ಗಿರಿದಿಹ್ ಪೊಲೀಸರು ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಶಾಕಿರ್ ಮತ್ತು ಅವರ ಇಬ್ಬರು ಬೆಂಬಲಿಗರನ್ನು ಬಂಧಿಸಿದ್ದಾರೆ.

Jharkhand: ‘Pakistan Zindabad’ Slogan Raised During Mukhiya Nomination Rally

ಇದಲ್ಲದೆ ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗಿದ ವೈರಲ್ ವಿಡಿಯೊಗೆ ಸಂಬಂಧಿಸಿದಂತೆ ಎಫ್‌ಐಆರ್‌ನಲ್ಲಿ ಒಟ್ಟು 10 ಜನರನ್ನು ಹೆಸರಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ. ಜಾರ್ಖಂಡ್‌ನಲ್ಲಿ ಮೊದಲ ಹಂತದ ಪಂಚಾಯತ್ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆಯು ಏಪ್ರಿಲ್ 16 ರಿಂದ ರಾಜ್ಯದ 21 ಜಿಲ್ಲೆಗಳ 72 ಬ್ಲಾಕ್‌ಗಳಲ್ಲಿ ಪ್ರಾರಂಭವಾಯಿತು. ಮೇ 14 ರಂದು ಮೊದಲ ಹಂತದಲ್ಲಿ 1,127 ಪಂಚಾಯತ್‌ಗಳಿಗೆ ಮತದಾನ ನಡೆಯಲಿದ್ದು, ಮೇ 17 ರಂದು ಮತ ಎಣಿಕೆ ನಡೆಯಲಿದೆ.

ಮುಖ್ಯಾಧಿಕಾರಿಗಳು ಮತ್ತು ಪಂಚಾಯತ್ ಸಮಿತಿ, ಜಿಲ್ಲಾ ಪರಿಷತ್ ಮತ್ತು ಗ್ರಾಮ ಪಂಚಾಯತ್ ಸದಸ್ಯರ ಸ್ಥಾನಕ್ಕೆ ಒಟ್ಟು 6,267 ಅಭ್ಯರ್ಥಿಗಳು ಇದುವರೆಗೆ ಮೊದಲ ಸುತ್ತಿಗೆ ನಾಮಪತ್ರ ಸಲ್ಲಿಸಿದ್ದಾರೆ. ಮೊದಲ ಸುತ್ತಿನ ನಾಮನಿರ್ದೇಶನವು ಏಪ್ರಿಲ್ 23 ರಂದು ಮುಕ್ತಾಯಗೊಳ್ಳಲಿದೆ.

ಬುಧವಾರ 16 ಜಿಲ್ಲೆಗಳ 50 ಬ್ಲಾಕ್‌ಗಳಲ್ಲಿ ಎರಡನೇ ಹಂತದ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಒಟ್ಟು 872 ಪಂಚಾಯತ್‌ಗಳಿಗೆ ಮೇ 19 ರಂದು ಎರಡನೇ ಹಂತದಲ್ಲಿ 103 ಜಿಲ್ಲಾ ಪರಿಷತ್ ಸದಸ್ಯರು, 1,059 ಪಂಚಾಯತ್ ಸಮಿತಿ ಸದಸ್ಯರು, 872 ಮುಖ್ಯಾಧಿಕಾರಿಗಳು ಮತ್ತು 10,614 ಪಂಚಾಯತ್ ಸದಸ್ಯರನ್ನು ಆಯ್ಕೆ ಮಾಡಲು ಮತದಾನ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಾರ್ಖಂಡ್ ರಾಜ್ಯ ಚುನಾವಣಾ ಆಯೋಗವು ಏಪ್ರಿಲ್ 9 ರಂದು ಮೇ 14 ಮತ್ತು ಮೇ 27 ರ ನಡುವೆ ರಾಜ್ಯದಲ್ಲಿ ನಾಲ್ಕು ಹಂತದ ಗ್ರಾಮೀಣ ಚುನಾವಣೆಯನ್ನು ಘೋಷಿಸಿತು.

English summary
Two persons have been arrested for allegedly shouting pro-Pakistan slogans while nomination submission to the Jharkhand panchayat polls. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X