• search
  • Live TV
ರಾಂಚಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಊಟ ನೀಡಲು ತಡವಾಯಿತೆಂದು ಮಗನಿಂದ ತಾಯಿಯ ಕೊಲೆ

|
Google Oneindia Kannada News

ಊಟ ನೀಡುವುದಕ್ಕೆ ತಡವಾಯಿತು ಎಂದು ಮಗನೊಬ್ಬ ತಾಯಿಯನ್ನೇ ಹೊಡೆದು ಕೊಲೆ ಮಾಡಿರುವ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ.

ಆರೋಪಿ ಪವನ್ ಸೋಯಿ(35) ತನ್ನ ತಾಯಿ ಸುಮಿ(60) ಜೊತೆ ವಾಸಿಸುತ್ತಿದ್ದು, ಕುಡಿಯುವ ಅಭ್ಯಾಸ ಮಾಡಿಕೊಂಡಿದ್ದ ಸೋಯಿ, ಶುಕ್ರವಾರ ರಾತ್ರಿ ಇದ್ದಕ್ಕಿದ್ದಂತೆ ತನ್ನ ತಾಯಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ ಎಂದು ಗ್ರಾಮಸ್ಥರ ತಿಳಿಸಿದ್ದಾರೆ.

ತಾಯಿಯನ್ನು ಕೊಲೆ ಮಾಡಿದ ಬಳಿಕ ಸಾಕ್ಷ್ಯ ನಾಶ ಮಾಡಲು, ತಾಯಿಯ ಶವವನ್ನು ತನ್ನ ಮನೆಯ ಅಂಗಳದಲ್ಲಿಯೇ ಅಂತ್ಯಕ್ರಿಯೆ ಮಾಡಲು ಯತ್ನಿಸಿದ ಘಟನೆ ಚೈಬಾಸಾದ ಮಹೋಹರ್‌ಪುರ ಬ್ಲಾಕ್‌ನ ಜೊಜೋಗುಟ್ಟು ಗ್ರಾಮದಲ್ಲಿ ನಡೆದಿದೆ.

ಮಗು ದತ್ತು ಕೇಳಿದ ತಮ್ಮ, ಒಪ್ಪದ ಅಣ್ಣನನ್ನು ಕೊಂದು ಸುಟ್ಟ!ಮಗು ದತ್ತು ಕೇಳಿದ ತಮ್ಮ, ಒಪ್ಪದ ಅಣ್ಣನನ್ನು ಕೊಂದು ಸುಟ್ಟ!

ನಿನ್ನೆ ರಾತ್ರಿ 9 ಗಂಟೆಯ ಸುಮಾರಿಗೆ ಕುಡಿದು ಮನೆಗೆ ಬಂದಿದ್ದ ಆರೋಪಿ, ಊಟ ನೀಡುವಂತೆ ತಾಯಿಗೆ ಕೇಳಿದ್ದಾನೆ. ಊಟ ನೀಡಲು ತಡವಾಗಿದ್ದಕ್ಕೆ ಹತ್ತಿರದಲ್ಲಿದ್ದ ಕೋಲನ್ನು ತೆಗೆದುಕೊಂಡು ಹೊಡೆಯಲು ಆರಂಭಿಸಿದ್ದಾನೆ" ಎಂದು ಮನೋಹರಪುರ ಪೊಲೀಸ್ ಅಧಿಕಾರಿ ವಿಮಲೇಶ್ ತ್ರಿಪಾಠಿ ತಿಳಿಸಿದ್ದಾರೆ.

ಚೈಬಾಸಾದ ಮಹೋಹರ್‌ಪುರ ಬ್ಲಾಕ್‌ನ ಜೊಜೊಗುಟ್ಟು ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದೆ. ಆದರೆ ಶನಿವಾರ ಬೆಳಗ್ಗೆ ಆರೋಪಿಗಳ ಸಂಬಂಧಿಕರೊಬ್ಬರು ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾವು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ, ಪವನ್ ಸೋಯಿ ಅಲಿಯಾಸ್ ಪ್ರಧಾನ್ ಸೋಯಿ ತನ್ನ ತಾಯಿಯನ್ನು ಕೋಲಿನಿಂದ ಹೊಡೆದು ಕೊಂದು, ಬಳಿಕ ಮನೆ ಅಂಗಳದಲ್ಲಿ ಅಂತ್ಯಕ್ರಿಯೆ ಮಾಡಲು ಯತ್ನಿಸಿರುವುದು ಕಂಡು ಬಂದಿದೆ.

English summary
A man in Jharkhand allegedly thrashed his mother to death after she delayed serving him food on Friday night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X