ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾಕ್ಕೆ ಜಾರ್ಖಂಡ್ ನಲ್ಲಿ ನಿಷೇಧ

|
Google Oneindia Kannada News

ಜಾರ್ಖಂಡ್ ಸರಕಾರವು ಮಂಗಳವಾರದಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ ಐ) ಮೇಲೆ ನಿಷೇಧ ಹೇರಿದೆ. ದೇಶವಿರೋಧಿ ಚಟುವಟಿಕೆಗಳನ್ನು ನಿಗ್ರಹಿಸಲು ಹಾಗೂ ಐಎಸ್ ಐಎಸ್ ನಂಥ ಸಂಘಟನೆ ಜತೆ ಪಿಎಫ್ ಐಗೆ ನಂಟಿರುವ ಕಾರಣಕ್ಕೆ ಈ ನಿರ್ಧಾರ ಮಾಡಲಾಗಿದೆ ಎಂದು ಸರಕಾರದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಅಪರಾಧ ಕಾನೂನು (ತಿದ್ದುಪಡಿ) ಕಾಯ್ದೆ, 1908ರ ಅಡಿಯಲ್ಲಿ ತಕ್ಷಣದಿಂದಲೇ ಅನ್ವಯ ಆಗುವಂತೆ ಪಿಎಫ್ ಐ ಅನ್ನು ನಿಷೇಧಿಸಲಾಗಿದೆ. ಅಧಿಸೂಚನೆಯಲ್ಲಿ ಹೇಳಿರುವ ಪ್ರಕಾರ, ಪಿಎಫ್ ಐಗೆ ಸದಸ್ಯರಾಗುವುದು, ದೇಣಿಗೆ ನೀಡುವುದು ಅಥವಾ ಅದರ ಮೂಲಭೂತ ವಿಚಾರಗಳ ಸಾಹಿತ್ಯವನ್ನು ತಮ್ಮ ಬಳಿ ಇಟ್ಟುಕೊಳ್ಳುವುದು ಅಥವಾ ಅವುಗಳನ್ನು ಮುದ್ರಿಸುವುದು ಅಪರಾಧ ಎನ್ನಲಾಗಿದೆ.

ಪಿಎಫ್ ಐ ನಿಷೇಧಕ್ಕೆ ಬಿಜೆಪಿ ಆಗ್ರಹ, ಪೊಲೀಸರಿಂದ ಜಲ ಫಿರಂಗಿಪಿಎಫ್ ಐ ನಿಷೇಧಕ್ಕೆ ಬಿಜೆಪಿ ಆಗ್ರಹ, ಪೊಲೀಸರಿಂದ ಜಲ ಫಿರಂಗಿ

ಪಿಎಫ್ ಐನ ಚಟುವಟಿಕೆಗಳು ವಿಪರೀತ ಹೆಚ್ಚಾಗಿರುವುದನ್ನು ಪರಿಶೀಲಿಸಲಾಯಿತು ಮತ್ತು ಅವುಗಳು ರಾಜ್ಯ ಮತ್ತು ದೇಶಕ್ಕೆ ಅಪಾಯಕರವಾಗಿದ್ದವು. ಶಾಂತಿ ಕದಡುವ, ಕೋಮು ಸೌಹಾರ್ದ ಹಾಳು ಮಾಡುವ ಹಾಗೂ ಜಾತ್ಯತೀತ ತತ್ವಕ್ಕೆ ಧಕ್ಕೆ ತರುವ ಸಾಮರ್ಥ್ಯ ಈ ಸಂಘಟನೆಗೆ ಇರುವುದರಿಂದ ಇಂಥ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

PFI

ಸಾಮಾಜಿಕ ವಿಭಜನೆ, ಭಾರತ ವಿರೋಧಿ ಹಾಗೂ ಪಾಕಿಸ್ತಾನ ಪರ ಘೋಷಣೆಗಳನ್ನು ಹರಡುತ್ತಿದೆ. ಐಎಸ್ ಐಎಸ್ ಹಾಗೂ ಜೆಎಂಬಿ ಜತೆ ನಂಟು ಹೊಂದಿದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ. ಜಾರ್ಖಂಡ್ ನ ವಿವಿಧೆಡೆ ಹಿಂಸಾ ಕೃತ್ಯಗಳಲ್ಲಿ ಭಾಗಿಯಾಸ ಹಾಗೂ ದೇಶವಿರೋಧಿ ಘೋಷಣೆಗಳನ್ನು ಕೂಗಿದ ಆರೋಪ ಪಿಎಫ್ ಐ ವಿರುದ್ಧ ಇದೆ.

ಫೆಬ್ರವರಿ 12, 2018ರಲ್ಲಿ ಜಾರ್ಖಂಡ್ ಸರಕಾರ ಇದಕ್ಕೂ ಮುನ್ನ ಪಿಎಫ್ ಐ ಮೇಲೆ ನಿಷೇಧ ಹೇರಿತ್ತು. ಆದರೆ ಆಗಸ್ಟ್ 28ರಂದು ಜಾರ್ಖಂಡ್ ಹೈ ಕೋರ್ಟ್ ಸರಕಾರದ ಅಧಿಸೂಚನೆಯನ್ನು ಪಕ್ಕಕ್ಕೆ ಸರಿಸಿತ್ತು. ಗೆಜೆಟ್ ನಲ್ಲಿ ಈ ಬಗ್ಗೆ ಸರಕಾರ ಅಧಿಸೂಚನೆ ಹೊರಡಿಸಿಲ್ಲ ಎಂಬುದನ್ನು ಪ್ರಶ್ನಿಸಿ, ಪಿಎಫ್ ಐ ಸಂಘಟನೆಯ ನಿಷೇಧವನ್ನು ಮಾಡಬಾರದೆಂದು ಸದಸ್ಯ ಅಬ್ದುಲ್ ಬದುದ್ ಕೋರ್ಟ್ ಮೆಟ್ಟಿಲೇರಿದ್ದರು.

ಕೇರಳದಿಂದ ಕರ್ನಾಟಕದವರೆಗೆ: ಪಿಎಫ್ಐ ಹುಟ್ಟು ಮತ್ತು ಬೆಳವಣಿಗೆಕೇರಳದಿಂದ ಕರ್ನಾಟಕದವರೆಗೆ: ಪಿಎಫ್ಐ ಹುಟ್ಟು ಮತ್ತು ಬೆಳವಣಿಗೆ

ಕರ್ನಾಟಕದಲ್ಲಿ ಹಿಂದೂ ಸಂಘಟನೆಗಳ ಹತ್ಯೆಗೆ ಸಂಬಂಧಿಸಿದಂತೆ ಪಿಎಫ್ ಐ ಕೈವಾಡವಿದೆ. ಆ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧಿಸಬೇಕು ಎಂದು ಬಿಜೆಪಿಯು ಆಗ್ರಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
The Jharkhand government on Tuesday banned the Popular Front of India (PFI) in the state to curb its anti-national activities and for keeping links with terror outfits like ISIS, a government notification said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X