ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ.30ರಂದು ಜಾರ್ಖಂಡ್ ಮೊದಲ ಹಂತದ ಮತದಾನದ ಮುನ್ನೋಟ

|
Google Oneindia Kannada News

ರಾಂಚಿ, ನವೆಂಬರ್ 29: ಜಾರ್ಖಂಡ್ ರಾಜ್ಯದಲ್ಲಿ ಬಿರುಸಿನ ಪ್ರಚಾರ ಗುರುವಾರ ಸಂಜೆಗೆ ಅಂತ್ಯವಾಗಿದೆ. ಜಾರ್ಖಂಡ್ ರಾಜ್ಯದಲ್ಲಿ ಐದು ಸುತ್ತಿನಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 30 ರಂದು ಮೊದಲ ಹಂತದ ಮತದಾನ ನಡೆಯಲಿದ್ದು, ಡಿಸೆಂಬರ್ 23ರಂದು ಕೊನೆ ಹಂತದ ಮತದಾನ ನಿಗದಿಯಾಗಿದೆ.

ಬಿಜೆಪಿಗೆ ಸೆಡ್ಡು ಹೊಡೆಯಲು ಜಾರ್ಖಂಡ್ ಮುಕ್ತಿ ಮೋರ್ಚಾ( ಜೆಎಂಎಂ), ಕಾಂಗ್ರೆಸ್, ಲಾಲೂ ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾ ದಳ ಮೈತ್ರಿಕೂಟ ರಚಿಸಿವೆ. ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೊರೆನ್ ಅವರು ಮೈತ್ರಿಕೂಟದ ಸಿಎಂ ಅಭ್ಯರ್ಥಿಯಾಗಿ ಗುರುತಿಸಿಕೊಂಡಿದ್ದಾರೆ. 81 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 31, ಆರ್ ಜೆಡಿ 7 ಹಾಗೂ ಜೆಎಂಎಂ 43 ಸ್ಥಾನಗಳಲ್ಲಿ ಸ್ಪರ್ಧೆಗಿಳಿದಿವೆ. ಜಾರ್ಖಂಡ್ ನಲ್ಲಿ ಕಳೆದ ವಿಧಾನಸಭೆ ಚುನಾವನೆ 2014 ರಲ್ಲಿ ನಡೆದಿತ್ತು. ಒಟ್ಟು 81 ಶಾಸಕ ಬಲದ ಜಾರ್ಖಂಡ್ ನಲ್ಲಿ ಪ್ರಸ್ತುತ ಬಿಜೆಪಿ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದೆ. 37 ಸ್ಥಾನಗಳ್ಲಲಿ ಜಯಗಳಿಸಿದ್ದ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿ, ಸ್ಥಳೀಯ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಬಹುಮತ ಸಾಬೀತುಪಡಿಸಿ, ಸರ್ಕಾರ ರಚಿಸಿತ್ತು. ರಘುವರ್ ದಾಸ್ ಮುಖ್ಯಮಂತ್ರಿಯಾಗಿದ್ದರು.

ಮೊದಲ ಹಂತದ ಮತದಾನ, ಕ್ಷೇತ್ರ ವಿವರ:
* 6 ಜಿಲ್ಲೆಗಳ 13 ಕ್ಷೇತ್ರಗಳಿಗೆ ನವೆಂಬರ್ 30ರಂದು ಮತದಾನ.
* ಛಾತ್ರಾ, ಗುಮ್ಲಾ, ಬಿಷುಣ್ ಪುರ್, ಲೊಹರ್ ದಾಗ, ಮಾನಿಕಾ, ಲತೇಹಾರ್, ಪಾನ್ಕಿ, ದಾಲ್ಟೊನ್ ಗಂಜ್, ಬಿಶ್ರಾಮ್ ಪುರ್, ಛಾತರೊರ್, ಹುಸೈನಾಬಾದ್, ಗರ್ಹ್ವಾ ಹಾಗೂ ಭವಾನಾಥ್ ಪುರ್.
* 13ರಲ್ಲಿ ಕಾಂಗ್ರೆಸ್ 6, ಜೆಎಂಎಂ 4, ಅರ್ ಜೆಡಿ 3 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೆ, ಬಿಜೆಪಿ 12 ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದು, ಹುಸೈನಾಬಾದ್ ನಲ್ಲಿ ವಿನೋದ್ ಕುಮಾರ್ ಸಿಂಗ್ ಗೆ ಬೆಂಬಲ ನೀಡಿದೆ.
* ಜಾರ್ಖಂಡ್ ವಿಕಾಸ್ ಮೋರ್ಚಾ(ಜೆವಿಎಂ) ಹಾಗೂ ಎಜೆಎಸ್ ಯು ಸ್ವತಂತ್ರವಾಗಿ ಕಣಕ್ಕಿಳಿದಿವೆ.

Jharkhand First phase polling: 6 district 13 constituencies Nov 30

ಅಂಕಿ ಅಂಶ:
ಒಟ್ಟು ವಿಧಾನಸಭಾ ಕ್ಷೇತ್ರಗಳು: 81
ಮೊದಲ ಹಂತದ ಸ್ಥಾನಗಳು: 13
ಒಟ್ಟು ಮತಕೇಂದ್ರಗಳು: 4892
ವಿವಿಪ್ಯಾಟ್: 6811
ಅಭ್ಯರ್ಥಿಗಳು: 189, ಪುರುಷ: 174, ಮಹಿಳೆ :15
ಮತದಾರರು: 37,83,055,ಪುರುಷ: 19,81,684, ಮಹಿಳೆ :18,01,356, ತೃತೀಯ ಲಿಂಗಿ:5, ಎನ್ನಾರೈ: 5, ಸೇವಾ ಮತದಾರರುಳ: 9973

18-25 ವರ್ಷದವರು: 7,54,210
25-40 ವರ್ಷದೊಳಗಿನವರು: 1505481
40-60:1090109
60 ವರ್ಷ: 433255

ಅತಿ ಹೆಚ್ಚು ಅಭ್ಯರ್ಥಿಗಳಿರುವ ಕ್ಷೇತ್ರ: ಭವಾನಾಥ್ ಪುರ್ (28)
ಅತಿ ಕಡಿಮೆ ಅಭ್ಯರ್ಥಿಗಳಿರುವ ಕ್ಷೇತ್ರ: ಛಾತ್ರಾ (9)

Jharkhand First phase polling: 6 district 13 constituencies Nov 30

ಅತಿ ಹೆಚ್ಚು ಮತದಾರರನ್ನು ಹೊಂದಿರುವ ಕ್ಷೇತ್ರ: ಭವಾನಾಥ್ ಪುರ್ (3,78,004)
ಅತಿ ಕಡಿಮೆ ಮತದಾರರನ್ನು ಹೊಂದಿರುವ ಕ್ಷೇತ್ರ: ಗುಮ್ಲಾ (2,19,874)

ಸಿ ವೋಟರ್ ಸಮೀಕ್ಷೆ ಪ್ರಕಾರ ಬಿಜೆಪಿಗೆ 41 ಸ್ಥಾನ ಸಿಗಲಿದೆ. ಪ್ರಮುಖ ವಿಪಕ್ಷ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) 18 ರಿಂದ 28 ಸ್ಥಾನಗಳನ್ನು ಗಳಿಸಬಹುದು, ಕಾಂಗ್ರೆಸ್ ಪಕ್ಷ 4 ರಿಂದ 10 ಸೀಟು ಗೆಲ್ಲಬಹುದು ಎಂದು ಹೇಳಲಾಗಿದೆ. ಅಖಿಲ ಜಾರ್ಖಂಡ್ ವಿದ್ಯಾರ್ಥಿ ಸಂಘಟನೆ(ಎಜೆಎಸ್ ಯು) 3 ರಿಂದ 9 ಸ್ಥಾನ ಗಳಿಸಬಹುದು. ಜಾರ್ಖಂಡ್ ವಿಕಾಸ್ ಮೋರ್ಚಾ ಹಾಗೂ ಇನ್ನಿರರ ಪಕ್ಷಗಳು 3-9 ಸ್ಥಾನ ಪಡೆಯಬಹುದು ಎಂದು ಹೇಳಿದೆ.

English summary
Campaigning for the first phase of Jharkhand assembly elections ended on Thursday. Ruling BJP is expected to face a strong challenge from the opposition alliance of Jharkhand Mukti Morcha (JMM), Congress and Rashtriya Janata Dal (RJD) in the five-phase polling starting with 13 constituencies across six districts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X