ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking : ವಾಹನ ತಪಾಸಣೆ ವೇಳೆ ಮಹಿಳಾ ಸಬ್ ಇನ್ಸ್‌ಪೆಕ್ಟರ್ ಹತ್ಯೆ

|
Google Oneindia Kannada News

ರಾಂಚಿ, ಜುಲೈ 20: ಹರ್ಯಾಣದಲ್ಲಿ ಅಕ್ರಮ ಗಣಿಗಾರಿಕೆ ತಡೆಯಲು ಹೋಗಿ ಹಿರಿಯ ಪೊಲೀಸ್ ಅಧಿಕಾರಿ ಹತ್ಯೆಗೊಳಗಾದ ಘಟನೆ ಇನ್ನು ತನಿಖೆಯಲ್ಲಿರುವಾಗಲೆ ಜಾರ್ಖಂಡ್‌ನಲ್ಲಿ ಮತ್ತೊಂದು ಆಘಾತಕಾರಿ ಘಟನೆ ವರದಿಯಾಗಿದೆ.

ಜಾರ್ಖಂಡ್‌ನ ರಾಂಚಿಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ಸಬ್ ಇನ್ಸ್‌ಪೆಕ್ಟರ್ ಸಂಧ್ಯಾ ಟೋಪ್ನೋ ಮೇಲೆ ಆರೋಪಿಗಳು ಪಿಕಪ್ ವ್ಯಾನ್ ಹರಿಸಿದ್ದಾರೆ ಎಂದು ವರದಿಯಾಗಿದೆ. ಸಂಧ್ಯಾ ಟೋಪ್ನೋ ಅವರನ್ನು ತೂಪುದಾನ ಒಪಿಯ ಪ್ರಭಾರಿಯಾಗಿ ನೇಮಿಸಲಾಗಿತ್ತು.

ಪಿಕಪ್ ವ್ಯಾನ್ ಅನುಮಾನಾಸ್ಪದ ವಸ್ತುಗಳನ್ನು ಸಾಗಿಸುತ್ತಿರುವ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿತು. ಈ ಬಗ್ಗೆ ಸಬ್ ಇನ್ಸ್‌ಪೆಕ್ಟರ್ ಪಿಕಪ್ ವ್ಯಾನ್ ಅನ್ನು ಚೆಕ್ ಪೋಸ್ಟ್‌ನಲ್ಲಿ ನಿಲ್ಲಿಸಲು ಹೇಳಿದ್ದರು. ಆದರೂ ಪಿಕಪ್ ವ್ಯಾನ್ ನಿಲ್ಲಿಸಿಲ್ಲ.

Jharkhand: Female sub-inspector moved down to death during vehicle check

ಈ ವೇಳೆ ಸಂಧ್ಯಾ ಟಾಪ್ನೋ ಪಿಕಪ್ ವ್ಯಾನ್ ಮುಂದೆ ಬಂದು ಅಡ್ಡ ಹಾಕಿದ್ದಾರೆ. ಚಾಲಕ ವಾಹನ ನಿಲ್ಲಿಸದೇ ಆಕೆಯ ಮೇಲೆಯೇ ವ್ಯಾನ್ ಹರಿಸಿದ್ದಾರೆ. ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆ ನಂತರ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಆರೋಪಿಯನ್ನು ಬಂಧಿಸಲಾಗಿದೆ ಎಂದು ರಾಂಚಿ ಎಸ್‌ಎಸ್‌ಪಿ ಮಾಹಿತಿ ನೀಡಿದ್ದಾರೆ. ಪೊಲೀಸರು ಕೃತ್ಯಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಮೃತ ಸಬ್ ಇನ್ಸ್‌ಪೆಕ್ಟರ್ ಸಂಧ್ಯಾ ಟೋಪ್ನೋ 2018ರ ಬ್ಯಾಚ್‌ನ ಕಾನ್‌ಸ್ಟೆಬಲ್. ಮೂಲಗಳ ಪ್ರಕಾರ, ಚೆಕ್ ಪೋಸ್ಟ್‌ನಲ್ಲಿ ಯಾವುದೇ ಬ್ಯಾರಿಕೇಡ್‌ಗಳಿಲ್ಲ. ಹೀಗಾಗಿ ಸಂಧ್ಯಾ ಟಾಪ್ನೋ ತನ್ನ ವಾಹನದಿಂದ ಇಳಿದು ಅನುಮಾನಾಸ್ಪದ ಪಿಕಪ್ ವ್ಯಾ ನ್‌ಗೆ ಅಡ್ಡ ನಿಂತು ಅದನ್ನು ನಿಲ್ಲಿಸಲು ಪ್ರಯತ್ನಿಸಿದ್ದಾರೆ.

ಮಂಗಳವಾರ (ಜುಲೈ 19 ) ಹರ್ಯಾಣದ ನುಹ್‌ನಲ್ಲಿ ಅಕ್ರಮ ಗಣಿಗಾರಿಕೆ ಮಾಫಿಯಾವನ್ನು ತಡೆಯಲು ಹೋಗಿದ್ದ ಡಿಎಸ್‌ಪಿ ಸುರೇಂದ್ರ ಸಿಂಗ್ ಬಿಷ್ಣೋಯ್ ಅವರ ಮೇಲೆ ಆರೋಪಿಗಳು ಲಾರಿ ಹರಿಸಿ ಕೊಲೆ ಮಾಡಿದ್ದರು. ಡಿಎಸ್‌ಪಿ ಸುರೇಂದ್ರ ಸಿಂಗ್ ಬಿಷ್ಣೋಯ್ ಅವರು ಅರಾವಳಿ ಪರ್ವತ ಶ್ರೇಣಿಯ ಸಮೀಪದ ಪಚಗಾಂವ್‌ನಲ್ಲಿ ಅಕ್ರಮವಾಗಿ ಕಲ್ಲುಗಳನ್ನು ಗಣಿಗಾರಿಕೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇಲೆ ಸ್ಥಳಕ್ಕೆ ಭೇಟಿ ನೀಡಿದ್ದರು.

Recommended Video

ಎರಡನೇ ಮಗು ಹೆರಲು ರೆಡಿಯಾದ್ರಾ Aishwarya Rai??ವಿಡಿಯೋ ನೋಡಿ‌ ನೀವ್‌ ಏನ್ ಹೇಳ್ತೀರಾ? *Entertainment |OneIndia

ಪೊಲೀಸ್ ಸಿಬ್ಬಂದಿಯನ್ನು ಕಂಡು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದವರು ಸ್ಥಳದಿಂದ ಪರಾರಿಯಾಗಲು ಆರಂಭಿಸಿದರು. ಹಿರಿಯ ಅಧಿಕಾರಿ ಆರೋಪಿಗಳ ದಾರಿಯಲ್ಲಿ ಅಡ್ಡ ನಿಂತು ಕಲ್ಲು ತುಂಬಿದ ವಾಹನಗಳನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದರೆ ಲಾರಿ ಚಾಲಕ ಅಧಿಕಾರಿ ಮೇಲೆಯೇ ಲಾರಿ ಹರಿಸಿ ಹತ್ಯೆ ಮಾಡಿದ್ದರು. ಪೊಲೀಸ್ ಅಧಿಕಾರಿ ಕುಟುಂಬಕ್ಕೆ ಸರ್ಕಾರ 1 ಕೋಟಿ ರೂಪಾಯಿ ಪರಿಹಾರ ಮತ್ತು ಕುಟುಂಬದ ಓರ್ವ ವ್ಯಕ್ತಿಗೆ ಸರಕಾರಿ ಉದ್ಯೋಗ ಘೋಷಿಸಿದೆ.

English summary
Female sub-inspector Sandhya Topno moved down to death during vehicle check. Accused has been arrested and vehicle has been seized know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X