• search
  • Live TV
ರಾಂಚಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜುಲೈ 31ರ ತನಕ ಲಾಕ್ ಡೌನ್ ವಿಸ್ತರಿಸಿದ ಮತ್ತೊಂದು ರಾಜ್ಯ

|

ರಾಂಚಿ, ಜೂನ್ 26 : ಜಾರ್ಖಂಡ್‌ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಹರಡದಂತೆ ಇರುವ ಲಾಕ್ ಡೌನ್‌ಅನ್ನು ಜುಲೈ 31ರ ತನಕ ವಿಸ್ತರಣೆ ಮಾಡಲಾಗಿದೆ. ಈಗಾಗಲೇ ಪಶ್ಚಿಮ ಬಂಗಾಳ ಸರ್ಕಾರ ಜುಲೈ 31ರ ತನಕ ಲಾಕ್ ಡೌನ್ ವಿಸ್ತರಣೆ ಮಾಡಿದೆ.

ಶುಕ್ರವಾರ ಜಾರ್ಖಂಡ್‌ ರಾಜ್ಯ ಸರ್ಕಾರ ಜುಲೈ 31ರ ತನಕ ಲಾಕ್ ಡೌನ್ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2, 261. ಇದುವರೆಗೂ 12 ಜನರು ರಾಜ್ಯದಲ್ಲಿ ಮೃತಪಟ್ಟಿದ್ದಾರೆ.

ಲಾಕ್ ಡೌನ್ ವಿಸ್ತರಣೆ; ಜುಲೈ 1ರಿಂದ ಮೆಟ್ರೋ ಸಂಚಾರ ಆರಂಭ

ಕೇಂದ್ರ ಗೃಹ ಇಲಾಖೆ ಘೋಷಣೆ ಮಾಡಿರುವ 5ನೇ ಹಂತದ ಲಾಕ್ ಡೌನ್ (ಅನ್‌ ಲಾಕ್ 1) ಜೂನ್ 30ರ ತನಕ ದೇಶದಲ್ಲಿ ಜಾರಿಯಲ್ಲಿ ಇರುತ್ತದೆ. ಜಾರ್ಖಂಡ್‌ ರಾಜ್ಯದಲ್ಲಿ ಜುಲೈ 1ರಿಂದ ಜುಲೈ 31ರ ತನಕ ಲಾಕ್ ಡೌನ್ ಜಾರಿಗೆ ಬರಲಿದೆ.

ಜುಲೈ 31ರ ತನಕ ಲಾಕ್ ಡೌನ್ ವಿಸ್ತರಣೆ; ಮೆಟ್ರೋ, ರೈಲು ಇಲ್ಲ

ಜಾರ್ಖಂಡ್ ಸರ್ಕಾರದ ಆದೇಶದ ಪ್ರಕಾರ ಲಾಕ್ ಡೌನ್ ಜಾರಿಯಲ್ಲಿದ್ದರೂ ಈಗ ನೀಡಿರುವ ವಿನಾಯಿತಿಗಳು ಮುಂದುವರೆಯಲಿದೆ. ರಾತ್ರಿಯ ಕರ್ಫ್ಯೂ ಹಾಗೇಯೇ ಮುಂದುವರೆಯಲಿದೆ.

ಭಾರತದಲ್ಲಿ 5 ಲಕ್ಷದ ಗಡಿ ದಾಟಿದ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ

ಪಶ್ಚಿಮ ಬಂಗಾಳ ಸರ್ಕಾರ ಈಗಾಗಲೇ ಜುಲೈ 31ರ ತನಕ ಲಾಕ್ ಡೌನ್ ವಿಸ್ತರಣೆ ಮಾಡಿದೆ. ದೆಹಲಿ ಸರ್ಕಾರ ಜುಲೈ 31ರ ತನಕ ಶಾಲೆಗಳನ್ನು ತೆರೆಯುವುದಿಲ್ಲ ಎಂದು ಹೇಳಿದೆ.

English summary
Jharkhand government extended lock down till July 31, 2020. 2, 261 Coronavirus cases recorded in in state so far.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X