ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

ಜಾರ್ಖಂಡ್ ಚುನಾವಣೋತ್ತರ ಸಮೀಕ್ಷೆ: BJPಗೆ ಸೋಲು, ಕಾಂಗ್ರೆಸ್ ಮೈತ್ರಿಗೆ ಜಯ

|
Google Oneindia Kannada News

ರಾಂಚಿ, ಡಿಸೆಂಬರ್ 20: ಜಾರ್ಖಂಡ್ ವಿಧಾನಸಭೆ ಚುನಾವಣೆಯ ಐದನೇ ಹಾಗೂ ಕೊನೆ ಹಂತದ ಮತದಾನ ಪ್ರಕ್ರಿಯೆ ಶುಕ್ರವಾರ(ಡಿ. 20) ರಂದು ಮುಕ್ತಾಯವಾಗಿದೆ. ಚುನಾವಣೆ ಆಯೋಗವು ಡಿಸೆಂಬರ್ 30ರಂದು ಸಂಜೆ 6:30 ರ ನಂತರವಷ್ಟೇ ಚುನಾವಣೋತ್ತರ ಸಮೀಕ್ಷೆ ಫಲಿತಾಂಶ ಪ್ರಕಟಿಸುವಂತೆ ಸೂಚಿಸಿತ್ತು. ಅದರಂತೆ ಸಂಜೆ ವಿವಿಧ ಸಂಸ್ಥೆಗಳ ಎಕ್ಸಿಟ್ ಪೋಲ್ ಫಲಿತಾಂಶ ಪ್ರಕಟವಾಗಿದೆ

ಜಾರ್ಖಂಡ್ ನಲ್ಲಿ ಒಟ್ಟು ಐದು ಹಂತದಲ್ಲಿ ಚುನಾವಣೆ ನಡೆದು, ನವೆಂಬರ್ 30ರಿಂದ ಡಿಸೆಂಬರ್ 20 ರ ತನಕ ಮತದಾನವಾಗಿದೆ. ಡಿಸೆಂಬರ್ 23ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು, ಫಲಿತಾಂಶ ಹೊರಬರಲಿದೆ.

ಬಿಜೆಪಿಗೆ ಸೆಡ್ಡು ಹೊಡೆಯಲು ಜಾರ್ಖಂಡ್ ಮುಕ್ತಿ ಮೋರ್ಚಾ( ಜೆಎಂಎಂ), ಕಾಂಗ್ರೆಸ್, ಲಾಲೂ ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾ ದಳ ಮೈತ್ರಿಕೂಟ ರಚಿಸಿವೆ. ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೊರೆನ್ ಅವರು ಮೈತ್ರಿಕೂಟದ ಸಿಎಂ ಅಭ್ಯರ್ಥಿಯಾಗಿ ಗುರುತಿಸಿಕೊಂಡಿದ್ದಾರೆ.

Jharkhand Exit Poll Results 2019 LIVE: Can the BJP retain power?

ಜಾರ್ಖಂಡ್​​ನಲ್ಲಿ ನವೆಂಬರ್​​ 1ರಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ರಾಜ್ಯ ವಿಧಾನಸಭೆಯ ಐದು ವರ್ಷಗಳ ಅವಧಿ ಜನವರಿ 5, 2020 ಕ್ಕೆ ಮುಕ್ತಾಯಗೊಳ್ಳಲಿದೆ. ಚುನಾವಣಾ ಖರ್ಚಿನ ಮೇಲೆ ಹಿಡಿತ ಸಾಧಿಸಲು ಪ್ರತಿ ಜಿಲ್ಲೆಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳನ್ನು ನೇಮಿಸಲಾಗಿತ್ತು.

Newest FirstOldest First
6:10 PM, 21 Dec

ಜಾರ್ಖಂಡ್ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಎಂಎಂ ಪಕ್ಷಗಳು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದು, ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಆಡಳಿತಾರೂಢ ಬಿಜೆಪಿ ಹಿನ್ನಡೆ ಅನುಭವಿಸುತ್ತಿದ್ದು, ಕಾಂಗ್ರೆಸ್ ಜೆಎಂಎಂ ಮೈತ್ರಿ ಸರ್ಕಾರ ರಚಿಸುವ ಸಾಧ್ಯತೆ ಇದೆ.
6:07 PM, 21 Dec

ರಿಪಬ್ಲಿಕ್ ಟಿವಿ-ಜನತಾ ಕೀ ಬಾತ್ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 22-30 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಜೆಎಂಎಂ ಪಕ್ಷವು 28-33 ಸ್ಥಾನಗಳಲ್ಲಿ ಗೆಲ್ಲಲಿದೆ. ಕಾಂಗ್ರೆಸ್‌ 10-15 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಎಜೆಎಸ್‌ಯು 3-5, ಆರ್‌ಜೆಡಿ 3-4, ಸಿಪಿಎಂ 1-0, ಜೆವಿಎಂ 3-4, ಇತರೆ 5-7 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ.
6:04 PM, 21 Dec

ರಿಪಬ್ಲಿಕ್ ಟಿವಿ-ಜನತಾ ಕೀ ಬಾತ್ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲು ಕಾಣಲಿದೆ.
9:12 PM, 20 Dec

ಟೈಮ್ಸ್‌ ನೌ ನಡೆಸಿರುವ ಎಕ್ಸಿಟ್ ಪೋಲ್‌ ಸಮೀಕ್ಷೆ ಪ್ರಕಾರ ಜಾರ್ಖಂಡ್‌ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 30, ಕಾಂಗ್ರೆಸ್‌ ಮತ್ತು ಜೆಎಂಎಂ 44, ಜೆವಿಎಂಪಿ 3, ಎಜೆಎಸ್‌ಯು 0 ಮತ್ತು ಇತರೆ 6 ಸ್ಥಾನಗಳಲ್ಲಿ ಗೆಲ್ಲಬಹುದು.
8:34 PM, 20 Dec

ಜಾರ್ಖಂಡ್ ಚುನಾವಣೋತ್ತರ ಸಮೀಕ್ಷೆ ಫಲಿತಾಂಶ
8:15 PM, 20 Dec

ಚುನಾವಣೋತ್ತರ ಸಮೀಕ್ಷೆ ಸರಾಸರಿ

ಡಿಸೆಂಬರ್ 20ರಂದು ಪ್ರಕಟವಾದ ಪ್ರಮುಖ ಚುನಾವಣೋತ್ತರ ಸಮೀಕ್ಷೆಗಳ ಸರಾಸರಿಯಂತೆ ಜೆಎಂಎಂ -ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸಾಧ್ಯತೆ ಹೆಚ್ಚಿದೆ
7:50 PM, 20 Dec

ಕಶೀಶ್ ನ್ಯೂಸ್ ಸಮೀಕ್ಷೆ

ಕಶೀಶ್ ನ್ಯೂಸ್ ನಡೆಸಿದ ಚುನಾವಣೋತ್ತರ ಸಮೀಕ್ಷೆ ಪ್ರಕಾರ, ಬಿಜೆಪಿ ಬದಲಿಗೆ ಜೆಎಂಎಂ-ಕಾಂಗ್ರೆಸ್- ಆರ್ ಜೆ ಡಿ ಮಹಾಘಟಬಂಧನ್ ಅಧಿಕಾರಕ್ಕೇರುವ ಅವಕಾಶ ಹೆಚ್ಚಿದೆ. ಬಿಜೆಪಿ: 25-30 ಕಾಂಗ್ರೆಸ್ ಪ್ಲಸ್: 37-49 ಎಜೆಎಸ್ ಯು: 2-4 ಇತರೆ: 2-4
Advertisement
7:39 PM, 20 Dec

ಇಂಡಿಯಾ ಟುಡೇ- ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್

ಇಂಡಿಯಾ ಟುಡೇ- ಆಕ್ಸಿಸ್ ಮೈ ಇಂಡಿಯಾ ಚುನಾವಣೋತ್ತರ ಸಮೀಕ್ಷೆ ಪ್ರಕಾರ, ಜಾರ್ಖಂಡ್ ರಾಜ್ಯವನ್ನು ಬಿಜೆಪಿ ಕಳೆದುಕೊಳ್ಳಲಿದ್ದು, ಕಾಂಗ್ರೆಸ್ ಜೆಎಂಎಂ ಪಕ್ಷ ಅಧಿಕಾರಕ್ಕೆ ಬರಲಿದೆ ಬಿಜೆಪಿ: 22-32 (38% ಶೇಕಡವಾರು ಮತ ಗಳಿಕೆ) ಜೆಎಂಎಂ+ಕಾಂಗ್ರೆಸ್ : 38-50 (37%) ಜೆವಿಎಂ: 2-4 (6%) ಎಜೆಎಸ್ ಯು: 3-5 (9%) ಇತರೆ: 4-7 (14%)
7:30 PM, 20 Dec

ಐಎಎನ್ ಎಸ್ -ಸಿವೋಟರ್ ಪ್ರಕಾರ

ಐಎಎನ್ಎಸ್ -ಸಿವೋಟರ್-ಎಬಿಪಿ ಚುನಾವಣೋತ್ತರ ಸಮೀಕ್ಷೆ ಪ್ರಕಾರ, ಜಾರ್ಖಂಡ್ ನಲ್ಲಿ ಅತಂತ್ರ ವಿಧಾನಸಭೆ ಪರಿಸ್ಥಿತಿ ನಿರ್ಮಾಣವಾಗಲಿದೆ. ಆದರೆ, ಕಾಂಗ್ರೆಸ್- ಜೆಎಂಎಂ- ಆರ್ ಜೆ ಡಿ ಬಹುಮತ ಸಾಧಿಸುವ ದಾರಿ ಸಿಗಲಿದೆ. ಕಾಂಗ್ರೆಸ್ + ಜೆಎಂಎಂ + ಆರ್ ಜೆಡಿ= 31-39 ಸ್ಥಾನ ಬಿಜೆಪಿ + ಎಜೆಎಸ್ ಯು + ಜೆವಿಎಂ= 28-36 ಸ್ಥಾನ ಇತರೆ: 11 ಸ್ಥಾನ
7:14 PM, 20 Dec

ಐಎಎನ್‌ಎಸ್‌-ಸಿ ವೋಟರ್ ಎಕ್ಸಿಟ್ ಪೋಲ್ ಸಮೀಕ್ಷೆ ಪ್ರಕಾರ ಬಿಜೆಪಿಯು 25-36 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಜೆಎಂಎಂ-ಕಾಂಗ್ರೆಸ್-ಆರ್‌ಜೆಡಿ ಪಕ್ಷದ ಮೈತ್ರಿಯು 39 ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಜಾರ್ಖಂಡ್‌ನಲ್ಲಿ ಸರ್ಕಾರ ರಚಿಸಲು 41 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕಿದೆ.
7:08 PM, 20 Dec

ಇಂಡಿಯಾ ಟುಡೇ- ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್

ಇಂಡಿಯಾ ಟುಡೇ- ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ 2019 ಸಮೀಕ್ಷೆಯನ್ನು 12, 489 ಸ್ಯಾಂಪಲ್ ಮೂಲಕ ನಿರ್ಧರಿಸಲಾಗುತ್ತದೆ. ಶೇ76 ರಷ್ಟು ಪುರುಷರು ಹಾಗೂ ಶೇ 24 ರಷ್ಟು ಮಹಿಳೆಯರು ಇದರಲ್ಲಿ ಭಾಗವಹಿಸಿದ್ದರು.
7:05 PM, 20 Dec

ಸಿಫಿ ಇಂಡಿಯಾ ಸಮೀಕ್ಷೆ ಪ್ರಕಾರ ಬಿಜೆಪಿಯು ಮತ್ತೊಂದು ರಾಜ್ಯವನ್ನು ಕಳೆದುಕೊಳ್ಳಲಿದೆ. ಆಡಳಿತಾರೂಢ ಬಿಜೆಪಿ ಕೇವಲ 25 ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಕಾಂಗ್ರೆಸ್ ಪ್ರದರ್ಶನದಲ್ಲಿ ಸುಧಾರಣೆ ಕಂಡುಕೊಂಡು 12 ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಜೆಎಂಎಂ ಪಕ್ಷವು 25 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಆರ್‌ಜೆಡಿ 3, ಎಜೆಎಸ್‌ಯು 04, ಜೆವಿಎಂ 02, ಇತರೆ 8 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ.
Advertisement
6:47 PM, 20 Dec

2014ರಲ್ಲಿ ವಿಧಾನಸಭೆ ಫಲಿತಾಂಶ

2014ರ ಫಲಿತಾಂಶ: 37 ಸ್ಥಾನಗಳಲ್ಲಿ ಜಯಗಳಿಸಿದ್ದ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿ, ಸ್ಥಳೀಯ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಬಹುಮತ ಸಾಬೀತುಪಡಿಸಿ, ಸರ್ಕಾರ ರಚಿಸಿತ್ತು. ಕಾಂಗ್ರೆಸ್ 6 ಸ್ಥಾನ ಹಾಗೂ ಮಿಕ್ಕ 38 ಸ್ಥಾನಗಳನ್ನು ಪ್ರಾದೇಶಿಕ ಪಕ್ಷಗಳು ಗೆಲ್ಲುವಲ್ಲಿ ಸಫಲವಾಗಿದ್ದವು. ವಿಧಾನಸಭೆ 81 ಸ್ಥಾನಗಳನ್ನು ಹೊಂದಿದ್ದು, ಮ್ಯಾಜಿಕ್ ನಂಬರ್ 41.
6:46 PM, 20 Dec

ಜನಕೀ ಬಾತ್-ರಿಪಬ್ಲಿಕ್ ಟಿವಿ ಎಕ್ಸಿಟ್ ಪೋಲ್ ವರದಿ ನಾಳೆ (ಡಿಸೆಂಬರ್ 21) ಕ್ಕೆ ಹೊರಬೀಳಲಿದೆ.
6:40 PM, 20 Dec

ಜಾರ್ಖಂಡ್ ಕೃಷಿ ಸಚಿವ ರಣಧೀರ್ ಸಿಂಗ್ ಅವರು ಸರತ್ ಕ್ಷೇತ್ರದಲ್ಲಿ ಮರು ಆಯ್ಕೆ ಬಯಸಿದ್ದಾರೆ. ಮಹಿಳಾ ಮತ್ತು ಕಲ್ಯಾಣ ಸಚಿವ ಲೂಯಿಸ್ ಮರಾಂಡಿ ಅವರು ಜೆಎಂಎಂ ಕಾರ್ಯಕಾರಿ ಅಧ್ಯಕ್ಷ ಹೇಮಂತ್ ಸೊರೆನ್ ವಿರುದ್ಧ ಡುಮ್ಕಾದಲ್ಲಿ ಸ್ಪರ್ಧಿಸಿದ್ದಾರೆ.
6:25 PM, 20 Dec

2014 ರ ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು 37 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್‌ 6, ಎಜೆಎಸ್‌ಯು ಪಕ್ಷ 5, ಜೆಎಂಎಂ 19, ಜೆವಿಎಂ (ಪಿ) 8 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದವು. ಬಿಎಸ್‌ಪಿ 1, ಸಿಪಿಐ(ಎಂ) 1 ಕ್ಷೇತ್ರದಲ್ಲಿ ಗೆದ್ದಿತ್ತು. ಜೆವಿಎಂ (ಪಿ) ನ ಆರು ಶಾಸಕರು ಬಿಜೆಪಿ ಪಕ್ಷ ಸೇರಿದ ಕಾರಣ ಬಿಜೆಪಿಯು ಸರ್ಕಾರ ರಚನೆ ಮಾಡಿತ್ತು.
6:16 PM, 20 Dec

ಜಾರ್ಖಂಡ್‌ ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಗೆ ಅಗ್ನಿಪರೀಕ್ಷೆ ಎದುರಾಗಿದ್ದು, ಸಿಎಎ, ಅಯೋಧ್ಯೆ, ಎನ್‌ಆರ್‌ಸಿ ಇನ್ನೂ ಹಲವು ಕಾರಣಗಳಿಂದಾಗಿ ಬಿಜೆಪಿಗೆ ಜಾರ್ಖಂಡ್ ಚುನಾವಣೆ ಮುಖ್ಯವಾಗಿದೆ.
6:06 PM, 20 Dec

ಜಾರ್ಖಂಡ್ ವಿಧಾನಸಭೆ ಚುನಾವಣೆ ಐದನೇ ಹಂತದ ಮತದಾನ 5 ಗಂಟೆ ವೇಳೆಗೆ 68.99% ಮತದಾನ ದಾಖಲಾಗಿದೆ. ಇನ್ನು ಕೆಲವೇ ಹೊತ್ತಿನಲ್ಲಿ ಎಕ್ಸಿಟ್ ಪೋಲ್ ಫಲಿತಾಂಶ ಹೊರಬೀಳಲಿದೆ.
5:57 PM, 20 Dec

ಐದನೇ ಹಾಗೂ ಕೊನೆ ಹಂತದ ಮತದಾನ ಪ್ರಕ್ರಿಯೆ ಮುಗಿದಿದ್ದು, ಸುಮಾರು 62.65% ಮತದಾನ ದಾಖಲಾಗಿದೆ.
5:49 PM, 20 Dec

ಹರ್ಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಂತರ ಆಡಳಿತಾರೂಢ ಬಿಜೆಪಿಗೆ ಜಾರ್ಖಂಡ್ ನಲ್ಲಿ ಅಗ್ನಿ ಪರೀಕ್ಷೆಯಲ್ಲಿ ಗೆಲ್ಲುವುದೇ? ಬಿಜೆಪಿಯೇತರ ಸರ್ಕಾರದತ್ತ ಮತದಾರರ ಒಲವು ಮೂಡಿದೆಯೇ? ಫಲಿತಾಂಶ ಶೀಘ್ರದಲ್ಲೇ
5:38 PM, 20 Dec

ಕೆಲವೇ ಕ್ಷಣಗಳಲ್ಲಿ ಜಾರ್ಖಂಡ್ ವಿಧಾನಸಭೆ ಚುನಾವಣೆಯ ಚುನಾವಣೋತ್ತರ ಸಮೀಕ್ಷೆ ಹೊರಬೀಳಲಿದೆ. ಒನ್‌ಇಂಡಿಯಾ ಕನ್ನಡದಲ್ಲಿ ಚುನಾವಣೋತ್ತರ ಸಮೀಕ್ಷೆಯ ಕ್ಷಣ-ಕ್ಷಣದ ವರದಿ ಸಿಗಲಿದೆ.
1:43 PM, 20 Dec

ಸಿ ವೋಟರ್ ಸಮೀಕ್ಷೆ ಪ್ರಕಾರ ಬಿಜೆಪಿಗೆ 41 ಸ್ಥಾನ ಸಿಗಲಿದೆ. ಪ್ರಮುಖ ವಿಪಕ್ಷ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) 18 ರಿಂದ 28 ಸ್ಥಾನಗಳನ್ನು ಗಳಿಸಬಹುದು, ಕಾಂಗ್ರೆಸ್ ಪಕ್ಷ 4 ರಿಂದ 10 ಸೀಟು ಗೆಲ್ಲಬಹುದು ಎಂದು ಹೇಳಲಾಗಿದೆ. ಅಖಿಲ ಜಾರ್ಖಂಡ್ ವಿದ್ಯಾರ್ಥಿ ಸಂಘಟನೆ(ಎಜೆಎಸ್ ಯು) 3 ರಿಂದ 9 ಸ್ಥಾನ ಗಳಿಸಬಹುದು. ಜಾರ್ಖಂಡ್ ವಿಕಾಸ್ ಮೋರ್ಚಾ ಹಾಗೂ ಇನ್ನಿತರ ಪಕ್ಷಗಳು 3-9 ಸ್ಥಾನ ಪಡೆಯಬಹುದು ಎಂದು ಹೇಳಿದೆ.
1:43 PM, 20 Dec

81 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 31, ಆರ್ ಜೆಡಿ 7 ಹಾಗೂ ಜೆಎಂಎಂ 43 ಸ್ಥಾನಗಳಲ್ಲಿ ಸ್ಪರ್ಧೆಗಿಳಿದಿವೆ. ಜಾರ್ಖಂಡ್ ನಲ್ಲಿ ಕಳೆದ ವಿಧಾನಸಭೆ ಚುನಾವಣೆ 2014 ರಲ್ಲಿ ನಡೆದಿತ್ತು. ಒಟ್ಟು 81 ಶಾಸಕ ಬಲದ ಜಾರ್ಖಂಡ್ ನಲ್ಲಿ ಪ್ರಸ್ತುತ ಬಿಜೆಪಿ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದೆ. 37 ಸ್ಥಾನಗಳಲ್ಲಿ ಜಯಗಳಿಸಿದ್ದ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿ, ಸ್ಥಳೀಯ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಬಹುಮತ ಸಾಬೀತುಪಡಿಸಿ, ಸರ್ಕಾರ ರಚಿಸಿತ್ತು. ರಘುವರ್ ದಾಸ್ ಮುಖ್ಯಮಂತ್ರಿಯಾಗಿದ್ದಾರೆ.

READ IN ENGLISH

English summary
Jharkhand Exit Poll Results 2019: With the intensely-fought Jharkhand Assembly elections 2019 drawing to a close, the exit poll results will be released by news channels after polls closed for the last phase at 5.30 pm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X