ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾರ್ಖಂಡ್ ಮನೆ-ಮನೆ ಸಮೀಕ್ಷೆ: ಏಪ್ರಿಲ್-ಮೇ ತಿಂಗಳಲ್ಲಿ ಶೇ. 43 ಸಾವು ಅಧಿಕ

|
Google Oneindia Kannada News

ರಾಂಚಿ, ಜೂ.14: ಜಾರ್ಖಂಡ್‌ನಲ್ಲಿ ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಈ ಸಂದರ್ಭದಲ್ಲಿ ಮನೆ ಮನೆಗೆ ತೆರಳಿ ಸಾರ್ವಜನಿಕ ಆರೋಗ್ಯ ಸಮೀಕ್ಷೆ (ಐಪಿಎಚ್‌ಎಸ್) ನಡೆಸಲಾಗಿದೆ. ಈ ಸಮೀಕ್ಷೆಯಲ್ಲಿ 2021 ರ ಏಪ್ರಿಲ್-ಮೇ ತಿಂಗಳಿನಲ್ಲಿ ರಾಜ್ಯದಲ್ಲಿ 25,490 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯದ ಯೋಜನಾ ಇಲಾಖೆಯಲ್ಲಿನ ಅರ್ಥಶಾಸ್ತ್ರ ಮತ್ತು ಅಂಕಿಅಂಶಗಳ ನಿರ್ದೇಶನಾಲಯದ ಪ್ರಕಾರ ಏಪ್ರಿಲ್-ಮೇ 2019 ರಲ್ಲಿ ಎಲ್ಲಾ 24 ಜಿಲ್ಲೆಗಳಲ್ಲಿ ಅಧಿಕೃತವಾಗಿ ದಾಖಲಾದ ಒಟ್ಟು ಸಾವುಗಳು 17,819 ಗಿಂತ ಈ ಎರಡನೇ ಅಲೆಯ ಸಂದರ್ಭದಲ್ಲಿ ಏಪ್ರಿಲ್-ಮೇ ತಿಂಗಳಿನಲ್ಲಿ ದಾಖಲಾದ ಸಾವುಗಳು ಶೇ. 43 ರಷ್ಟು ಅಧಿಕವಾಗಿದೆ ಎಂದು ಈ ಸಮೀಕ್ಷೆಯು ತಿಳಿಸಿದೆ.

ತಮಿಳುನಾಡಿನ ಶೇ. 23 ಜನರಲ್ಲಿ ಕೋವಿಡ್ ಪ್ರತಿಕಾಯ ಪತ್ತೆ ತಮಿಳುನಾಡಿನ ಶೇ. 23 ಜನರಲ್ಲಿ ಕೋವಿಡ್ ಪ್ರತಿಕಾಯ ಪತ್ತೆ

2020 ಮತ್ತು 2021 ರಲ್ಲಿ ಉಂಟಾದ ಒಟ್ಟು ಕೊರೊನಾ ಸಾವುಗಳ ಬಗ್ಗೆಗಿನ ಸಮೀಕ್ಷೆಯ ನಂತರದ ಅಂಕಿ ಅಂಶವನ್ನು ಯೋಜನಾ ಇಲಾಖೆಯು ಇನ್ನೂ ಸ್ವೀಕರಿಸಿಲ್ಲ. ಆದ್ದರಿಂದ ಹಿಂದಿನ ವರ್ಷದ ಅಂಕಿ ಅಂಶಗಳು ಹಾಗೂ ಈ ವರ್ಷದ ಅಂಕಿ ಅಂಶಗಳ ಹೋಲಿಕೆಯು ಸದ್ಯಕ್ಕೆ ಸಾಧ್ಯವಿಲ್ಲ.

 ಮನೆ-ಮನೆ ಸಮೀಕ್ಷೆ

ಮನೆ-ಮನೆ ಸಮೀಕ್ಷೆ

ಮನೆ-ಮನೆ ಐಪಿಎಚ್‌ಎಸ್ ಸಮೀಕ್ಷೆ, ಮೂಲತಃ ರಾಜ್ಯದ 3.5 ಕೋಟಿ ಜನಸಂಖ್ಯೆಯನ್ನು ಒಳಗೊಂಡು ನಡೆಸಲು ಯೋಜಿಸಲಾಗಿತ್ತು. ಆದರೆ ಬಳಿಕ ಗ್ರಾಮೀಣ ಪ್ರದೇಶಗಳಿಗೆ ಸೀಮಿತಗೊಳಿಸಲಾಗಿದೆ. ಅಂತಿಮವಾಗಿ 2.56 ಕೋಟಿ ಜನರನ್ನು ಅಂದರೆ ಒಟ್ಟು ಜನಸಂಖ್ಯೆಯ 3:4 ಭಾಗವನ್ನು ಈ ಸಮೀಕ್ಷೆ ಒಳಗೊಂಡಿದೆ. ಇದನ್ನು ಮೇ 25 ಮತ್ತು ಜೂನ್ 5 ರ ನಡುವೆ 80,000 ಕ್ಕೂ ಹೆಚ್ಚು ಸಾಮಾಜಿಕ ಆರೋಗ್ಯ ಕಾರ್ಯಕರ್ತರು (ಆಶಾ), ಎಎನ್‌ಎಂಗಳು (ಸಹಾಯಕ ನರ್ಸ್ ಶುಶ್ರೂಷಕಿಯರು) ಮತ್ತು ಸಮುದಾಯ ಆರೋಗ್ಯ ಅಧಿಕಾರಿಗಳ (ಸಿಎಚ್‌ಒ) ಸಹಾಯದಿಂದ ನಡೆಸಲಾಯಿತು.

 ಸಮೀಕ್ಷೆಯ ಉದ್ದೇಶ

ಸಮೀಕ್ಷೆಯ ಉದ್ದೇಶ

ಸಮೀಕ್ಷೆಯ ಎರಡು ಪ್ರಾಥಮಿಕ ಉದ್ದೇಶಗಳನ್ನು ಹೊಂದಿದೆ. ಮೊದಲನೇಯದಾಗಿ ಜನರಲ್ಲಿ ಜಾಗೃತಿ ಮೂಡಿಸುವುದು, ಕೋವಿಡ್ -19 ಪರೀಕ್ಷೆ, ಔಷಧಿಗಳ ಬಗ್ಗೆ ಸಲಹೆ ನೀಡುವುದು ಮತ್ತು ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯುವುದು ಆಗಿದೆ. ಎರಡನೇಯ ಉದ್ದೇಶ ಗ್ರಾಮೀಣ ಪ್ರದೇಶಗಳಲ್ಲಿನ ಸಾವುಗಳನ್ನು ದಾಖಲಿಸುವುದು.

ವಿಶ್ವದಲ್ಲಿ ವಾಸಯೋಗ್ಯವಾದ 10 ನಗರಗಳು ಯಾವುದು?- ಇಲ್ಲಿದೆ ಸಮೀಕ್ಷೆ ವರದಿವಿಶ್ವದಲ್ಲಿ ವಾಸಯೋಗ್ಯವಾದ 10 ನಗರಗಳು ಯಾವುದು?- ಇಲ್ಲಿದೆ ಸಮೀಕ್ಷೆ ವರದಿ

 ಸಮೀಕ್ಷೆ ಪ್ರಕಾರ 25 ಸಾವಿರಕ್ಕೂ ಹೆಚ್ಚು ಸಾವು ದಾಖಲು

ಸಮೀಕ್ಷೆ ಪ್ರಕಾರ 25 ಸಾವಿರಕ್ಕೂ ಹೆಚ್ಚು ಸಾವು ದಾಖಲು

ಈ ಸಮೀಕ್ಷೆಯ ಬಗ್ಗೆ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಮಾಹಿತಿ ನೀಡಿದ ಜಾರ್ಖಂಡ್‌ನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಆರೋಗ್ಯ) ಅರುಣ್ ಸಿಂಗ್, ''ಸಮೀಕ್ಷೆಯ ಸಮಯದಲ್ಲಿ 25 ಸಾವಿರಕ್ಕೂ ಹೆಚ್ಚು ಸಾವುಗಳು ದಾಖಲಾಗಿವೆ. ಆದಾಗ್ಯೂ, ಈ ಸಾವುಗಳಿಗೆ ಕಾರಣವೇನು ಎಂಬುದು ನಮಗೆ ಇನ್ನೂ ತಿಳಿದಿಲ್ಲ. ಸಮೀಕ್ಷೆಯಲ್ಲಿ ದಾಖಲಾದ ಸಾವುಗಳ ಕಾರಣವನ್ನು ಕಂಡುಹಿಡಿಯಲು ನಾವು ಈಗ ಮತ್ತೊಂದು ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೇವೆ,'' ಎಂದು ತಿಳಿಸಿದ್ದಾರೆ. ಅಧಿಕೃತವಾಗಿ, ಈ ವರ್ಷದ ಏಪ್ರಿಲ್-ಮೇ ಅವಧಿಯಲ್ಲಿ ಕೋವಿಡ್ -19 ನಿಂದ 3,864 ಸಾವುಗಳು ಸಂಭವಿಸಿವೆ ಎಂದು ರಾಜ್ಯ ಸರ್ಕಾರ ಹೇಳಿದೆ. ಬಳಿಕ ಸಮೀಕ್ಷೆಯ ಬಳಿಕ ಸಾವಿನ ಪ್ರಮಾಣ ಅಧಿಕವಾಗಿದೆ ಎಂದು ವರದಿಯಾಗಿದೆ.

 ನೀವು ಗಮನಿಸಬೇಕಾದ ಎರಡು ಮುಖ್ಯ ಅಂಶಗಳು

ನೀವು ಗಮನಿಸಬೇಕಾದ ಎರಡು ಮುಖ್ಯ ಅಂಶಗಳು

ಒಂದನೇಯದಾಗಿ 2019 ರ ಸಾಮಾನ್ಯ ವರ್ಷವಧಿಯಲ್ಲಿ ಅಧಿಕೃತವಾಗಿ ನೋಂದಾಯಿತ ಸಾವಿನ ಸಂಖ್ಯೆ 17,819 ರಷ್ಟಿದೆ. ಮನೆ-ಮನೆ ಸಮೀಕ್ಷೆಯು ಯಾವಾಗಲೂ ಸಾವಿನ ಅಂಕಿ ಅಂಶವನ್ನು ಉತ್ತಮವಾಗಿ ಲೆಕ್ಕ ಹಾಕಲು ಸಹಾಯ ಮಾಡುತ್ತದೆ ಎಂಬುವುದು ನೀವು ಗಮನಿಸಬೇಕಾದ ಅಂಶ. ಇನ್ನು ಎರಡನೇಯದಾಗಿ ನಗರ ಪ್ರದೇಶಗಳಿಗಿಂತ ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸಾವುಗಳು ಅಗತ್ಯವಾಗಿ ನೋಂದಣಿಯಾಗಿಲ್ಲ ಎಂಬುದಾಗಿದೆ.

ಕೊರೊನಾ ಲಸಿಕೆ ವಿತರಣೆ ಕುರಿತು ಸಮೀಕ್ಷೆ ನಡೆಸಲಿರುವ ಬಿಬಿಎಂಪಿಕೊರೊನಾ ಲಸಿಕೆ ವಿತರಣೆ ಕುರಿತು ಸಮೀಕ್ಷೆ ನಡೆಸಲಿರುವ ಬಿಬಿಎಂಪಿ

 ಅಧಿಕೃತ ಸಾವಿನ ಸಂಖ್ಯೆಯಲ್ಲಿ ಹೆಚ್ಚಳ ಸಾಧ್ಯತೆ

ಅಧಿಕೃತ ಸಾವಿನ ಸಂಖ್ಯೆಯಲ್ಲಿ ಹೆಚ್ಚಳ ಸಾಧ್ಯತೆ

ಸಾವಿನ ಡೇಟಾವನ್ನು ವಿಶ್ಲೇಷಿಸಿ ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿರುವ ರಿಜಿಸ್ಟ್ರಾರ್ ಜನರಲ್ ಮತ್ತು ಸೆನ್ಸಸ್ ಕಮಿಷನರ್ ಕಚೇರಿಗೆ ಕಳುಹಿಸುವ ಜಾರ್ಖಂಡ್ ಡಿಇಎಸ್‌ನ ಕಿರಿಯ ಸಂಖ್ಯಾಶಾಸ್ತ್ರೀಯ ಅಧಿಕಾರಿ ಸಿಶೀರ್ ಚೌಧರಿ, "ಸಮೀಕ್ಷೆಯನ್ನು ಗಮನಿಸಿದಾಗ ಸಾವಿನ ಸಂಖ್ಯೆ ತೀವ್ರ ಏರಿಕೆ ಕೂಡ ಆಗಿರಬಹುದು. ಈ ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಎಲ್ಲಾ ಸಾವುಗಳು ನೋಂದಣಿಯಾಗಿಲ್ಲ. ಆದಾಗ್ಯೂ, ಕೆಲವು ಸಾವು ಶಂಕಿತ ಕೋವಿಡ್ -19 ಸಾವುಗಳಿಂದಾಗಿರಬಹುದು" ಎಂದು ಅಭಿಪ್ರಾಯಿಸಿದ್ದಾರೆ.

English summary
Jharkhand door-to-door survey: April-May deaths up 43% from 2 years ago. To know more Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X