ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೋಪ್‌ವೇ ಅಪಘಾತ: ಏಪ್ರಿಲ್ 26 ರಂದು ಜಾರ್ಖಂಡ್ ಹೈಕೋರ್ಟ್‌ನಲ್ಲಿ ವಿಚಾರಣೆ

|
Google Oneindia Kannada News

ರಾಂಚಿ ಏಪ್ರಿಲ್ 13: ಜಾರ್ಖಂಡ್‌ನ ಪವಿತ್ರ ಬಾಬಾ ನಗರ ದಿಯೋಘರ್‌ನಲ್ಲಿ ರೋಪ್‌ವೇ ಅಪಘಾತದಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯ ಪೂರ್ಣಗೊಂಡಿದೆ. ಈ ರಕ್ಷಣಾ ಕಾರ್ಯಾಚರಣೆ 40 ಗಂಟೆಗಳಿಗೂ ಹೆಚ್ಚು ಸಮಯ ತೆಗೆದುಕೊಂಡಿದ್ದು ಈ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ ಜೊತೆಗೆ ಅನೇಕ ಜನರು ಗಾಯಗೊಂಡಿದ್ದಾರೆ.

ರೋಪ್‌ವೇಯ ಕೇಬಲ್ ಕಾರುಗಳು ಗಾಳಿಯಲ್ಲಿ ಡಿಕ್ಕಿ ಹೊಡೆದು ತ್ರಿಕುಟ್ ಪರ್ವತದಲ್ಲಿ ಭಾನುವಾರ ಈ ಅಪಘಾತ ಸಂಭವಿಸಿತು. ಆದರೆ ದುರಾಡಳಿತದಿಂದ ರಕ್ಷಣಾ ಕಾರ್ಯ ತಡವಾಗಿ ಆರಂಭ ಮಾಡಲಾಯಿತು. ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ಗಳಿಗೆ ಈ ಕಾರ್ಯಾಚರಣೆಯನ್ನು ಕೈಗೊಳ್ಳಲು ಸಾಕಷ್ಟು ತೊಂದರೆ ಉಂಟಾಯಿತು. ಆರಂಭದಲ್ಲಿ ಅಧಿಕ ಗಾಳಿಯಿಂದಾಗಿ ಹೆಲಿಕಾಪ್ಟರ್ ಕಾರ್ಯಚರಣೆಯನ್ನು ನಿಲ್ಲಿಸಲಾಯಿತು. ಆದರೆ ಇನ್ನೂ ಎರಡು ದಿನಗಳ ಕಾಲ ಗಾಳಿಯಲ್ಲಿ ನೇತಾಡುತ್ತಿದ್ದ ಪ್ರವಾಸಿಗರನ್ನು ಇಳಿಸುವಲ್ಲಿ ರಕ್ಷಣಾ ಕಾರ್ಯಕರ್ತರು ಯಶಸ್ವಿಯಾಗಿದ್ದಾರೆ. 45 ಪ್ರವಾಸಿಗರನ್ನು ರಕ್ಷಿಸಲಾಗಿದ್ದು, ಇವರಲ್ಲಿ ಕೆಲವರು ಈ ಆಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬುದು ಸಮಾಧಾನದ ವಿಷಯವಾಗಿದೆ. ಸದ್ಯ ಈ ಅವಘಡಕ್ಕೆ ಯಾರು ಹೊಣೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಜಾರ್ಖಂಡ್‌ನ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ರಾಹುಲ್ ಸಿನ್ಹಾ ಅವರ ಪ್ರಕಾರ, ಭಾನುವಾರ ರೋಪ್‌ವೇಯ ಆಕ್ಸಲ್ ಜಾರಿದ ಕಾರಣ ಇಷ್ಟು ದೊಡ್ಡ ಅಪಘಾತ ಸಂಭವಿಸಿದೆ.

ತ್ರಿಕುಟ್ ಬೆಟ್ಟಗಳಲ್ಲಿ ಅಪಘಾತಕ್ಕೀಡಾದ ರೋಪ್‌ವೇ ವಾಹನಗಳು: 2 ಸಾವು-ಹಲವರಿಗೆ ಗಾಯತ್ರಿಕುಟ್ ಬೆಟ್ಟಗಳಲ್ಲಿ ಅಪಘಾತಕ್ಕೀಡಾದ ರೋಪ್‌ವೇ ವಾಹನಗಳು: 2 ಸಾವು-ಹಲವರಿಗೆ ಗಾಯ

ಅಂದಹಾಗೆ ಈ ಅಪಘಾತ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಇನ್‌ಫ್ರಾ ಲಿಮಿಟೆಡ್‌ನ ಮೇಲೆ ಆರೋಪ ಹೊರಿಸಲು ಪ್ರಯತ್ನಿಸಿದೆ. ಈ ಹಿಂದೆ ಪ್ರವಾಸೋದ್ಯಮ ಇಲಾಖೆಯು ಕಂಪನಿಯ ಪರವಾನಗಿಯು 2019 ರಲ್ಲಿಯೇ ಮುಕ್ತಾಯಗೊಂಡಿದೆ ಮತ್ತು ಕೋವಿಡ್ ಸಮಯದಲ್ಲಿ ಅದನ್ನು ನವೀಕರಿಸಲಾಗುವುದಿಲ್ಲ ಎಂದು ತಿಳಿಸಲಾಗಿತ್ತು ಎಂದು ಹೇಳಿದೆ. ಹೀಗಿರುವಾಗ ಒಬ್ಬ ಶ್ರೀಸಾಮಾನ್ಯನ ದೃಷ್ಠಿಕೋನದಲ್ಲಿ ಮೂಡುವ ಮೊದಲ ಪ್ರಶ್ನೆಯೆಂದರೆ ರಾಜ್ಯ ಸರ್ಕಾರ ಮತ್ತೆ ಸುಳ್ಳಿನ ಕಂತೆ ಕಟ್ಟಲು ಶುರು ಮಾಡಿದಿಯೇ? ಸರಕಾರಕ್ಕೆ ತಿಳಿಯದಂತೆ ಯಾವುದಾದರೂ ಖಾಸಗಿ ಕಂಪನಿ ಜನಸಾಮಾನ್ಯರ ಪ್ರಾಣಕ್ಕೆ ಅಪಾಯ ತರಲು ಸಾಧ್ಯವೇ? ಎನ್ನುವ ಪ್ರಶ್ನೆಗಳು ಕಣ್ಣೆದುರು ಬರುತ್ತವೆ.

ಕಾರ್ಯಾಚರಣೆಗೆ ಅನುಮತಿ ನೀಡಲಾಗಿದೆ ಎಂದ ದಾಮೋದರ್ ಇನ್ಫ್ರಾ

ಕಾರ್ಯಾಚರಣೆಗೆ ಅನುಮತಿ ನೀಡಲಾಗಿದೆ ಎಂದ ದಾಮೋದರ್ ಇನ್ಫ್ರಾ

ಮತ್ತೊಂದೆಡೆ, ಜಾರ್ಖಂಡ್ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (ಜೆಟಿಡಿಸಿ) ಅನುಮತಿಯಿಲ್ಲದೆ ರೋಪ್‌ವೇ ಅನ್ನು ಹೇಗೆ ನಿರ್ವಹಿಸಬಹುದು ಎಂದು ದಾಮೋದರ್ ಇನ್ಫ್ರಾ ಜಿಎಂ ಮಹೇಶ್ ಮೊಯಿತಿ ಹೇಳುತ್ತಾರೆ. ಈ ರೋಪ್‌ವೇ ಕಾರ್ಯಾಚರಣೆಯಿಂದ ಗಳಿಸಿದ ಆದಾಯವನ್ನು ಜಾರ್ಖಂಡ್ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವೂ ಪಡೆಯುತ್ತದೆ. ಅವರ ಪ್ರಕಾರ, 2019 ರಲ್ಲಿ ಪರವಾನಗಿ ಅವಧಿ ಮುಗಿದ ನಂತರವೂ ಕಂಪನಿಯು ಐದು ವರ್ಷಗಳ ಎರಡು ವಿಸ್ತರಣೆಗಳನ್ನು ಪಡೆಯುತ್ತದೆ ಎಂದು ಒಪ್ಪಂದದಲ್ಲಿ ಸ್ಪಷ್ಟವಾಗಿ ಬರೆಯಲಾಗಿದೆ ಮತ್ತು ಅದಕ್ಕಾಗಿಯೇ ಕಂಪನಿಯು ಅದನ್ನು ಇನ್ನೂ ನಿರ್ವಹಿಸುತ್ತಿದೆ.

ಖಾಸಗಿ ಕಂಪನಿಯನ್ನು ಕುರುಡಾಗಿ ನಂಬಿದ ಸರ್ಕಾರ

ಖಾಸಗಿ ಕಂಪನಿಯನ್ನು ಕುರುಡಾಗಿ ನಂಬಿದ ಸರ್ಕಾರ

ಮೇಲ್ನೋಟಕ್ಕೆ ಜಾರ್ಖಂಡ್ ಸರ್ಕಾರವು ಈ ಅಪಘಾತದ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ. ವಾಸ್ತವತೆಯನ್ನು ತಿಳಿದು ರಾಜ್ಯದ ಪ್ರವಾಸೋದ್ಯಮ ಇಲಾಖೆ ಈ ರೋಪ್‌ವೇ ಕಾರ್ಯಾಚರಣೆಯ ಬಗ್ಗೆ ತಲೆಕೆಡಿಸಿಕೊಳ್ಳದೆ ಖಾಸಗಿ ಕಂಪನಿಯನ್ನು ಕುರುಡಾಗಿ ನಂಬಿದಂತೆ ತೋರುತ್ತದೆ. ವಾಸ್ತವಾಂಶಗಳ ಪರಿಶೀಲನೆಯಿಂದ ಈ ರೋಪ್‌ವೇ ಕಾರ್ಯಾಚರಣೆಯು ಅದಕ್ಕೆ ಸಂಬಂಧಿಸಿದ ಎಲ್ಲಾ ಅಪಾಯಗಳನ್ನು ನಿರ್ಲಕ್ಷಿಸಿ ಮಾಡಲಾಗಿದೆ ಎಂದು ತೋರುತ್ತದೆ. ಈ ರೋಪ್‌ವೇಯ ಕಾರ್ಯಾಚರಣೆಯ ನಿಯಮಗಳು ಅರ್ಧ ವಾರ್ಷಿಕ ಮತ್ತು ವಾರ್ಷಿಕ ನಿರ್ವಹಣೆಯನ್ನು ಒದಗಿಸುತ್ತದೆ. ಪ್ರತಿ ಮೂರು ತಿಂಗಳಿಗೊಮ್ಮೆ ಇದರ ಸುರಕ್ಷತೆ ಬಗ್ಗೆ ತನಿಖೆ ನಡೆಯಲಿದೆ. ಆದರೆ, ಇವೆಲ್ಲವನ್ನೂ ಸಂಪೂರ್ಣವಾಗಿ ನಿರ್ಲಕ್ಷಿಸಿದ್ದರಿಂದ ದೊಡ್ಡ ಅಪಘಾತ ಸಂಭವಿಸಿದೆ.

ಎರಡು ರಾತ್ರಿ ಕತ್ತಲಲ್ಲಿ ಕಳೆದ ಪ್ರವಾಸಿಕರು

ಎರಡು ರಾತ್ರಿ ಕತ್ತಲಲ್ಲಿ ಕಳೆದ ಪ್ರವಾಸಿಕರು

ಅಚ್ಚರಿ ಎಂದರೆ ಎರಡು ವರ್ಷಗಳಿಂದ ತ್ರಿಕುಟ್ ಪ್ರದೇಶದಲ್ಲಿ ವಿದ್ಯುತ್ ಇಲ್ಲ ಮತ್ತು ಜನರೇಟರ್ ಆಧಾರದ ಮೇಲೆ ರೋಪ್ ವೇ ನಡೆಸಲಾಗುತ್ತಿದೆ. ಮೂರು ತಿಂಗಳ ರಕ್ಷಣಾ ಕಸರತ್ತು ನಿಯಮಿತವಾಗಿ ಮಾಡಿದ್ದರೆ, ಅಪಘಾತದ ನಂತರ ಪ್ರಯೋಜನವಾಗುತ್ತಿತ್ತು. ದಟ್ಟ ಕತ್ತಲೆಯಿಂದಾಗಿ ರಾತ್ರಿ ವೇಳೆ ಕಾರ್ಯಾಚರಣೆ ನಿಲ್ಲಿಸಿ ಹತ್ತಾರು ಮಕ್ಕಳು, ವಯೋವೃದ್ಧರು, ಯುವಕರು ಜೀವನ್ಮರಣಕ್ಕಾಗಿ ಎರಡು ರಾತ್ರಿಗಳನ್ನು ಆಕಾಶದಲ್ಲಿ ಕಳೆಯಬೇಕಾಯಿತು. ಮಾಹಿತಿ ಪ್ರಕಾರ, ಅಪಘಾತದ ದಿನ ಸೂರ್ಯಾಸ್ತದ ನಂತರ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ತಲುಪಿದಾಗ, ಅವರ ಆಡಳಿತ ಸಿಬ್ಬಂದಿ ಕತ್ತಲೆಯಿಂದ ಅಸಹಾಯಕರಾಗಿದ್ದರು. ಈ ರೋಪ್‌ವೇ ಸೇವೆಯನ್ನು 2007 ರಲ್ಲಿ ಪ್ರಾರಂಭಿಸಲಾಯಿತು. ಮೊದಲ ಎರಡು ವರ್ಷಗಳ ಕಾಲ ಇದನ್ನು JTDC ನಡೆಸಿತು ಮತ್ತು 2009 ರಿಂದ ಇದು ದಾಮೋದರ್ ಇನ್ಫ್ರಾ ಜೊತೆಯಲ್ಲಿದೆ.

ಕಾರ್ಯಚರಣೆ ವೇಳೆ ಸ್ಥಳದಲ್ಲಿದ್ದ ಬಿಜೆಪಿ ಸಂಸದ ನಿಶಿಕಾಂತ್ ದುಬೆ

ಕಾರ್ಯಚರಣೆ ವೇಳೆ ಸ್ಥಳದಲ್ಲಿದ್ದ ಬಿಜೆಪಿ ಸಂಸದ ನಿಶಿಕಾಂತ್ ದುಬೆ

ಮತ್ತೊಂದೆಡೆ, ಜಾರ್ಖಂಡ್ ಪ್ರವಾಸೋದ್ಯಮ ಸಚಿವ ಹಫೀಜುಲ್ ಹಸನ್ ಕೂಡ ನಿರ್ವಹಣೆ ಕೊರತೆ ಅಪಘಾತಕ್ಕೆ ಕಾರಣ ಎಂದು ಒಪ್ಪಿಕೊಂಡಿದ್ದಾರೆ. ಹಲವು ದಿನಗಳಿಂದ ಶಿಥಿಲಾವಸ್ಥೆಯಲ್ಲಿ ಕಾರ್ಯಾಚರಣೆ ನಡೆಸುತ್ತಿರುವುದು ತಿಳಿದು ಬಂದಿದೆ ಎಂದು ಅವರು ಹೇಳಿದ್ದಾರೆ. ಅವರ ಪ್ರಕಾರ, ಏಜೆನ್ಸಿ ಏಕೆ ನಿರ್ವಹಣೆ ಮಾಡಲಿಲ್ಲ ಎಂಬುದು ಪ್ರಶ್ನೆ. ತಂತಿಯಲ್ಲಿನ ಟೆನ್ಷನ್ ಸಾಕಾಗುವುದಿಲ್ಲ ಎಂದು ಅನೇಕ ತಜ್ಞರು ಹೇಳಿದ್ದಾರೆ ಎಂದು ಅವರು ಹೇಳಿದರು. ಆದರೆ ಜಿಲ್ಲಾಧಿಕಾರಿ ದಾಮೋದರ್ ಇನ್ಫ್ರಾ ಅದನ್ನು ನಿರ್ವಹಿಸಲು ಪರವಾನಗಿಯನ್ನು ಹೊಂದಿದೆ ಎಂದು ಹೇಳಿದ್ದಾರೆ.


ಇನ್ನೊಂದೆಡೆ ಎರಡು ವರ್ಷಗಳಿಂದ ನಿರ್ವಹಣಾ ಕಾಮಗಾರಿ ನಡೆಯದ ಕಾರಣ ಅಪಘಾತಕ್ಕೆ ರಾಜ್ಯ ಸರ್ಕಾರವೇ ಕಾರಣ ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸೂಚನೆಯ ಮೇರೆಗೆ ನೆರೆಯ ದಿಯೋಘರ್‌ನ ಗೊಡ್ಡಾದ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಪರಿಹಾರ ಕಾರ್ಯಾಚರಣೆಯ ಸಂದರ್ಭದಲ್ಲಿ ಅಪಘಾತ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು. ಅಪಘಾತದ ನಂತರ ರಾಜ್ಯದ ಉನ್ನತ ಅಧಿಕಾರಿಗಳಿಗೂ ಈ ಬಗ್ಗೆ ತಿಳಿದಿರಲಿಲ್ಲ ಎಂದು ಅವರು ಹೇಳಿದ್ದಾರೆ. ಜೊತೆಗೆ ಅವರು ‘ಷರತ್ತುಗಳನ್ನು ಪೂರೈಸದೆ, ಎಸ್‌ಒಪಿಗಳನ್ನು ಅನುಸರಿಸದೆ ಮತ್ತು ಸರ್ಕಾರದ ಅನುಮತಿಯಿಲ್ಲದೆ ದಾಮೋದರ್ ಇನ್ಫ್ರಾ ತನ್ನ ಆಡಳಿತದ ಮೂಗಿನ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, ಅದು ಯಾರ ತಪ್ಪು?' ಎಂದು ಅವರು ಆರೋಪಿಸಿದ್ದಾರೆ.


ಈ ಬಗ್ಗೆ ಏಪ್ರಿಲ್ 26 ರಂದು ಜಾರ್ಖಂಡ್ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ಆದಾಗ್ಯೂ, ಜಾರ್ಖಂಡ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರವಿ ರಂಜನ್ ಮತ್ತು ನ್ಯಾಯಮೂರ್ತಿ ಸುಜಿತ್ ನಾರಾಯಣ್ ಅವರ ವಿಭಾಗೀಯ ಪೀಠ, ಘಟನೆಯನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿ ತನಿಖೆಗೆ ಆದೇಶಿಸಿದೆ. ನ್ಯಾಯಾಲಯವು ಏಪ್ರಿಲ್ 26 ರಂದು ವಿಚಾರಣೆ ನಡೆಸಲಿದೆ ಎಂದು ರಾಜ್ಯದ ಮುಖ್ಯಮಂತ್ರಿ ಹೇಮಂತ್ ಸೊರೆನ್ ಹೇಳಿದ್ದಾರೆ.

Recommended Video

ಮೇಕ್ ಇನ್ ಇಂಡಿಯಾ ! ಮೋದಿ ಕನಸಿಗೆ ಸಾಥ್ ಕೊಟ್ಟ HAL! | Oneindia Kannada

English summary
Deoghar Cable Car Accident: Jharkhand High Court Takes suo Motu Cognizance, Orders Inquiry. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X