ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

ಜಾರ್ಖಂಡ್ ಚುನಾವಣೆ ಮೊದಲ ಹಂತ ಮುಕ್ತಾಯ: 62.87% ಮತದಾನ

|
Google Oneindia Kannada News

ರಾಂಚಿ, ನವೆಂಬರ್ 30: ಐದು ವರ್ಷಗಳ ಹಿಂದೆ ಮೊದಲ ಬಾರಿಗೆ ಜಾರ್ಖಂಡ್ ನಲ್ಲಿ ಆಡಳಿತ ಹಿಡಿದಿದ್ದ ಬಿಜೆಪಿಗೆ ಮತ್ತೆ ಅಗ್ನಿಪರೀಕ್ಷೆ ಎದುರಾಗಿದೆ.

ಹಾಗೆಯೇ ಲೋಕಸಭೆ ಗೆಲುವಿನ ಹುಮ್ಮಸ್ಸಿನಲ್ಲಿ ಮೈಮರೆತರು ಮಹಾರಾಷ್ಟ್ರ ಕಳೆದುಕೊಂಡು, ಹರ್ಯಾಣವನ್ನು ಸ್ವಲ್ಪದರಲ್ಲಿಯೇ ಉಳಿಸಿಕೊಂಡಿದ್ದ ಬಿಜೆಪಿ ಹಣಿಯಲು ಪ್ರತಿಪಕ್ಷಗಳಿಗೆ ಇದೊಂದು ಮತ್ತೊಂದು ಅವಕಾಶವಾಗಿದೆ.

ನಕ್ಸಲ್ ಪೀಡಿತ ರಾಜ್ಯವಾಗಿರುವ ಜಾರ್ಖಂಡ್ ನಲ್ಲಿ ಕೇವಲ 81 ವಿಧಾನಸಭೆ ಸೀಟುಗಳಿಗೆ ಹಂತದ ಚುನಾವಣೆ ನಡೆಯಲಿದೆ. ಶನಿವಾರ ಮೊದಲ ಹಂತದ ಮತದಾನ ಆರಂಭವಾಗಿದೆ.

election
ಮೊದಲ ಹಂತದಲ್ಲಿ 13 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ನಕ್ಸಲ್ ಪೀಡಿತವಾಗಿರುವುದರಿಂದ ಅತೀವ ಎಚ್ಚರಿಕೆ ವಹಿಸಲಾಗಿದೆ.

ಮೊದಲ ಹಂತದ 13 ಕ್ಷೇತ್ರಗಳಿಗೆ ಸಂಬಂಧಿಸಿ 4,892 ಮತದಾನ ಕೇಂದ್ರಗಳಲ್ಲಿ ಚುನಾವಣೆ ನಡೆಯಲಿದ್ದು, 1202 ಸೂಕ್ಷ್ಮ ಹಾಗೂ 1790ಅತೀ ಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಲಾಗಿದೆ. ನ.30ರಂದು ಜಾರ್ಖಂಡ್ ಮೊದಲ ಹಂತದ ಮತದಾನದ ಮುನ್ನೋಟ

ಇದೇ ಕಾರಣದಿಂದ ಚುನಾವಣೆ ಮೇಲೆ ಅಲ್ಪ ಮಟ್ಟಿನ ಭಯ ಆರಂಭವಾಗಿದೆ. ಒಟ್ಟಾರೆ ಜಾರ್ಖಂಡ್ ನ 19 ಜಿಲ್ಲೆಯ 69 ವಿಧಾನಸಭೆ ಕ್ಷೇತ್ರಗಳು ನಕ್ಸಲ್ ಸಮಸ್ಯೆಯಿಂದ ಬಳಲುತ್ತಿದೆ.

ಇದೇ ಕಾರಣದಿಂದ ರಾಜ್ಯದಲ್ಲಿ 5 ಹಂತಗಳಲ್ಲಿ ಚುನಾವಣೆ ನಡೆಸಲಾಗುತ್ತಿದೆ. ಚುನಾವಣಾ ಆಯೋಗವು ವಿಶೇಷ ಭದ್ರತಾ ವ್ಯವಸ್ಥೆ ಮಾಡಿದೆ. ಡಿಸೆಂಬರ್ 23ರಂದು ಕೊನೆ ಹಂತದ ಮತದಾನ ನಿಗದಿಯಾಗಿದೆ.

ಬುಡಕಟ್ಟು ಹೋರಾಟ: ಜಾರ್ಖಂಡನ ಬಹುತೇಕ ವಿಧಾನಸಭೆ ಕ್ಷೇತ್ರಗಳಲ್ಲಿ ಬುಡಕಟ್ಟು ಜನಾಂಗದ ಪ್ರಭಾವ ಹೆಚ್ಚಿದೆ. ಅದರಲ್ಲೂ ಬುಡಕಟ್ಟು ಜನಾಂಗದ ವಿರುದ್ಧ ಆಡಳಿತ ಪಕ್ಷ ತೆಗೆದುಕೊಂಡಿರುವ ಕೆಲ ಕ್ರಮಗಳು ಚುನಾವಣಾ ವಿಷಯಗಳಾಗಿ ಪರಿಣಮಿಸಿವೆ.

ಇನ್ನೊಂದೆಡೆ ಇದೇ ಜನಾಂಗದ ಪರವಾಗಿ ಸರ್ಕಾರ ಕೆಲ ಕಲ್ಯಾಣ ಯೋಜನೆ ಕೂಡ ಜಾರಿ ತಂದಿದೆ. ಹೀಗಾಗಿ ಈ ಬಾರಿಯ ಫಲಿತಾಂಶ, ಚುನಾವಣೆ ಮೇಲೆ ತೀವ್ರ ಕುತೂಹಲ ಆರಂಭವಾಗಿದೆ. ಮೇಲ್ನೋಟಕ್ಕೆ ಬಿಜೆಪಿ ಹಾಗೂ ಜೆಎಂಎಂ ನಡುವೆ ನೇರ ಹೋರಾಟವಿದೆ.

Newest FirstOldest First
7:25 PM, 30 Nov

ಆಡಳಿತಾರೂಢ ಬಿಜೆಪಿ ಗೆ ಈ ವಿಧಾನಸಭೆ ಚುನಾವಣೆ ಮುಖ್ಯವಾಗಿದ್ದು, ಬಿಜೆಪಿಯು ಕಾಂಗ್ರೆಸ್‌ ಮತ್ತು ಅದರ ಮಿತ್ರ ಪಕ್ಷ ಎಂಎಂಎಂ ಮತ್ತು ಆರ್‌ಜೆಡಿಯನ್ನು ಎದುರಿಸುತ್ತಿದೆ.
7:25 PM, 30 Nov

ಮೊದಲ ಹಂತದಲ್ಲಿ 13 ಕ್ಷೇತ್ರಗಳಿಗೆ ಮಾತ್ರವೇ ಇಂದು ಮತದಾನ ನಡೆಯಿತು. ಒಂದು ಕಡೆ ನಕ್ಸಲರು ಸೇತುವೆಯೋಂದನ್ನು ಸ್ಪೋಟಿಸಿದರು. ಇದನ್ನು ಹೊರತುಪಡಿಸಿ ಬೇರೆ ಹಿಂಸಾಚಾರ ವರದಿ ಆಗಿಲ್ಲ.
7:24 PM, 30 Nov

ಜಾರ್ಖಂಡ್ ರಾಜ್ಯ ವಿಧಾನಸಭೆ ಚುನಾವಣೆ ಮತದಾನದ ಮೊದಲ ಹಂತ ಇಂದು ಮುಕ್ತಾಯವಾಗಿದ್ದು 62.87% ಮತದಾನವಾಗಿದೆ.
3:34 PM, 30 Nov

ನಕ್ಸಲರ ಸಂಖ್ಯೆ ಹೆಚ್ಚಿರುವ ಜಾರ್ಖಂಡ್‌ನ ಕನ್ಹಛಟ್ಟಿ ಪ್ರದೇಶದಲ್ಲಿ ಮತದಾನಕ್ಕೆ ಸರದಿಯಲ್ಲಿ ನಿಂತಿರುವ ಮತದಾರರು
2:47 PM, 30 Nov

ಮಧ್ಯಾಹ್ನ 1 ಗಂಟೆವರೆಗೆ ಶೇ.48.83ರಷ್ಟು ಮತದಾನ ನಡೆದಿದೆ.
1:01 PM, 30 Nov

ಬೆಳಗ್ಗೆ 11 ಗಂಟೆವರೆಗೆ ಶೇ.27ರಷ್ಟು ಮತದಾನವಾಗಿದೆ. ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿ ಎಂದು ಜೆಪಿ ನಡ್ಡಾ ಮತದಾರರಲ್ಲಿ ಮನವಿ ಮಾಡಿದ್ದಾರೆ.
11:42 AM, 30 Nov

ಇಲ್ಲಿಯವರೆಗೆ ಶೇ.11.2ರಷ್ಟು ಮತದಾನವಾಗಿದೆ.ಮಣಿಕಾದಲ್ಲಿ ಅತಿ ಹೆಚ್ಚು ಅಂದರೆ 13.63ರಷ್ಟು ಮತದಾನವಾಗಿದೆ. ಪಂಕಿಯಲ್ಲಿ ಅತಿ ಕಡಿಮೆ 9.20ಯಷ್ಟು ಮತದಾನ ನಡೆದಿದೆ.
Advertisement
9:22 AM, 30 Nov

ಸೇತುವೆ ಸ್ಪೋಟಿಸಿದ ನಕ್ಸಲರು

ಗುಮ್ಲಾ ಜಿಲ್ಲೆಯ ಬಿಷ್ಣುಪುರದಲ್ಲಿ ನಕ್ಸಲರು ಸೇತುವೆಯೊಂದನ್ನು ಸ್ಫೋಟಿಸಿದ್ದಾರೆ. ಮತದಾನಕ್ಕೆ ಅಡ್ಡಿ ಮಾಡಲು ಈ ಕೃತ್ಯ ಎಸಗಿದ್ದು, ಆದರೆ ಮತದಾನಕ್ಕೆ ಯಾವುದೇ ಸಮಸ್ಯೆಯಾಗಿಲ್ಲ ಎಂದು ಸ್ಥಳೀಯ ಆಡಳಿತ ತಿಳಿಸಿದೆ.
9:07 AM, 30 Nov

ಜಾರ್ಖಂಡ್ ವಿಕಾಸ್ ಮೋರ್ಚಾ(ಜೆವಿಎಂ) ಹಾಗೂ ಎಜೆಎಸ್ ಯು ಸ್ವತಂತ್ರವಾಗಿ ಕಣಕ್ಕಿಳಿದಿವೆ.
8:43 AM, 30 Nov

ಅಭ್ಯರ್ಥಿಗಳು: 189, ಪುರುಷ: 174, ಮಹಿಳೆ :15 ಮತದಾರರು: 37,83,055,ಪುರುಷ: 19,81,684, ಮಹಿಳೆ :18,01,356, ತೃತೀಯ ಲಿಂಗಿ:5, ಎನ್ನಾರೈ: 5, ಸೇವಾ ಮತದಾರರುಳ: 9973
7:25 AM, 30 Nov

ಛತ್ರಾದ 472ಬೂತಿನಲ್ಲಿ ಮತದಾನ ಆರಂಭವಾಗಿದೆ. ರಾಜ್ಯದ ಅಭಿವೃದ್ಧಿಯ ಹಿತದೃಷ್ಟಿಯಿಂದ ಬಹುಸಂಖ್ಯೆಯಲ್ಲಿ ಬಂದು ಮತದಾನ ಮಾಡಿ ಎಂದು ಜಾರ್ಖಂಡ್ ಮುಖ್ಯಮಂತ್ರಿ ರಘುವರ್ ದಾಸ್ ಮನವಿ ಮಾಡಿದರು.
6:59 AM, 30 Nov

ಜಾರ್ಖಂಡ್‌ನಲ್ಲಿ ಮೊದಲ ಹಂತದ ಮತದಾನ ಆರಂಭ
Advertisement
6:27 AM, 30 Nov

81 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 31, ಆರ್ ಜೆಡಿ 7 ಹಾಗೂ ಜೆಎಂಎಂ 43 ಸ್ಥಾನಗಳಲ್ಲಿ ಸ್ಪರ್ಧೆಗಿಳಿದಿವೆ. ಜಾರ್ಖಂಡ್ ನಲ್ಲಿ ಕಳೆದ ವಿಧಾನಸಭೆ ಚುನಾವನೆ 2014 ರಲ್ಲಿ ನಡೆದಿತ್ತು. ಒಟ್ಟು 81 ಶಾಸಕ ಬಲದ ಜಾರ್ಖಂಡ್ ನಲ್ಲಿ ಪ್ರಸ್ತುತ ಬಿಜೆಪಿ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದೆ.
6:26 AM, 30 Nov

13ರಲ್ಲಿ ಕಾಂಗ್ರೆಸ್ 6, ಜೆಎಂಎಂ 4, ಅರ್ ಜೆಡಿ 3 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೆ, ಬಿಜೆಪಿ 12 ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದು, ಹುಸೈನಾಬಾದ್ ನಲ್ಲಿ ವಿನೋದ್ ಕುಮಾರ್ ಸಿಂಗ್ ಗೆ ಬೆಂಬಲ ನೀಡಿದೆ.
6:26 AM, 30 Nov

ಛಾತ್ರಾ, ಗುಮ್ಲಾ, ಬಿಷುಣ್ ಪುರ್, ಲೊಹರ್ ದಾಗ, ಮಾನಿಕಾ, ಲತೇಹಾರ್, ಪಾನ್ಕಿ, ದಾಲ್ಟೊನ್ ಗಂಜ್, ಬಿಶ್ರಾಮ್ ಪುರ್, ಛಾತರೊರ್, ಹುಸೈನಾಬಾದ್, ಗರ್ಹ್ವಾ ಹಾಗೂ ಭವಾನಾಥ್ ಪುರ್.
6:26 AM, 30 Nov

ನಕ್ಸಲ್ ಪೀಡಿತ ರಾಜ್ಯವಾಗಿರುವ ಜಾರ್ಖಂಡ್ ನಲ್ಲಿ ಕೇವಲ 81 ವಿಧಾನಸಭೆ ಸೀಟುಗಳಿಗೆ ಹಂತದ ಚುನಾವಣೆ ನಡೆಯಲಿದೆ. ಶನಿವಾರ ಮೊದಲ ಹಂತದ ಮತದಾನ ಆರಂಭವಾಗಿದೆ.
6:25 AM, 30 Nov

ಜಾರ್ಖಂಡ್‌ನಲ್ಲಿ ಮೊದಲ ಹಂತದ ಮತದಾನ ಇಂದು ನಡೆಯಲಿದೆ. ಮೊದಲ ಹಂತದ 13 ಕ್ಷೇತ್ರಗಳಿಗೆ ಸಂಬಂಧಿಸಿ 4,892 ಮತದಾನ ಕೇಂದ್ರಗಳಲ್ಲಿ ಚುನಾವಣೆ ನಡೆಯಲಿದ್ದು, 1202 ಸೂಕ್ಷ್ಮ ಹಾಗೂ 1790ಅತೀ ಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಲಾಗಿದೆ.

English summary
1st Phase Of Jharkhand Assembly Elections of 13 constituencies in Jharkhand go to polls Today, Campaigning for the first phase of Jharkhand assembly elections ended on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X