ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓರಗಿತ್ತಿಯರ ಸ್ಪರ್ಧೆಯಲ್ಲಿ ಗೆದ್ದವರು ಯಾರು?: ಸೇಡು ತೀರಿಸಿಕೊಂಡ ತಮ್ಮನ ಹೆಂಡತಿ

|
Google Oneindia Kannada News

ರಾಂಚಿ, ಡಿಸೆಂಬರ್ 24: ಕುಟುಂಬದ ಸದಸ್ಯರ ನಡುವಿನ ಚುನಾವಣಾ ಜಿದ್ದಾಜಿದ್ದಿಯ ಹಲವು ಉದಾಹರಣೆಗಳನ್ನು ನೋಡಿದ್ದೀರಿ. ಅಪ್ಪ-ಮಕ್ಕಳು, ಗಂಡ-ಹೆಂಡತಿಯೇ ಎದುರಾಳಿಗಳಾಗಿ ಸ್ಪರ್ಧಿಸುವ ವಿಶಿಷ್ಟ ವ್ಯವಸ್ಥೆ ನಮ್ಮದು. ಜಾರ್ಖಂಡ್‌ನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಝಾರಿಯಾ ಕ್ಷೇತ್ರದ ಪೈಪೋಟಿ ಸಾಕಷ್ಟು ಕುತೂಹಲ ಮೂಡಿಸಿತ್ತು. ಇಲ್ಲಿ ನಡೆದಿದ್ದು ಓರಗಿತ್ತಿಯರ ಪೈಪೋಟಿ. ಈ ಜಿದ್ದಾಜಿದ್ದಿಯ ಹಿಂದೆ ಕ್ರೌರ್ಯದ ಮುಖವೂ ಇದೆ.

ಧನಬಾದ್ ಜಿಲ್ಲೆಯ ಧನಬಾದ್ ಸದರ್ ಉಪ ವಿಭಾಗ ಲೋಕಸಭೆ ಕ್ಷೇತ್ರದಲ್ಲಿ ಬರುವ ಝಾರಿಯಾ ವಿಧಾನಸಭೆ ಕ್ಷೇತ್ರದಲ್ಲಿ ಓರಗಿತ್ತಿಯರ ನಡುವೆ ಸ್ಪರ್ಧೆ ನಡೆದಿತ್ತು. ವಿಶೇಷವೆಂದರೆ 2014ರ ವಿಧಾನಸಭೆ ಚುನಾವಣೆಯಲ್ಲಿ ಸಹೋದರರ ನಡುವೆ ಸ್ಪರ್ಧೆ ನಡೆದಿತ್ತು.

ಒಂದೇ ವರ್ಷದಲ್ಲಿ ಐದನೇ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡ ಬಿಜೆಪಿಒಂದೇ ವರ್ಷದಲ್ಲಿ ಐದನೇ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡ ಬಿಜೆಪಿ

ಆಗ ಗೆದ್ದಿದ್ದ ಅಭ್ಯರ್ಥಿಯ ಪತ್ನಿ ಮತ್ತು ಸೋತಿದ್ದ ಅಭ್ಯರ್ಥಿಯರ ಪತ್ನಿ 2019ರ ಚುನಾವಣೆಯಲ್ಲಿ ಎದುರಾಳಿಗಳಾಗಿದ್ದರು. ಈ ಬಾರಿ ಗೆಲುವಿನ ನಗೆ ಬೀರಿದ್ದು, ಕಳೆದ ಬಾರಿ ಸೋತಿದ್ದ ಅಭ್ಯರ್ಥಿಯ ಪತ್ನಿ. ಕಳೆದ ಚುನಾವಣೆಯಲ್ಲಿ ಸಹೋದರರ ನಡುವೆ ಪೈಪೋಟಿಯಷ್ಟೇ ಮುಖ್ಯವಾಗಿ ಬಿಂಬಿತವಾಗಿದ್ದರೆ, ಈ ಬಾರಿಯ ಚುನಾವಣೆಯಲ್ಲಿ ಸೇಡು, ಆಕ್ರೋಶ, ಜಿದ್ದು ಮುನ್ನಲೆಯಲ್ಲಿತ್ತು.

ಗೆದ್ದು ಬೀಗಿದ್ದ ಸಂಜೀವ್ ಸಿಂಗ್

ಗೆದ್ದು ಬೀಗಿದ್ದ ಸಂಜೀವ್ ಸಿಂಗ್

2014ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಪಡೆದಿದ್ದ ಸಂಜೀವ್ ಸಿಂಗ್ ಮತ್ತು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಅವರ ಸಹೋದರ (ಚಿಕ್ಕಪ್ಪನ ಮಗ) ನೀರಜ್ ಸಿಂಗ್ ನಡುವೆ ಚುನಾವಣಾ ಕದನ ನಡೆದಿತ್ತು. 30,000 ಮತಗಳಿಂದ ಗೆದ್ದಿದ್ದ ಸಂಜೀವ್ ಸಿಂಗ್ ಗೆಲುವಿನ ನಗೆ ಬೀರಿದ್ದರು.

ನೀರಜ್ ದೇಹದಲ್ಲಿ 67 ಗುಂಡುಗಳು

ನೀರಜ್ ದೇಹದಲ್ಲಿ 67 ಗುಂಡುಗಳು

ಆದರೆ, 2017ರ ಮಾರ್ಚ್‌ 21ರ ರಾತ್ರಿ 7.30ರ ವೇಳೆಗೆ ಮೋಟಾರ್‌ಸೈಕಲ್‌ನಲ್ಲಿ ಬಂದ ದುಷ್ಕರ್ಮಿಗಳು ಧನಬಾದ್‌ನ ಮಾಜಿ ಮೇಯರ್ ಕೂಡ ಆಗಿದ್ದ ನೀರಜ್ ಸಿಂಗ್ (37) ಅವರ ಕಾರನ್ನು ಅಡ್ಡಗಟ್ಟಿ ಹತ್ಯೆ ಮಾಡಿದ್ದರು. ಎಕೆ 47 ಮತ್ತು ಪಿಸ್ತೂಲುಗಳಿಂದ ಸತತ ಗುಂಡಿನ ದಾಳಿ ನಡೆಸಲಾಗಿತ್ತು. ನೀರಜ್ ಸಿಂಗ್ ಜತೆಗೆ ಇದ್ದ ಇತರೆ ಮೂವರು ಮುಖಂಡರು ಕೂಡ ಮೃತಪಟ್ಟಿದ್ದರು. ನೀರಜ್ ಸಿಂಗ್ ದೇಹದಲ್ಲಿ ಬರೋಬ್ಬರಿ 67 ಗುಂಡುಗಳು ಪತ್ತೆಯಾಗಿದ್ದವು. ಇದರ ಹಿಂದೆ ಶಾಸಕ ಸಂಜೀವ್ ಸಿಂಗ್ ಕೈವಾಡ ಇದೆ ಎಂಬ ಆರೋಪ ಕೇಳಿಬಂದಿತ್ತು. ತೀವ್ರ ಒತ್ತಡದ ಬಳಿಕ ಸಂಜೀವ್ ಸಿಂಗ್ ಶರಣಾಗಿದ್ದರು. ಪ್ರಸ್ತುತ ಅವರು ಜೈಲಿನಲ್ಲಿದ್ದಾರೆ.

ಶೇಕಡವಾರು ಮತಗಳಿಕೆಯಲ್ಲಿ ಮಾತ್ರ ಬಿಜೆಪಿ 2014-2019ರಲ್ಲಿ ಮೇಲುಗೈಶೇಕಡವಾರು ಮತಗಳಿಕೆಯಲ್ಲಿ ಮಾತ್ರ ಬಿಜೆಪಿ 2014-2019ರಲ್ಲಿ ಮೇಲುಗೈ

ಕಣಕ್ಕಿಳಿದ ಓರಗಿತ್ತಿಯರು

ಕಣಕ್ಕಿಳಿದ ಓರಗಿತ್ತಿಯರು

ಹೀಗೆ ಇಬ್ಬರೂ ಸಹೋದರರು ಈ ಬಾರಿಯ ಚುನಾವಣೆಯ ಕಣದಲ್ಲಿ ಇರಲಿಲ್ಲ. ಈ ವೇಳೆ ಸ್ಪರ್ಧೆಗಿಳಿದಿದ್ದೇ ಓರಗಿತ್ತಿಯರು. ಸಂಜೀವ್ ಸಿಂಗ್ ಪತ್ನಿ ರಾಗಿಣಿ ಬಿಜೆಪಿ ಟಿಕೆಟ್ ಪಡೆದರೆ, ದಿ. ನೀರಜ್ ಸಿಂಗ್ ಪತ್ನಿ ಪೂರ್ಣಿಮಾ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಕೊಂಡರು. ಝಾರಿಯಾ ಕ್ಷೇತ್ರವು ಒಂದು ಕುಟುಂಬದ ಪಿತ್ರಾರ್ಜಿತ ಆಸ್ತಿಯಂತಾಗಿದೆ. ತಮ್ಮ ಎದುರಿಗೆ ಬಂದವರನ್ನು ಮುಗಿಸಿಬಿಡುವ ಜಾಯಮಾನ ಅವರದು ಎಂದು ನೀರಜ್ ಅವರ ತಮ್ಮ ಹರ್ಷ್ ಸಿಂಗ್ ಹೇಳಿದ್ದರು.

ಪೂರ್ಣಿಮಾ ಸಿಂಗ್‌ಗೆ ಜಯ

ಪೂರ್ಣಿಮಾ ಸಿಂಗ್‌ಗೆ ಜಯ

2019ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪೂರ್ಣಿಮಾ ನೀರಜ್ ಸಿಂಗ್ 79,786 ಮತಗಳನ್ನು ಪಡೆದು, ತಮ್ಮ ಎದುರಾಳಿ ರಾಗಿಣಿ ಸಂಜೀವ್ ಸಿಂಗ್ ವಿರುದ್ಧ 12,054 ಮತಗಳಿಂದ ಜಯಭೇರಿ ಭಾರಿಸಿದ್ದಾರೆ. ನೀರಜ್ ಸಿಂಗ್ ಸಾವಿನ ಅನುಕಂಪ, ಸಂಜೀವ್ ಸಿಂಗ್ ವಿರುದ್ಧದ ಆರೋಪಗಳು ಈ ಗೆಲುವಿಗೆ ಕಾರಣವಾಗಿದೆ.

ಜಾರ್ಖಂಡ್ ಫಲಿತಾಂಶ: ಬಿಜೆಪಿ ಮಿತ್ರಪಕ್ಷಗಳಿಂದ ಶೂನ್ಯ ಸಂಪಾದನೆಜಾರ್ಖಂಡ್ ಫಲಿತಾಂಶ: ಬಿಜೆಪಿ ಮಿತ್ರಪಕ್ಷಗಳಿಂದ ಶೂನ್ಯ ಸಂಪಾದನೆ

English summary
Jharkhand Assembly election results 2019: Congress candidate Purnima Niraj Singh defeated BJP's Ragini Singh in Jharia constituency. Purnima was the wife of late Niraj singh and Ragini is the wife of BJP's MLA Sanjeev Singh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X