ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾರ್ಖಂಡ್ ಚುನಾವಣೆ: ಕಾಂಗ್ರೆಸ್ ನಿಂದ 3ನೇ ಪಟ್ಟಿ ಬಿಡುಗಡೆ

|
Google Oneindia Kannada News

ರಾಂಚಿ, ನವೆಂಬರ್ 12: ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ 19 ಅಭ್ಯರ್ಥಿಗಳ 3ನೇ ಪಟ್ಟಿಯನ್ನು ಸೋಮವಾರ ಪ್ರಕಟಿಸಿದೆ. ಈ ಮೂಲಕ ಚುನಾವಣೆಗೆ ಒಟ್ಟು ಅಭ್ಯರ್ಥಿಗಳ ಸಂಖ್ಯೆಯನ್ನು 25 ಕ್ಕೆ ಏರಿಸಿದಂತಾಗಿದೆ. ಜಾರ್ಖಂಡ್ ನಲ್ಲಿ ಐದು ಹಂತಗಳಲ್ಲಿ ಮತದಾನ ನಿಗದಿಯಾಗಿದ್ದು, ಮೊದಲನೆಯ ಹಂತ ನವೆಂಬರ್ 30 ಮತ್ತು ಕೊನೆಯ ಹಂತ ಡಿಸೆಂಬರ್ 20 ರಂದು ನಡೆಯಲಿದೆ. ಡಿಸೆಂಬರ್ 23ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

ಕಾಂಗ್ರೆಸ್ ತನ್ನ ಮೂರನೆಯ ಪಟ್ಟಿಯ ಕಣಕ್ಕಿಳಿಸಿದವರಲ್ಲಿ ಅಲಮ್ ಗೀರ್ ಅಲಂರನ್ನು ಪಕುರ್ ನಿಂದ, ಇರ್ಫಾನ್ ಅನ್ಸಾರಿಯನ್ನು ಜಮ್ತಾರದಿಂದ, ಆರ್.ಸಿ.ಪ್ರಸಾದ್ ಮೆಹ್ತಾರನ್ನು ಹಜಾರಿಬಾಗ್ ನಿಂದ, ಸಂಜಯ್ ಸಿಂಗ್ ರನ್ನು ಬೊಕಾರೊನಿಂದ ಮತ್ತು ಮನ್ನನ್ ಮಲ್ಲಿಕ್ ರನ್ನು ಧನ್ಬಾದ್ ನಿಂದ ಕಣಕ್ಕಿಳಿಸಲಾಗಿದೆ.

Jharkhand Assembly Election 2019: Congress Releases Third List of 19 Candidates

ಐದು ಅಭ್ಯರ್ಥಿಗಳ ಹಾಗೂ ಒಬ್ಬ ಅಭ್ಯರ್ಥಿಯ ಎರಡು ಪಟ್ಟಿಗಳನ್ನು ಕಳೆದ ಭಾನುವಾರವಷ್ಟೇ ಪಕ್ಷವು ಬಿಡುಗಡೆ ಮಾಡಿತ್ತು. ಜಾರ್ಖಂಡ್ ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ ರಾಮೇಶ್ವರ್ ಓರಾನ್ ರನ್ನು ಲೋಹಾರ್ದಗಾದಿಂದ ಕಣಕ್ಕಿಳಿಸಿದೆ.

ಜಾರ್ಖಂಡ್ ವಿಧಾನಸಭೆಗಾಗಿ ಬಿಜೆಪಿ ರಣತಂತ್ರ, 52 ಅಭ್ಯರ್ಥಿಗಳ ಪಟ್ಟಿ ಪ್ರಕಟಜಾರ್ಖಂಡ್ ವಿಧಾನಸಭೆಗಾಗಿ ಬಿಜೆಪಿ ರಣತಂತ್ರ, 52 ಅಭ್ಯರ್ಥಿಗಳ ಪಟ್ಟಿ ಪ್ರಕಟ

ಜಾರ್ಖಂಡ್ ಮುಕ್ತಿ ಮೋರ್ಚಾ(ಜೆಎಮ್ಎಮ್), ಕಾಂಗ್ರೆಸ್ ಮತ್ತು ಲಾಲು ಪ್ರಸಾದ್ ಯಾದವ್ ರ ರಾಷ್ಟ್ರೀಯ ಜನತಾದಳ ಇತ್ತಿಚೀಗೆ ರಾಜ್ಯದಲ್ಲಿ ಚುನಾವಣಾ ಪೂರ್ವ ಮೈತ್ರಿ ಘೋಷಿಸಿಕೊಂಡಿದ್ದವು. ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದಾರೆ.

ಜಾರ್ಖಂಡ್ ವಿಧಾನಸಭೆಯಲ್ಲಿ ಒಟ್ಟು 81 ಸ್ಥಾನಗಳಿದ್ದು, ಕಾಂಗ್ರೆಸ್ 31 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಆರ್ ಜೆಡಿ ಪಕ್ಷ 7 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು, ಮೈತ್ರಿಕೂಟದ ಬಹುಪಾಲು ಸ್ಥಾನಗಳು ಜೆಎಮ್ಎಮ್ ಗೆ ಹೋಗಿದ್ದು ಒಟ್ಟು 43 ಸ್ಥಾನಗಳಲ್ಲಿ ಸ್ಪರ್ಧೆಗಿಳಿಯಲಿದೆ.

English summary
Jharkhand Assembly Election 2019: Congress Releases Third List of 19 Candidates
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X