• search
 • Live TV
ರಾಂಚಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

Illness ನಿಂದ Wellnessನೆಡೆಗೆ... ಯೋಗ ಜೀವನಧರ್ಮವಾಗಲಿ: ಮೋದಿ

|
Google Oneindia Kannada News
   International Yoga Day: ನರೇಂದ್ರ ಮೋದಿ ಯೋಗ ಬಗ್ಗೆ ಏನು ಮಾತಾಡಿದ್ದಾರೆ, ಕೇಳಿ | Oneindia Kannada

   ರಾಂಚಿ, ಜೂನ್ 21: ಯೋಗ ಕೇವಲ ವ್ಯಾಯಾಮವಲ್ಲ, ಅದು ಜೀವನ ಧರ್ಮವಾಗಲಿ. Illness ನಿಂದ Wellnessನೆಡಗೆ ಕೊಂಡೊಯ್ಯಲು ಯೋಗ ಅತ್ಯುತ್ತಮ ಸಾಧನ ಎಂದು ಪ್ರಧಾನಿ ನರೇಂದ್ರ ಮೋದಿ ಯೋಗದ ಮಹತ್ವ ಸಾರಿದರು.

   ಜಾರ್ಖಂಡ್ ನ ರಾಂಚಿಯಲ್ಲಿ ವಿಶ್ವ ಯೋಗದಿನವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, "ಯೋಗವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಹೊಣೆ ನಮ್ಮ ಮುಂದಿದೆ" ಎಂದರು.

   ಅಂತಾರಾಷ್ಟ್ರೀಯ ಯೋಗ ದಿನ LIVE: ದೇಶಾದ್ಯಂತ ಯೋಗ ಹಬ್ಬದ ಸಂಭ್ರಮ ಅಂತಾರಾಷ್ಟ್ರೀಯ ಯೋಗ ದಿನ LIVE: ದೇಶಾದ್ಯಂತ ಯೋಗ ಹಬ್ಬದ ಸಂಭ್ರಮ

   ರಾಂಚಿಯ ಪ್ರಭಾತ್ ತಾರಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಸುಮಾರು 30,000 ಕ್ಕೂ ಹೆಚ್ಚು ಜನ ಭಾಗವಹಿಸಿ, ಯೋಗಾಭ್ಯಾಸ ಮಾಡಿದರು. ಈ ಸಂದರ್ಭದಲ್ಲಿ ವಿಶ್ವದಾದ್ಯಂತ ಯೋಗ ದಿನ ಆಚರಿಸುತ್ತಿರುವ ಎಲ್ಲಾ ಯೋಗಾಸಕ್ತರಿಗೂ ನರೇಮದ್ರ ಮೊದಿ ಅವರು ಶುಭಹಾರೈಸಿ, ಧನ್ಯವಾದ ಅರ್ಪಿಸಿದರು.

   ನರೇಂದ್ರ ಮೋದಿ ಆವರ ಭಾಷಣದ ಮುಖ್ಯಾಂಶ ಇಲ್ಲಿದೆ.

   ಪ್ರಚಾರ ಮಾಡಿದ ಎಲ್ಲರಿಗೂ ಧನ್ಯವಾದ

   ಪ್ರಚಾರ ಮಾಡಿದ ಎಲ್ಲರಿಗೂ ಧನ್ಯವಾದ

   ಎಲ್ಲರಿಗೂ ಯೋಗದಿನದ ಶುಭಾಶಯಗಳು. ಯೋಗವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯಗೊಳಿಸಲು ನಮ್ಮ ಮಾಧ್ಯಮ ಮಿತ್ರರು, ಸಾಮಾಜಿಕ ಮಾಧ್ಯಮದ ಮಿತ್ರರು ವಹಿಸಿರುವ ಪಾತ್ರ ಅತ್ಯಂತ ಮಹತ್ವದ್ದು. ಅವರಿಗೆ ನನ್ನ ಕೃತಜ್ಞತೆಗಳು-ನರೇಂದ್ರ ಮೋದಿ, ಪ್ರಧಾನಿ

   Illness ನಿಂದ wellness ನೆಡೆಗೆ

   Illness ನಿಂದ wellness ನೆಡೆಗೆ

   Illness(ಅನಾರೋಗ್ಯ) ನಿಂದ wellness(ಆರೋಗ್ಯ) ನೆಡೆಗೆ ನಮ್ಮನ್ನು ಒಯ್ಯಲು ಯೋಗ ಸಾಧನ. ಯೋಗಕ್ಕೆ ಜಾತಿ, ಮತ, ಬಣ್ಣ, ಲಿಂಗ, ಬಡವ-ಬಲ್ಲಿದ ಎಂಬ ಯಾವ ಬೇಧವಿಲ್ಲ. ಅದು ಎಲ್ಲ ಸರಹದ್ದುಗಳನ್ನು ಮೀರಿದ್ದು.

   ವಿಶ್ವಸಂಸ್ಥೆಯ ಕೇಂದ್ರ ಕಚೇರಿ ಮೇಲೆ ರಾರಾಜಿಸಿದ ಯೋಗಾಸನ ಭಂಗಿ ವಿಶ್ವಸಂಸ್ಥೆಯ ಕೇಂದ್ರ ಕಚೇರಿ ಮೇಲೆ ರಾರಾಜಿಸಿದ ಯೋಗಾಸನ ಭಂಗಿ

   ಎಲ್ಲರಿಗೂ ಸಿಕ್ಕಲಿ ಯೋಗದ ಫಲ

   ಎಲ್ಲರಿಗೂ ಸಿಕ್ಕಲಿ ಯೋಗದ ಫಲ

   ಆಧುನಿಕ ಯೋಗದ ಪಯಣವನ್ನು ನಗರದಿಂದ ಹಳ್ಳಿಗೆ, ಬುಡಕಟ್ಟು ಪ್ರದೇಶಕ್ಕೆ ತೆಗೆದುಕೊಂಡು ಹೋಗಬೇಕಿದೆ. ಯೋಗವನ್ನು ಬಡವರು ಮತ್ತು ಬುಡಕಟ್ಟು ಜನರ ಬದುಕಿನ ಅವಿಭಾಜ್ಯ ಅಂಗವನ್ನಾಗಿ ಮಾಡಬೇಕಿದೆ. ಏಕೆಂದರೆ ಅನಾರೋಗ್ಯದಿಂದ ಹೆಚ್ಚು ಬಳಲುವವರು ಬಡವರು- ನರೇಂದ್ರ ಮೋದಿ

   ಮುಂದಿನ ಹಂತಕ್ಕೆ ಕೊಂಡೊಯ್ಯುವ ಹೊಣೆ

   ಮುಂದಿನ ಹಂತಕ್ಕೆ ಕೊಂಡೊಯ್ಯುವ ಹೊಣೆ

   ಈ ಬಾರಿ ಯೋಗದ ಉದ್ದೇಶ ಶಾಂತಿ, ಸದ್ಭಾವ ಮತ್ತು ಸಮೃದ್ಧಿಗಾಗಿ ಆಗಿರಲಿ. ಯೋಗ ಪ್ರತಿಯೊಬ್ಬರ ಬದುಕಿನ ಜೀವನ ವಿಧಾನವಾಗಲಿ. ಯೋಗ ನಮ್ಮೆಲ್ಲರ ಆರೋಗ್ಯಕ್ಕೆ ಅಗತ್ಯ ಎಂಬುದನ್ನು ನಾವು ಬಲ್ಲೆವು. ಅದು ನಮ್ಮ ಸಂಸ್ಕೃತಿಯ ಭಾಗವಾಗಿದೆ. ಆದರೆ ಇದೀಗ ಅದನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಜವಾಬ್ದಾರಿ ನಮ್ಮ ಮೇಲಿದೆ - ನರೇಂದ್ರ ಮೋದಿ

   English summary
   Prime minister Narendra Modi in Ranchi while addressing international Yoga Day on June 21, said, I urge you all to embrace yoga and make it an integral part of your daily routine
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X