ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾರ್ಖಂಡ್‌ನಲ್ಲಿ ದುಪ್ಪಟ್ಟು ರೂಪಾಂತರದ ಕೋವಿಡ್ ಸೋಂಕು ಪತ್ತೆ

|
Google Oneindia Kannada News

ರಾಂಚಿ, ಏಪ್ರಿಲ್ 14: ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಏರಿಕೆಯಾಗುತ್ತಿರುವ ಬೆನ್ನಲ್ಲೇ ದೇಶದಲ್ಲಿ ಮತ್ತೊಂದು ಆತಂಕ ಶುರುವಾಗಿದೆ. ಕೋವಿಡ್-19ಕ್ಕೆ ಕಾರಣವಾಗುವ ಸಾರ್ಸ್-ಕೋವ್-2 ವೈರಸ್‌ನ 'ದುಪ್ಪಟ್ಟು ರೂಪಾಂತರಿ ವೈರಸ್' ಜಾರ್ಖಂಡ್‌ನಲ್ಲಿ ಪತ್ತೆಯಾಗಿದೆ.

ರಾಜ್ಯದ ನಾಲ್ಕು ಕೋವಿಡ್ ಮಾದರಿಗಳಲ್ಲಿ ದುಪ್ಪಟ್ಟು ರೂಪಾಂತರದ ಸೋಂಕು ಕಂಡುಬಂದಿರುವುದರಿಂದ, ಕೋವಿಡ್ ನಿಯಂತ್ರಣ ಮಾರ್ಗಸೂಚಿಗಳು ಮತ್ತು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಲ್ಲಿನ ಸರ್ಕಾರ ಜನರಿಗೆ ಮನವಿ ಮಾಡಿದೆ.

ಮಾಜಿ ಯೋಧನ ಪ್ರಾಣ ಕಸಿದುಕೊಂಡಿತು ಆರೋಗ್ಯ ಸಚಿವರ ಆಸ್ಪತ್ರೆ ಭೇಟಿ ಕಾರ್ಯಕ್ರಮಮಾಜಿ ಯೋಧನ ಪ್ರಾಣ ಕಸಿದುಕೊಂಡಿತು ಆರೋಗ್ಯ ಸಚಿವರ ಆಸ್ಪತ್ರೆ ಭೇಟಿ ಕಾರ್ಯಕ್ರಮ

ಜಾರ್ಖಂಡ್ ಒಟ್ಟು 52 ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್‌ಗಾಗಿ ಭುವನೇಶ್ವರದ ಜೀವವಿಜ್ಞಾನಗಳ ಸಂಸ್ಥೆಗೆ ರವಾನಿಸಲಾಗಿತ್ತು. ಇವುಗಳ ಪೈಕಿ 39 ಮಾದರಿಗಳನ್ನು ಡಿಎನ್‌ಎ ಹೊಂದಾಣಿಕೆಗೆ ಆಯ್ಕೆ ಮಾಡಲಾಗಿದೆ. ಈ 39 ಮಾದರಿಗಳಲ್ಲಿ ಒಂಬತ್ತು ಮಾದರಿಗಳು ಬ್ರಿಟನ್ ರೂಪಾಂತರಿ ತಳಿಗಳನ್ನು ಹೊಂದಿರುವುದು ಪತ್ತೆಯಾಗಿದ್ದರೆ, ಇನ್ನು ನಾಲ್ಕು ಮಾದರಿಗಳು ದುಪ್ಪಟ್ಟು ರೂಪಾಂತರ ತಳಿಯದ್ದು ಎನ್ನುವುದು ದೃಢಪಟ್ಟಿದೆ.

 Four Samples From Jharkhand Found Infected With Double Mutant Strains Of Covid-19

ಬ್ರಿಟನ್ ರೂಪಾಂತರಿಗಳಲ್ಲಿ ಎಂಟು ಮಾದರಿಗಳು ರಾಂಚಿ ಜಿಲ್ಲೆಯದ್ದಾಗಿದ್ದರೆ, ಒಂದು ಪೂರ್ವ ಸಿಂಗ್‌ಭೂಮ್ ಜಿಲ್ಲೆಯದ್ದಾಗಿದೆ. ಬ್ರಿಟನ್ ರೂಪಾಂತರ ಸೋಂಕು ಕಳೆದ ಕೆಲವು ತಿಂಗಳ ಹಿಂದೆ ಭಾರತದಲ್ಲಿ ಪತ್ತೆಯಾಗಿದ್ದರೆ, ಹೊಸ ದುಪ್ಪಟ್ಟು ರೂಪಾಂತರ ತಳಿಗಳು ಇತ್ತೀಚೆಗೆ ಪತ್ತೆಯಾಗಿದ್ದವು.

ಹೊಸ ರೂಪಾಂತರವು ಜಾರ್ಖಂಡ್ ಸೇರಿದಂತೆ ಕನಿಷ್ಠ 18 ರಾಜ್ಯಗಳಲ್ಲಿ ವರದಿಯಾಗಿವೆ. ಈ ರೂಪಾಂತರವ ಮೂರು ದೇಶಗಳ ರೂಪಾಂತರಗಳಿಗಿಂತ ವಿಭಿನ್ನವಾಗಿದ್ದು, ಅವುಗಳಿಗಿಂತ ಹೆಚ್ಚು ಅಪಾಯಕಾರಿ ಎನ್ನಲಾಗಿದೆ.

English summary
Four samples from Jharkhand found infected with double mutant variant of Covid-19 virus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X