ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಮೇವು ಹಗರಣ: ಲಾಲೂ ಪ್ರಸಾದ್‌ ಯಾದವ್‌ಗೆ 5 ವರ್ಷ ಜೈಲು ಶಿಕ್ಷೆ

|
Google Oneindia Kannada News

ರಾಂಚಿ, ಫೆಬ್ರವರಿ 21: ಬಹುಕೋಟಿ ರೂಪಾಯಿ ಮೇವು ಹಗರಣದಲ್ಲಿ ದೋಷಿ ಎಂದು ಸಾಬೀತಾಗಿದ್ದ ಲಾಲೂ ಪ್ರಸಾದ್ ಯಾದವ್‌ಗೆ 5 ವರ್ಷಗಳ ಕಾಲ ಕಾರಾಗೃಹ ಶಿಕ್ಷೆ ವಿಧಿಸಿ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.

Fodder Scam Verdict : RJD supremo Lalu Prasad Yadav sentenced to 5 Years in Jail

ರಾಂಚಿಯ ಸಿಬಿಐ ವಿಶೇಷ ನ್ಯಾಯಾಲಯವು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ದೋಷಿ ಎಂದು ತೀರ್ಪು ನೀಡಿತ್ತು. ಸಿಬಿಐ ವಿಶೇಷ ನ್ಯಾಯಾಲಯ ಮುಂದೆ ವಿಚಾರಣೆಗೆ ಲಾಲೂ ಪ್ರಸಾದ್ ಯಾದವ್ ಆಗಮಿಸಿದ್ದರು.
ಇಂದು ಶಿಕ್ಷೆ ಪ್ರಕಟವಾಗಿದ್ದು, ಅವರಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಲಾಗಿದೆ.

ಮೇವು ಹಗರಣ 5ನೇ ಕೇಸ್: ಲಾಲೂ ಪ್ರಸಾದ್ ಯಾದವ್ ತಪ್ಪಿತಸ್ಥಮೇವು ಹಗರಣ 5ನೇ ಕೇಸ್: ಲಾಲೂ ಪ್ರಸಾದ್ ಯಾದವ್ ತಪ್ಪಿತಸ್ಥ

ಮೇವು ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಐದನೇ ಮತ್ತು ಅಂತಿಮ ತೀರ್ಪು ನೀಡಿದ ರಾಂಚಿ ವಿಶೇಷ ಸಿಬಿಐ ನ್ಯಾಯಾಲಯ ಇತರ 75 ಆರೋಪಿಗಳೊಂದಿಗೆ ಅವರನ್ನು ದೋಷಿ ಎಂದು ತೀರ್ಪು ನೀಡಿತ್ತು.. ಸಿಬಿಐ ವಿಶೇಷ ನ್ಯಾಯಾಧೀಶ ಎಸ್‌ಕೆ ಶಶಿ ಅವರು 6 ಮಹಿಳೆಯರು ಸೇರಿದಂತೆ 24 ಆರೋಪಿಗಳನ್ನು ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲದ ಕಾರಣ ಖುಲಾಸೆಗೊಳಿಸಲಾಗಿತ್ತು.

ಲಾಲೂ ಪ್ರಸಾದ್ ಯಾದವ್ ಅವರಿಗೆ ಶಿಕ್ಷೆಯ ಪ್ರಮಾಣವನ್ನು ಫೆಬ್ರವರಿ 18 ರಂದು ಘೋಷಿಸಲಾಗುವುದು ಎಂದು ನ್ಯಾಯಾಲಯ ಇಂದು ತೀರ್ಪು ವೇಳೆ ಪ್ರಕಟಿಸಿತ್ತು.

ಮೇವು ಹಗರಣದ ಇತರ ನಾಲ್ಕು ಪ್ರಕರಣಗಳಲ್ಲಿ ಈಗಾಗಲೇ ಶಿಕ್ಷೆಗೊಳಗಾದ ಲಾಲೂ ಪ್ರಸಾದ್ ಯಾದವ್ ಐದನೇ ಮತ್ತು ಅಂತಿಮ ಪ್ರಕರಣದಲ್ಲಿ ಆರೋಪಿಯಾಗಿದ್ದರು. ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಭೌತಿಕವಾಗಿ ಹಾಜರಾಗಲು ರಾಂಚಿಗೆ ಆಗಮಿಸಿದ್ದರು.

ಕಳೆದ ಜನವರಿ 29ರಂದು ಲಾಲೂ ಪ್ರಸಾದ್ ಯಾದವ್ ಅವರನ್ನು ಒಳಗೊಂಡಿರುವ 139.35 ಕೋಟಿ ರೂಪಾಯಿ ಡೊರಾಂಡಾ ಖಜಾನೆ ಅವ್ಯವಹಾರ ಪ್ರಕರಣದ ವಾದಗಳನ್ನು ಆಲಿಸಿದ ನ್ಯಾಯಾಲಯ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ವಿಶೇಷ ಸಿಬಿಐ(ಕೇಂದ್ರ ತನಿಖಾ ದಳ)ನ್ಯಾಯಾಧೀಶ ಎಸ್ ಕೆ ಶಶಿ ಅವರು ಪ್ರಸಾದ್ ಸೇರಿದಂತೆ 99 ಆರೋಪಿಗಳ ವಿರುದ್ಧ ಕಳೆದ ವರ್ಷ ಫೆಬ್ರವರಿಯಿಂದ ಕೈಗೊಂಡಿದ್ದ ವಿಚಾರಣೆಯನ್ನು ಇದೀಗ ಪೂರ್ಣಗೊಳಿಸಲಾಗಿತ್ತು.

ಕೊನೆಯ ಆರೋಪಿ ಶೈಲೇಂದ್ರ ಕುಮಾರ್ ಪರವಾಗಿ ಜನವರಿ 29ರಂದು ವಾದವನ್ನು ಪೂರ್ಣಗೊಳಿಸಲಾಯಿತು. ತೀರ್ಪಿನ ದಿನದಂದು ಎಲ್ಲಾ ಆರೋಪಿಗಳನ್ನು ನ್ಯಾಯಾಲಯದಲ್ಲಿ ಭೌತಿಕವಾಗಿ ಹಾಜರುಪಡಿಸಲು ಆದೇಶಿಸಲಾಗಿತ್ತು.

English summary
Former Bihar CM Lalu Prasad Yadav has been sentenced to five years in prison in the Doranda treasury case related to the fodder scam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X