• search
  • Live TV
ರಾಂಚಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹಣೆಗೆ ಗನ್ ಇಟ್ಟು ಎಳೆದೊಯ್ದು ಯುವತಿಯ ಅತ್ಯಾಚಾರ: ಐವರ ಬಂಧನ

|

ಜಾರ್ಖಂಡ್, ಅಕ್ಟೋಬರ್ 10: ಜಾರ್ಖಂಡ್‌ನಲ್ಲಿ ನಡೆದ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಾಗ್‌ಬೆರಾ ಪ್ರದೇಶದಲ್ಲಿ ಆಕೆ ಸ್ನೇಹಿತರೊಂದಿಗೆ ಇರುವಾಗ ಆಕೆ ಹಣೆಗೆ ಗನ್ ಇಟ್ಟು ಅಪಹರಣ ಮಾಡಿದ್ದರು ಎಂದು ಎಸ್‌ಪಿ ತಿಳಿಸಿದ್ದಾರೆ.

ಹತ್ರಾಸ್: ಸಂಬಂಧಿಯಿಂದ ಅತ್ಯಾಚಾರಕ್ಕೊಳಗಾಗಿದ್ದ 4 ವರ್ಷದ ಬಾಲಕಿ ಸಾವು ಹತ್ರಾಸ್: ಸಂಬಂಧಿಯಿಂದ ಅತ್ಯಾಚಾರಕ್ಕೊಳಗಾಗಿದ್ದ 4 ವರ್ಷದ ಬಾಲಕಿ ಸಾವು

ಸಂತ್ರಸ್ತೆಯ ಕೈಕಾಲು ಕಟ್ಟಿ ಹಾಕಿ ಅತ್ಯಾಚಾರವೆಸಗಿದ್ದರು. ಅತ್ಯಾಚಾರವೆಸಗಿದ್ದ ಐವರನ್ನು ಜೈಲಿಗೆ ಅಟ್ಟಿದ್ದಾರೆ. ಆರೋಪಿಗಳನ್ನು ಶಂಕರ್, ರೋಷನ್, ಸೂರಜ್, ಸನ್ನಿ ಎಂದು ಗುರುತಿಸಲಾಗಿದೆ.

ಘಟನೆ ನಡೆದು ಕೆಲ ಗಂಟೆಗಳಲ್ಲೇ ಎಫ್‌ಐಆರ್ ದಾಖಲಿಸಲಾಗಿತ್ತು. ಹಾಗೆಯೇ ತನಿಖೆಯೂ ಆರಂಭವಾಗಿತ್ತು. ಡ್ಯಾನ್ಸ್ ಕ್ಲಾಸ್‌ನಿಂದ ಹಿಂದಿರುಗುವಾಗ ಘಟನೆ ನಡೆದಿತ್ತು.
ಪಿಸ್ತೂಲು ಹಾಗೂ ಎರಡು ಸಜೀವ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸೆಪ್ಟೆಂಬರ್ 14ರಂದು ಹತ್ರಾಸ್‌ನಲ್ಲಿ ತಾಯಿ ಜತೆ ಹೊಲಕ್ಕೆ ಹುಲ್ಲು ತರಲೆಂದು ಹೋದಾಗ ನಾಲ್ಕು ಮಂದಿ ಆಕೆಯನ್ನು ಎಳೆದೊಯ್ದು ಅತ್ಯಾಚಾರವೆಸಗಿದ್ದರು.

ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಳು.ಬಳಿಕ ಸಂತ್ರಸ್ತೆಯ ಮುಖವನ್ನು ಪೋಷಕರಿಗೆ ತೋರಿಸದೆ ಗುಟ್ಟಾಗಿ ಪೊಲೀಸರು ಮಧ್ಯರಾತ್ರಿ 2.30ಕ್ಕೆ ಅಂತ್ಯಕ್ರಿಯೆ ನಡೆಸಿದ್ದರು. ಇದೀಗ ಇಡೀ ದೇಶದಾದ್ಯಂತ ಪೊಲೀಸರ ಈ ಕ್ರಮದ ವಿರುದ್ಧ ಆಕ್ರೋಶ ಭುಗಿಲೆದ್ದಿದೆ.

English summary
Five people have been arrested for allegedly raping a 17-year-old girl in Jharkhand's Jamshedpur, the police said today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X