• search
 • Live TV
ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಮನಗರ: ನಡುರಾತ್ರಿ ಪೋನ್ ಮಾಡಿ ಕರೆದು ಗೆಳೆಯನನ್ನು ಇರಿದು ಕೊಂದ ಸ್ನೇಹಿತರು

By ರಾಮನಗರ ಪ್ರತಿನಿಧಿ
|

ರಾಮನಗರ, ಸೆಪ್ಟೆಂಬರ್ 18: ತಡರಾತ್ರಿ ಗೆಳೆಯನಿಗೆ ಪೋನ್ ಮಾಡಿ ಕರೆದು ಕ್ಷುಲ್ಲಕ ಕಾರಣಕ್ಕೆ ಇರಿದು ಕೊಂದ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ನಡೆದಿದೆ.

ಕೊಲೆ ಮಾಡಿದ ಸ್ನೇಹಿತರನ್ನು ಘಟನೆ ನಡೆದ ಕೆಲ ಗಂಟೆಗಳಲ್ಲಿ ಬಂಧಿಸುವಲ್ಲಿ ಚನ್ನಪಟ್ಟಣ ಪೊಲೀಸರು ಯಶಸ್ವಿಯಾಗಿದ್ದಾರೆ. ಚನ್ನಪಟ್ಟಣದ ಸಯ್ಯದ್ ವಾಡಿ ನಿವಾಸಿ ರಾಹಿಬ್ ಪಾಷಾ (25) ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರಿಂದ ಕೊಲೆಯಾದ ವ್ಯಕ್ತಿಯಾಗಿದ್ದಾನೆ.

ನಾಪತ್ತೆಯಾದ ಮಗುವಿನ ಪತ್ತೆಗೆ 1 ಲಕ್ಷ ರುಪಾಯಿ ಬಹುಮಾನ ಘೋಷಣೆ ಮಾಡಿದ ಪೋಷಕರು

ಇನ್ನು ಟಿಪ್ಪು ನಗರ ನಿವಾಸಿಗಳಾದ ವಲಿ, ಮುನೀರ್ ಹಾಗೂ ಜುಬೇರ್ ಮೂವರು ಮೃತನಿಗೆ ಪೋನ್ ಮಾಡಿ ಕರೆಸಿಕೊಂಡು ನಗರದ ಸಾತನೂರು ರಸ್ತೆಯ ಕಣ್ವ ವಸತಿ ಬಡಾವಣೆಯಲ್ಲಿ ಜಾಕುವಿನಿಂದ ಇರುದು ಬೀಕರವಾಗಿ ಹತ್ಯೆ ಮಾಡಿದ್ದಾರೆ.

   Air ಇಂಡಿಯಾಗೆ ಗ್ರಾಹಕರಿಗೆ ದೊಡ್ಡ shock | Oneindia Kannada

   ತಡ ರಾತ್ರಿ ಘಟನೆ ನಡೆದ ಕೆಲ ಗಂಟೆಗಳಲ್ಲೆ ಮೂರು ಆರೋಪಿಗಳನ್ನು ಬಂಧಿಸಿರುವ ಗ್ರಾಮಾಂತರ ಠಾಣೆಯ ಪೊಲೀಸರು, ಆರೋಪಿಗಳ ವಿರುದ್ಧ ಕಲಂ 302, ಜೊತೆಗೆ 34 ಐಪಿಸಿ ರೀತಿಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಇನ್ನೂ ತನಿಖೆ ಪ್ರಗತಿಯಲ್ಲಿದ್ದು, ಕೃತ್ಯಕ್ಕೆ ನಿಖರ ಕಾರಣ ಇನ್ನಷ್ಟೇ ತಿಳಿಯಬೇಕಿದೆ.

   English summary
   Youth stabbed to death Their Friend in Channapattana, Ramanagara District.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X