ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮನಗರ: ಗ್ರಾ.ಪಂ ಚುನಾವಣೆ ಬಹಿಷ್ಕರಿಸಿದ ಸೌಲಭ್ಯ ವಂಚಿತ ಗ್ರಾಮಸ್ಥರು

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಡಿಸೆಂಬರ್ 15: ತಮ್ಮ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳನ್ನು ನೀಡದಿರುವುದನ್ನು ಖಂಡಿಸಿ ಜನರು ಗ್ರಾಮ ಪಂಚಾಯತಿ ಚುನಾವಣೆಯನ್ನೇ ಬಹಿಷ್ಕಾರ ಮಾಡಿರುವ ಘಟನೆ ರಾಮನಗರ ತಾಲ್ಲೂಕಿನ ಯರೇಹಳ್ಳಿ ಗ್ರಾಮದಲ್ಲಿ ನಡೆದಿದೆ.

ರಾಮನಗರ ತಾಲ್ಲೂಕಿನ ಕೂಟಗಲ್ ಹೋಬಳಿಯ ಯರೇಹಳ್ಳಿ ಗ್ರಾಮದ ಜನರು ಗ್ರಾಮ ಪಂಚಾಯತಿ ಚುನಾವಣೆಯನ್ನು ಬಹಿಷ್ಕಾರ ಮಾಡುವ ಮೂಲಕ ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯದ ವಿರುದ್ಧ ಪ್ರತಿಭಟಿಸಿದ್ದಾರೆ.

 Ramanagara: Yarehalli Villagers Decided To Boycott Gram Panchayat Election

ಇಬ್ಬರು ದೇವಸ್ಥಾನ ಕಳ್ಳರ ಬಂಧನ: 40 ಗ್ರಾ ಚಿನ್ನ, 1.5 ಕೆಜಿ ಬೆಳ್ಳಿ ವಶ ಇಬ್ಬರು ದೇವಸ್ಥಾನ ಕಳ್ಳರ ಬಂಧನ: 40 ಗ್ರಾ ಚಿನ್ನ, 1.5 ಕೆಜಿ ಬೆಳ್ಳಿ ವಶ

ಯರೇಹಳ್ಳಿ ಗ್ರಾಮದ ಕೊನೆ ಬೀದಿಯ ಜನರು ತಮ್ಮ ಬೀದಿಗೆ ರಸ್ತೆ ನಿರ್ಮಾಣ ಹಾಗೂ ಮೂಲ ಸೌಕರ್ಯಗಳನ್ನು ನೀಡುವಲ್ಲಿ ನಿರ್ಲಕ್ಷ್ಯ ಮಾಡಿದ ಗ್ರಾಮ ಪಂಚಾಯತಿ ವಿರುದ್ಧ ಸಿಡಿದೆದ್ದ ಜನರು, ತಮ್ಮ ವಾರ್ಡ್ ಚುನಾವಣೆಯನ್ನು ಬಹಿಷ್ಕಾರ ಮಾಡಿರುವ ಬಗ್ಗೆ ಗೋಡೆ ಮೇಲೆ ಚೀಟಿ ಅಂಟಿಸಿದ್ದಾರೆ.

 Ramanagara: Yarehalli Villagers Decided To Boycott Gram Panchayat Election

Recommended Video

ಸಂಜನಾಗೆ ಜಾಮೀನು, ರಾಗಿಣಿಗೆ ತಪ್ಪದ ಟೆನ್ಷನ್ -ಸಿಸಿಬಿ ಜಂಟಿ ಆಯುಕ್ತರ ಭೇಟಿಯಾದ ರಾಗಿಣಿ ಪೋಷಕರು | Oneindia Kannada

ಗೋಡೆಗೆ ಅಂಟಿಸಿರುವ ಪ್ರಕಟಣೆಯಲ್ಲಿ ಯರೇಹಳ್ಳಿ ಗ್ರಾಮದ ಕೊನೆಯ ಬೀದಿಗೆ ರಸ್ತೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ನಿರ್ಮಾಣ ಮಾಡುವವರೆಗೆ ಗ್ರಾಮ ಪಂಚಾಯತಿ ಚುನಾವಣೆಯನ್ನು ಬಹಿಷ್ಕಾರಿಸಿದ್ದೇವೆ ಎಂದು ತಮ್ಮ ಪ್ರಕಟಣೆಯಲ್ಲಿ ಗ್ರಾಮಸ್ಥರು ಸ್ಪಷ್ಟಪಡಿಸಿದ್ದಾರೆ.

English summary
The people of Yarehalli village of Kootagal hobali in Ramanagar taluk have protested against of the local people's representatives by boycotting the gram panchayat elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X